ಮಡಿಕೇರಿ, ಆ. 26: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ, ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ - ಶ್ರೀ ಲಕ್ಷ್ಮೀ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮತ್ತು ಫ್ರೆಂಡ್ಸ್ ಕ್ಲಬ್ ಪೈಲಾರು ಇವರ ಆಶ್ರಯದಲ್ಲಿ ತಾ.14 ರಂದು ದ.ಕ.ಜಿ.ಪಂ ಪೈಲಾರು ಶಾಲಾ ವಠಾರದಲ್ಲಿ ವಿಜೃಂಭಣೆಯ ಆಟಿ ಸಂಭ್ರಮ ಕಾರ್ಯಕ್ರಮ ನಡೆಸಲಾಯಿತು. ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ರವರು ಸುಳ್ಯ ತಾಲೂಕಿನಲ್ಲಿ ಅತಿ ಹೆಚ್ಚು ಅರೆಭಾಷಿಕರಿದ್ದು ಇಲ್ಲಿನ ಆಚಾರ - ವಿಚಾರ - ಸಂಸ್ಕøತಿ - ಸಂಪ್ರದಾಯಗಳಲ್ಲಿ ಬಹಳ ವಿಶಿಷ್ಟತೆಯಿದೆ. ನಮ್ಮ ಸಂಸ್ಕøತಿ ಯನ್ನು ಹೆಚ್ಚು ಬಿಂಬಿಸುವ ಕೆಲಸ ಆಗಲಿ. ಯುವಕರು ಸಾಹಿತ್ಯಿಕ ಕಾರ್ಯವನ್ನು ಬೆಳೆಸಬೇಕೆಂದು ಕರೆಯಿತ್ತರು.
ಆಟಿ ಆಚರಣೆಯ ಮಹತ್ವಗಳ ಬಗ್ಗೆ ಅಕಾಡೆಮಿ ಸದಸ್ಯರಾದ ಮದುವೆಗದ್ದೆ ಬೋಜಪ್ಪ ಗೌಡ ಅವರು ಅರೆಭಾಷೆ ಶೈಲಿಯಲ್ಲಿ ಮನ ಮುಟ್ಟುವಂತೆ ವಿವರಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಅವರು ಮಾತನಾಡಿ, ಈ ಭಾಗದಲ್ಲಿ ಅಕಾಡೆಮಿ ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದೆ. ನಮ್ಮ ಮಾತೃ ಭಾಷೆಯ ಉಳಿವಿಗಾಗಿ ನಾವು ಶಾಲೆ, ಕಚೇರಿಗಳಲ್ಲಿ ಮಾತನಾಡಬೇಕು, ಬಹುತೇಕ ಸುಳ್ಯದವರು ಅರೆಭಾಷೆಯ ವ್ಯಾವಹಾರಿಕ ಜ್ಞಾನ ಹೊಂದು ವಂತಾಗಬೇಕು ಎಂದು ಶುಭ ಹಾರೈಸಿದರು. ಹಿರಿಯ ಕೃಷಿಕರಾದ ನಾಯರ್‍ಕಲ್ಲು ಪುಟ್ಟಣ್ಣ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಸೀತಾ ಹೆಚ್. ಹಾಗೂ ಹರಿಶ್ಚಂದ್ರ ಮೋಂಟಡ್ಕ, ಯೋಜನಾಧಿಕಾರಿ ಯುವರಾಜ್ ಜೈನ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೈಲಜಾ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಟಿ ಸಂಭ್ರಮದ ವಿಶಿಷ್ಟ ಭೋಜನ
ಪತ್ರೊಡೆ, ಅರಶಿನ ಎಲೆ ಹಿಟ್ಟು, ತಿಮರೆ ಚಟ್ನಿ, ಬಾಳೆಹಣ್ಣಿನ ಪೋಡಿ, ಆಟಿ ಪಾಯಸ, ಕಡ್ಲೆ ಬೇಳೆ ಪಾಯಸ, ಕಣಿಲೆ ಪಲ್ಯ, ಗೆಂಡದ ಹಿಟ್ಟು, ಕೊಟ್ಟಿಗೆ, ಕುಡು ಚಟ್ನಿ, ಹಲಸಿನ ಹಣ್ಣಿನ ಹಿಟ್ಟು, ಪದೆಂಜಿ ಗಸಿ, ಕುಚ್ಚಲು ಅಕ್ಕಿ ಅನ್ನ, ಹಲಸಿನ ಕಾಯಿ ಸಾರು, ಪುಂಡಿ, ಕಾಶಿ ಹಲ್ವ ಮುಂತಾದ ರುಚಿಕರ ಅಡುಗೆಗಳು ಮೆಚ್ಚುಗೆ ವ್ಯಕ್ತ ಪಡಿಸಿತ್ತು. ಗ್ರಾಮೀಣ ಆಟದ ಸ್ಪರ್ಧೆಗಳು ಹಾಗೂ ಸಾಂಸ್ಕøತಿಕ ಕಾರ್ಯ ಕ್ರಮಗಳೊಂದಿಗೆ ಯೋಜನೆಯ ಜ್ಞಾನ ವಿಕಾಸ ಮೇಲ್ವಿಚಾರಕಿ ಮಮತಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.