ಸಿದ್ದಾಪುರ, ಡಿ. 19: ಸಮೀಪದ ಪಾಲಿಬೆಟ್ಟದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ1491ನೇ ಜನ್ಮದಿನವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಿದರು.
ಜುಮಾ ಮಸೀದಿ ಹಾಗೂ ಮುಹಿಮ್ಮಾತ್ತುದ್ದೀನ್ ಮದರಸ ಸಮಿತಿ ವತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಿ.ಎಂ.ಅಬ್ದುಲ್ ಜಬ್ಬಾರ್ ಚಾಲನೆ ನೀಡಿದರು.
ಖತೀಬ್ ಅಬ್ದುಲ್ ಸಲೀಂ ಲತೀಫ್ ಅವರ ಪ್ರಾರ್ಥನೆಯೊಂದಿಗೆ ಗ್ರಾಮದ ಮುಸ್ಲಿಂ ಭಾಂದವರು ಮಸೀದಿಯಿಂದ ಆರ್ಕಾಡ್ ದರ್ಗಾ ವರಗೆ ಮುಖ್ಯ ರಸ್ತೆಯಲ್ಲಿ ಬೃಹತ್ ಸಂದೇಶ ಮೆರವಣಿಗೆ ನಡೆಸಿದರು. ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತ್ತು. ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಸಿ.ಎಚ್ ಖಾದರ್, ಕೆ.ಎಚ್.ಅಬೂಬಕ್ಕರ್, ಖಾಲಿದ್ ಹಾಜಿ, ಸಿ.ಕೆ. ಮ್ಯೂದು, ಲತೀಫ್, ಪಿ.ಕೆ ಮುಸ್ತಫ, ಸೇರಿದಂತೆ ಮತ್ತಿತರರು ಹಾಜರಿದ್ದರು