ಮಡಿಕೇರಿ, ಸೆ. 10: ಅಲ್ಲ ವೀಣಕ್ಕ... ಚೆನ್ನ ಕೇಳ್ ಇಲ್ಲಿ... ನೀ ಪೋ ಸುನಿಲ್ ಎನ್ನತ ಮಾಡಿರ ನಿಂಗ ನಿನ್ನಾಂದ್ ಎಂತಾ ಟೆನ್ಷನ್ ತಂದ್‍ಟಿರಾ... ನಂಗಡ ಪಣಿ ಕೂಟಿರ್‍ವಕಿಂಜಿರಲಾ... ಎಂದು ಚರ್ಚಿಸುತ್ತಿರಬಹುದೇ...? ಇದ್ದರೂ ಇರಬಹುದೇನೋ...!ಎಂ.ಎಲ್.ಸಿ.ಗಳಾದ ಬಿಜೆಪಿಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಕಾಂಗ್ರೆಸ್‍ನ ವೀಣಾ ಅಚ್ಚಯ್ಯ ಅವರು ಇಂದು ಕ್ಯಾಮರಾ ಕಣ್ಣಿಗೆ ಈ ರೀತಿಯಲ್ಲಿ ಸಿಕ್ಕರು... ನಿನ್ನೆ (ತಾ.9ರಂದು) ಮಡಿಕೇರಿ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಯುದ್ಧವೇ ನಡೆದಿರುವದು ಎಲ್ಲರಿಗೂ ತಿಳಿದಿದೆ. ಈ ಯುದ್ಧದಲ್ಲಿ ಇವರಿಬ್ಬರ ಪಾತ್ರವೂ ಇತ್ತಲ್ಲದೆ ಮುಂಚೂಣಿಯಲ್ಲಿದ್ದರು. ಮರುದಿನವಾದ ಇಂದು ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಲೋಗೋ - ವೆಬ್‍ಸೈಟ್ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಇವರಿಬ್ಬರು ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದ ನಡುವೆ ಇವರುಗಳು ಚರ್ಚೆಯಲ್ಲಿ ತೊಡಗಿದ್ದ ಸಂದರ್ಭವಿದು. -ಶಶಿ, ಚಿತ್ರ : ದುಗ್ಗಳ.