ನಾಪೆÇೀಕ್ಲು, ಜೂ, 8: ಸಮೀಪದ ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮದ ಕಬ್ಬೆ ಬೆಟ್ಟದವರೆಗಿನ ಕಾಂಕ್ರಿಟ್ ರಸ್ತೆ ನಿರ್ಮಾಣ ಆಮೆಗತಿಯಲ್ಲಿ ನಡೆಯುತ್ತಿರುವದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದÀ್ಯಮ ಇಲಾಖೆಯಿಂದ ರೂ. 3.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 6 ಕಿ.ಮೀ ದೂರದ ಈ ರಸ್ತೆ ಕಾಮಗಾರಿ ಆರಂಭಗೊಂಡು 5 ತಿಂಗಳುಗಳು ಉರುಳಿವೆ. ಆದರೆ ಕಬ್ಬೆಯಿಂದ 3.5 ಕಿ.ಮೀ ಕಾಮಗಾರಿ ಮಾತ್ರ ಮುಗಿದಿದೆ. ಉಳಿದ 2.5 ಕಿ.ಮೀ ಕಾಮಗಾರಿ ನಡೆಯಬೇಕಾಗಿದೆ. ಈಗಾಗಲೇ ಮುಂಗಾರು ಮಳೆ ಆರಂಭದ ಹಂತದಲ್ಲಿದ್ದು, ಮಳೆ ಆರಂಭಗೊಂಡರೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಕಾಂಕ್ರಿಟ್ ರಸ್ತೆಯ ಕಾರಣದಿಂದ ವಾಹನಗಳ ಓಡಾಟಕ್ಕೂ ಸಮಸ್ಯೆಯಾಗಿದೆ. ಚೇಲಾವರದಿಂದ ಚೆಯ್ಯಂಡಾಣೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ಬದಲಿ ರಸ್ತೆಯಿದ್ದು, ಅದು ಆನೆಗಳ ಓಡಾಟದ ಸ್ಥಳವಾಗಿದೆ. ಅಲ್ಲಿ ಸಂಜೆ 6ರಿಂದ ಬೆಳಿಗ್ಗೆ 6 ರವರೆಗೆ ಯಾವದೇ ಜನ, ವಾಹನ ಸಂಚರಿಸುವಂತಿಲ್ಲ. ಸಂಬಂಧಿಸಿದವರು ಶೀಘ್ರ ರಸ್ತೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.