ಸೋಮವಾರಪೇಟೆ, ಅ. 26: ಐಪಿಎಲ್ ಬೆಟ್ಟಿಂಗ್ ದಂಧೆಗೆ ತಾಲೂಕಿನ ಶನಿವಾರಸಂತೆ ಸಮೀಪದ ಬಿಳಹ ಗ್ರಾಮದ ಅವಿವಾಹಿತ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂಪಾಯಿ ಪಾವತಿಸಬೇಕಾದ ಈತ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರಸಂತೆ ಸಮೀಪದ ಬಿಳಹ ಗ್ರಾಮದ ಶಂಕರಪ್ಪ ಮತ್ತು ಪಾರ್ವತಿ ದಂಪತಿ ಪುತ್ರ ಮೋಹನ್ (26) ಎಂಬ ಯುವಕನೇ ಐಪಿಎಲ್ ಬೆಟ್ಟಿಂಗ್ ದಂಧೆಗೆ ಪ್ರಾಣ ತ್ಯಜಿಸಿದವನಾಗಿದ್ದು, ಇವನಿಗೆ ಕಿರುಕುಳ