ವೀರಾಜಪೇಟೆ, ಡಿ. 2: ವೀರಾಜಪೇಟೆ ನಗರ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಪಟ್ಟಣ ಪಂಚಾಯಿತಿ ಮುಂದೆ ನಡೆದ ಪ್ರತಿಭಟನೆ ಹಾಗೂ ಆರೋಪಗಳೆಲ್ಲ ಆಧಾರ ರಹಿತವಾದುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯ ಲ್ಲಿರುವ 118 ಮಳಿಗೆಗಳನ್ನು ಹರಾಜು ನಡೆಸಲು ನಾವು ಸಿದ್ದರಿದ್ದೇವೆ. ಆದರೆ ಮಳಿಗೆಗಳು ಸಂಪೂರ್ಣ ಶಿಥಿಲಾ ವಸ್ಥೆಗೆ ಬಂದ ಕಾರಣ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ವ ಸದಸ್ಯರು ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ 19ಮಂದಿ ಸದಸ್ಯರು ಸಮ್ಮತ್ತಿಸಿದ್ದಾರೆ. ಸರ್ಕಾರ ದಿಂದ ಅಭಿವೃದ್ಧಿ ಕಾರ್ಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬರುತ್ತಿಲ್ಲ. ಹಿಂದಿನ ಸಾಲಿನಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಲಾಗುತ್ತಿದೆ. ಕಳೆದ ಎರಡು ವರ್ಷದಿಂದ ಶುಚಿತ್ವದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ವಿನಾ ಕಾರಣ ಈಗಿನ ಪಟ್ಟಣ ಪಂಚಾಯಿತಿ ಸದಸ್ಯರ ಮೇಲೆ ಆರೋಪಗಳನ್ನು ಮಾಡುವದರಿಂದ ಏನನ್ನೂ ಸಾಧನೆ ಮಾಡಿದಂತಾಗು ವದಿಲ್ಲ ಎಂದರು.

ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮಾತನಾಡಿ, ಮಳೆಯ ಕೊರತೆಯಿಂದ ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ಪಟ್ಟಣದಲ್ಲಿ ಅಂತಹ ಸ್ಥಿತಿ ಉದ್ಭವವಾಗಿಲ್ಲ. ಬೆಟ್ಟ ಪ್ರದೇಶಗಳಿಗೆ ಸರಾಗವಾಗಿ ನೀರಿನ ಸರಬರಾಜಾಗು ತ್ತಿದೆ. ವಿದ್ಯುತ್ ವ್ಯತ್ಯಯ ಹಾಗೂ ತಾಂತ್ರಿಕ ತೊಂದರೆಗಳಿಂದ ನೀರಿನ ಅಡಚಣೆ ಉಂಟಾಗಿರಬಹುದೇ ಹೊರತು ಇನ್ಯಾವದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

ಸದಸ್ಯ ಇ.ಸಿ ಜೀವನ್ ಮಾತನಾಡಿ, ಕಾಂಗ್ರೆಸ್‍ನ ಒಳ ಗುಂಪುಗಾರಿಕೆಯನ್ನು ಬೀದಿಗೆ ತಂದು ಪಟ್ಟಣ ಪಂಚಾಯಿತಿಯ ಮೇಲೆ ಗೂಬೆ ಕೂರಿಸುವ ಹುನ್ನಾರವನ್ನು ಮಾಡಲಾಗುತ್ತಿದೆ. ಹಿಂದಿನ ಅಧ್ಯಕ್ಷ ಸತೀಶ್ ಕುಮಾರ್ ಅವರ ಆಡಳಿತದಲ್ಲಿ ಸುಣ್ಣದ ಬೀದಿ ಕಾಂಕ್ರಿಟ್ ರಸ್ತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾಗಿದ್ದ ಕಂಪ್ಯೂಟರ್ ಹಗರಣ ಇವೆಲ್ಲವನ್ನು ಪ್ರಶ್ನೆ ಮಾಡುತ್ತಿಲ್ಲ. ಪಟ್ಟಣ ಶುಚಿತ್ವ ಹಾಗೂ ಅಭಿವೃದ್ಧಿ ಸಹಿಸದೆ ಹತಾಶರಾಗಿರುವ ಕಾಂಗ್ರೆಸ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು. ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನೀತಾ ಮಾತನಾಡಿ, ಆಸ್ಪತ್ರೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದ ಕಾರಣ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸ ಲಾಗಿದ್ದು, ಮುಂದಿನ ಅನುದಾನದಲ್ಲಿ ಡಾಂಬರೀಕರಣ ಮಾಡಲಾಗುವದು ಎಂದು ಹೇಳಿದರು. ಗೋಷ್ಠಿಯಲ್ಲಿ ಸದಸ್ಯರಾದ ಟಿ.ಜೆ ಶಂಕರ್, ಸರಿತಾ ಉಪಸ್ಥಿತರಿದ್ದರು.