ಸೋಮವಾರಪೇಟೆ, ಡಿ. 24: ತಾಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ಶಾಲೆಯಲ್ಲಿ ಮಕ್ಕಳ ಪ್ರತಿಭಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ಹಾಗೂ 5 ರಿಂದ 10ನೇ ತರಗತಿ ಮಕ್ಕಳಿಗೆ ಪುಷ್ಪ ಸ್ಪರ್ಧೆ ಏರ್ಪಡಿಸ ಲಾಗಿತ್ತು. 1ನೇ ತರಗತಿಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಾರ್ಥನಾ ಮತ್ತು ಪ್ರತೀಕ್ ಪ್ರಥಮ, ಅನಿಸ್ ಮತ್ತು ಮೋಹಿತ್ ದ್ವಿತೀಯ, ಉನ್ನತಿ ಮತ್ತು ಪ್ರಥಮ್ ತೃತೀಯ ಸ್ಥಾನಗಳಿಸಿದರು. 2ನೇ ತರಗತಿಯಲ್ಲಿ ತನುಷ್ ಪ್ರಥಮ, ತ್ರಿಶಾಲ್ ದ್ವಿತೀಯ, ಸಾಹಿತ್ಯ ತೃತೀಯ ಸ್ಥಾನಪಡೆದರು. 3ನೇ ತರಗತಿಯ ರೋಹನ್ ಪ್ರಥಮ, ಜೀವಿತ ದ್ವಿತೀಯ, ವಿದ್ಯಾಗೌರಿ ತೃತೀಯ, ನಾಲ್ಕನೆ ತರಗತಿ ಪವನ್ ಪ್ರಥಮ, ವಚನ್ ಮತ್ತು ವೈ.ಎಸ್. ಧನ್ಯ ದ್ವಿತೀಯ ಸ್ಥಾನ ಪಡೆದರು. ವಿದ್ಯಾರ್ಥಿಗಳಾದ ಮಹರ್ಷಿ, ಮೇಘನ ಗೌಡ, ಸುಹಾಸ್ ಸಮಾಧಾನಕರ ಬಹುಮಾನ ಪಡೆದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಇದ್ದರು. ಮುಖ್ಯೋಪಾ ಧ್ಯಾಯರಾದ ಮಿಲ್ಗ್ರೆಡ್ ಗೋಲ್ಸಾಲ್ವೆಸ್ ಕಾರ್ಯಕ್ರಮ ನಿರ್ವಹಿಸಿದರು.