ಕೂಡಿಗೆ, ಸೆ. 12: ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶಿರಂಗಾಲದಲ್ಲಿ ನಡೆದ ಪ್ರಾಥಮಿಕ ಶಾಲೆ ವಿಭಾಗದ ಕ್ರೀಡಾಕೂಟದಲ್ಲಿ ವಲಯ ಮಟ್ಟದ ಕ್ರೀಡೆಗಳಾದ ಬಾಲಕರ ಹಾಕಿ, ಬಾಲಕಿಯ ಹಾಕಿ, ಕಬಡ್ಡಿ ಸೇರಿದಂತೆ ಮೇಲಾಟಗಳಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದೆ. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.