ಚೆಟ್ಟಳ್ಳಿ, ಅ. 17: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕಂಡಂಗಾಲದ ಮರೋಡಿ ಯುವಕ ಸಂಘದ ಸಹಯೋಗದೊಂದಿಗೆ ತಾ. 12 ರಂದು ಆಟ್-ಪಾಟ್ ಸಮಾರೋಪ ಸಮಾರಂಭ ನೆರವೇರಿತು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಂಡಂಗಾಲದ ಮರೋಡಿ ಯುವಕ ಸಂಘದ ಕಟ್ಟಡದಲ್ಲಿ ಕಾರ್ಯಕ್ರಮ ನೆರವೇರಿತು, ಹಲವು ಬಗೆಯ ಆಟ್ ಪಾಟ್ ಪ್ರದರ್ಶನವಿತ್ತು. ಮುಖ್ಯ ಅತಿಥಿಗಳಾಗಿ ಬಿಟ್ಟಂಗಾಲ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಂಡೇರಂಡ ಭವ್ಯ ಚಿಟ್ಟಿಯಣ್ಣ ಹಾಗೂ ಗಣ್ಯರು ಹಾಜರಿದ್ದರು.