ನಾಪೆÇೀಕ್ಲು, ಜ. 1: ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವು ಮೂರು ದಿನಗಳ ಕಾಲ ಜರುಗಿ ಸಂಪನ್ನ ಗೊಂಡಿತು. ವೈವಿಧ್ಯಮಯ ಕಾರ್ಯಕ್ರಮ ಹಾಗೂ ಕ್ರೀಡಾಕೂಟ ಗಳು ಜನಮನ ರಂಜಿಸಿದವು. ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ರಾಮಮೂರ್ತಿ ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದರು. ಹಿಂದಿನ ಮತ್ತು ಈಗಿನ ಶಿಕ್ಷಣ ಪದ್ಧತಿಯ ಬದಲಾವಣೆಗಳನ್ನು ಶಿಕ್ಷಕರು ಸ್ಪರ್ಧಾತ್ಮಕವಾಗಿ ತೆಗೆದು ಕೊಳ್ಳಬೇಕು. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವದು ಶಿಕ್ಷಕರ ಜವಾಬ್ದಾರಿ ಎಂದರು.

ಸ್ಮರಣ ಸಂಚಿಕೆಯನ್ನು ನಿವೃತ್ತ ಶಿಕ್ಷಕಿ ಎನ್.ಎ. ಪೊನ್ನಮ್ಮ ಬಿಡುಗಡೆ ಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧ ವಿದ್ಯಾರ್ಜನೆಯ ಜೊತೆಗೆ ನಯವಿನಯಗಳಿಂದ ಗುರುಹಿರಿಯ ರನ್ನು ಗೌರವಿಸಬೇಕು. ನಿರಂತರ ಅಧ್ಯಯನದಿಂದ ಸಮಾಜದಲ್ಲಿ ಶ್ರೇಷ್ಟ ವ್ಯಕ್ತಿಯಾಗಲು ಸಾಧ್ಯ ಎಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸುವರ್ಣ ಮಹೋತ್ಸವದ ನೆನಪಿಗಾಗಿ ರೂ. 50 ಲಕ್ಷ ವೆಚ್ಚದಲ್ಲಿ ಸಭಾಭವನ ನಿಮಿಸಲು ಉದ್ದೇಶಿಸಿದ್ದು ಕಟ್ಟಡ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರು ಸಹಾಯಧನ ನೀಡುತ್ತಿದ್ದು, ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ವಿದ್ಯಾಸಂಸ್ಥೆ ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.

ಸನ್ಮಾನ: ಇದೇ ಸಂದರ್ಭ ಸ್ಥಳ ದಾನಿಗಳಾದ ಮೇಲಟಂಡ ಕುಟುಂಬಸ್ಥರ ಪರವಾಗಿ ದೇವಯ್ಯ, ಕಟ್ರತಂಡ ಕುಟುಂಬಸ್ಥರ ಪರವಾಗಿ ಅಯ್ಯಪ್ಪ, ಚಂಡಾಂದೀರ ಕುಟುಂಬಸ್ಥರ ಪರವಾಗಿ ಲವ ಅವರನ್ನು ಗೌರವಿಸಲಾಯಿತು. ಮುಖ್ಯ ಶಿಕ್ಷಕ ಕೆ.ಎಸ್. ಪುಟ್ಟಯ್ಯ, ಕೆ.ಎಸ್. ರಾಮಮೂರ್ತಿ, ಎನ್.ಎ. ಪೊನ್ನಮ್ಮ, ಸಹಶಿಕ್ಷಕಿ ಎಂ.ಡಿ. ಪಾರ್ವತಿ, ದೈಹಿಕ ಶಿಕ್ಷಕ ಕೆ.ಬಿ. ಭಾಸ್ಕರ ರೈ, ಗುಮಾಸ್ಥ ಎಂ.ಪಿ. ಗಣಪತಿ, ಕಚೇರಿ ಸಹಾಯಕ ಎಚ್. ಚೋಮಣಿ, ಆಡಳಿತ ಮಂಡಳಿ ಅಧ್ಯಕ್ಷರಾಗಿ ತಳೂರು ಕಿಶೋರ್ ಕುಮಾರ್, ಎನ್.ಎ. ಗೋಪಾಲ್, ಕೊಡಪಾಲು ಎಸ್. ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೊಡಪಾಲು ಎಸ್. ಗಣಪತಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಎಂ.ಪಿ. ಕವಿತ ವರದಿ ವಾಚಿಸಿ, ಸಹಶಿಕ್ಷಕ ಜಗನ್ನಾಥ್ ನಿರೂಪಿಸಿ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಡಿ. ಗಣೇಶ್, ವಿದ್ಯಾಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಇದಕ್ಕೂ ಮುನ್ನ ಪೂರ್ವಾಹ್ನ ಕಲಶ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯೆ ವೀಣÁ ಅಚ್ಚಯ್ಯ ಕಾಫಿ ಬೆಳೆಗಾರರು ಹಾಗೂ ವಕೀಲರೂ ಆದ ಕಾರೇರ ಕವನ್ ಮಾದಪ್ಪ ಉಪಸ್ಥಿತರಿದ್ದರು. ಈ ಸಂದರ್ಭ ಪಥಸಂಚಲನ, ಸಾಮೂಹಿಕ ಅಂಗಸಾಧನೆ ಜರುಗಿದವು.

-ದುಗ್ಗಳ ಸದಾನಂದ