ಮಡಿಕೇರಿ, ನ. 18: ಆರ್.ಎಸ್.ಎಸ್. ಮುಖಂಡ ಪದ್ಮನಾಭ ಅವರ ಕಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಮೂಲಕ ಧಾಳಿ ಮಾಡಿದ ಘಟನೆ ಸಂಬಂಧ ವಿಧಾನ ಪರಿಷತ್ ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಪದ್ಮನಾಭರವರ ನಿವಾಸಕ್ಕೆ ಭೇಟಿ ನೀಡಿ, ಘಟನೆಯ ಪೂರ್ಣ ಮಾಹಿತಿ ಪಡೆದರು. ಇತ್ತಿಚಿನ ದಿನಗಳಲ್ಲಿ ರಾಜ್ಯದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ವಿನಾಃಕಾರಣ ಹಲ್ಲೆ, ಕೊಲೆ, ಜೀವ ಬೆದರಿಕೆಗಳಾಗುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಕೊಡಗು ಜಿಲ್ಲೆಯ ಜನತೆ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು, ಇಂತಹ ಘಟನೆÉಗಳಿಂದ ಜಿಲ್ಲೆಯ ಜನತೆ ವಿಚಲಿತರಾಗಿದ್ದು, ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವಿಸುವಂತಾಗಿದೆ. ಈ ಎಲ್ಲಾ ದುಷ್ಕೃತ್ಯಗಳ ಹಿಂದೆ ಕೇರಳದಿಂದ ಬಂದ ನಿಗೂಢ ಮಾಫಿಯಾದ ಕೈವಾಡ ಇದೆ. ಕೇರಳದಿಂದ ಸಲೀಸಾಗಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಜಿಲ್ಲೆಯ ಮೂಲಕ ರಾಜ್ಯಕ್ಕೆ ಸರಬರಾಜು ಮಾಡುತ್ತಿರುವ ಬಗ್ಗೆ ಸಂಶಯವಿದೆ. ಕಳೆದ 2 ವರ್ಷಗಳಿಂದ ಜಿಲ್ಲೆಯ ಜನರ ಜೀವದ ಜೊತೆ ಆಟವಾಡುತ್ತಿರುವದು ಕಂಡುಬಂದಿದೆ. ಇದನ್ನು ಹತ್ತಿಕ್ಕಲು ಜಿಲ್ಲಾ ಪೆÇಲೀಸ್ ಇಲಾಖೆ ಕಠಿಣ ಕ್ರಮ ವಹಿಸಬೇಕು. ಕೇರಳದಿಂದ ಬರುವವರ ಸೂಕ್ತ ತಪಾಸಣೆ, ಗುರುತಿಸುವಿಕೆ ಆಗಬೇಕು. ಇಂತಹ ದುಷ್ಕೃತ್ಯ ಎಸಗುವ ಸಂಘಟನೆಗಳನ್ನು ಹತ್ತಿಕ್ಕಿ, ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧಿಸಬೇಕು. ಕೊಡಗು ಜಿಲ್ಲೆಯ ಅಮಾಯಕ ಜನತೆ ಇಂತಹ ದುಷ್ಕೃತ್ಯಕ್ಕೆ ನಿರಂತರ ಬಲಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿ ಜೀವನ ನಡೆಸುವದೇ ಕಷ್ಟವಾಗಬಹುದು. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪದ್ಮನಾಭ ಅವರಿಗೆ ಸೂಕ್ತ ಪರಿಹಾರ ಹಾಗೂ ಜಿಲ್ಲೆಯ ಜನತೆಗೆ ಸೂಕ್ತ ರಕ್ಷಣೆಯನ್ನು ರಾಜ್ಯ ಸರ್ಕಾರ ನೀಡಲು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬಿಜೆಪಿ ಮುಖಂಡ ಗಿರೀಶ್ ಗಣಪತಿ ಹಾಜರಿದ್ದರು.