ಕುಶಾಲನಗರ, ಜ. 10: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರÀ ಮೆರವಣಿಗೆ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಕ್ಷರ ಜಾತ್ರೆಯ ಸಾರಥ್ಯ ವಹಿಸಿದ ಸಮ್ಮೇಳನಾಧ್ಯಕ್ಷ ಎಸ್.ಸಿ. ರಾಜಶೇಖರ್ ಅವರು ಕೊಪ್ಪ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಕೊಡಗು ಜಿಲ್ಲಾಧಿಕಾರಿಗಳಾದ ರಿಚರ್ಡ್ ವಿನ್ಸೆಂಟ್ ಡಿಸೋಜ ಮೆರವಣಿಗೆಗೆ ಚಾಲನೆ ನೀಡಿದರು.ಅದ್ಧೂರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ 1 ಸಾವಿರ ಅಡಿ ಉದ್ದದ ಕನ್ನಡ ಧ್ವಜವನ್ನು ಹಿಡಿದ ಸುಮಾರು 500 ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆಯುದ್ದಕ್ಕೂ ಸಾಗಿಬಂತು.

ಸಮ್ಮೇಳನಾಧ್ಯಕ್ಷರಾದ ಎಸ್.ಸಿ. ರಾಜಶೇಖರ್, ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರನ್ನು ಹೊತ್ತ ತೆರೆದ ವಾಹನ ಮೆರವಣಿಗೆಯಲ್ಲಿ ಸಾಗಿಬಂತು.

ನಂದಿ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ, ದಫ್ ಕುಣಿತ, ಕೊಡವ ಸಮಾಜ, ಗೌಡ ಸಮಾಜ, ಒಕ್ಕಲಿಗರ ಯುವ ವೇದಿಕೆ, ವಿಶ್ವಕರ್ಮ ಸಮಾಜಗಳ ಟ್ಯಾಬ್ಲೋ, ಕೇರಳ ಸಮಾಜದ ಚಂಡೆ ವಾದ್ಯ, ಸುಂಟಿಕೊಪ್ಪ ತಲೆಹೊರೆ ಕಾರ್ಮಿಕರ ಸಂಘದ ಕನ್ನಡಾಂಭೆ, ಆಟೋ ಚಾಲಕರ ಮಾಲೀಕರ ಸಂಘದಿಂದ ಅಲಂಕೃತ ಆಟೋ, ನಾಸಿಕ ಬ್ಯಾಂಡ್ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು. ಇದರೊಂದಿಗೆ ಕುಶಾಲನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ ಗಳು, ವನಪಾಲಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು

(ಮೊದಲ ಪುಟದಿಂದ) ಕನ್ನಡ ಘೋಷಣೆಗಳನ್ನು ಕೂಗಿದರು.

ಬೆಳಿಗ್ಗೆ 9.45 ಕ್ಕೆ ಆರಂಭಗೊಂಡ ಮೆರವಣಿಗೆ 1.5 ಕಿಮೀ ರಾಜ್ಯ ಹೆದ್ದಾರಿಯಲ್ಲಿ ಸಾಗಿಬಂದು 11 ಗಂಟೆಗೆ ವೇದಿಕೆ ಬಳಿ ತಲಪಿತು.

ಮೆರವಣಿಗೆ ಆರಂಭಕ್ಕೂ ಮೊದಲು ಧ್ವಜಾರೋಹಣ ಕಾರ್ಯ ಕ್ರಮದೊಂದಿಗೆ ಪಟ್ಟಣದಲ್ಲಿ ಅಳವಡಿಸಲಾಗಿದ್ದ ಪ್ರಮುಖ 5 ದ್ವಾರಗಳನ್ನು ಗಣ್ಯರು ಉದ್ಘಾಟಿಸಿದರು. ರಾಷ್ಟ್ರಧ್ವಜವನ್ನು ಸೋಮವಾರಪೇಟೆ ತಹಶೀಲ್ದಾರ್ ಜಿ.ಎಸ್. ಕೃಷ್ಣ ಆರೋಹಣ ಮಾಡಿದರೆ, ಪರಿಷತ್‍ನ ಧ್ವಜವನ್ನು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮತ್ತು ನಾಡಧ್ವಜವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಆರೋಹಣ ಮಾಡಿದರು.

ಪಟ್ಟಣದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದ್ವಾರ, ವರದರಾಜಶ್ರೇಷ್ಠಿ ದ್ವಾರ, ಚಿಕ್ಕಣ್ಣ ದ್ವಾರ, ಗುಡ್ಡೆಮನೆ ಅಪ್ಪಯ್ಯದ್ವಾರ ಮತ್ತು ವಿ.ಎಸ್. ರಾಮಕೃಷ್ಣ ಮಹಾದ್ವಾರಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳು ಉದ್ಘಾಟಿಸಿದರು

ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಕುಶಾಲನಗರ ಪ.ಪಂ. ನಾಮ ನಿರ್ದೇಶಿತ ಸದಸ್ಯÀ ನಂಜುಂಡಸ್ವಾಮಿ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟ ಗಾರಿಕೆ ಇಲಾಖೆಯ ಮಳಿಗೆಗಳು ಸೇರಿದಂತೆ ವಿವಿಧ ಪ್ರಕಾಶಕರ ಪುಸ್ತಕ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸುದ್ದಿಮನೆ ಉದ್ಘಾಟನೆಯನ್ನು ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ನೆರವೇರಿಸಿದರು. ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.