*ಗೋಣಿಕೊಪ್ಪಲು, ಆ. 21: ಕಾವೇರಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ವೆಬ್‍ಸೈಟ್‍ನ್ನು ಕಾರ್ಪೊರೇಷನ್ ಬ್ಯಾಂಕ್‍ನ ನಿವೃತ್ತ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೊಂಗಂಡ ಪಿ. ಅಚ್ಚಯ್ಯ ಅನಾವರಣ ಗೊಳಿಸಿದರು. ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಾರ್ಯಕ್ರಮ ಜರುಗಿತು.

ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಜಮ್ಮಡ ಪೊನ್ನಮ್ಮ ಮಾತನಾಡಿ, ಕಾಲೇಜು ವ್ಯಾಸಂಗದ ನಂತರ ವೃತ್ತಿಯ ಹುಡುಕಾಟ, ಕೆಲಸದ ಒತ್ತಡ, ಜೀವನ ನಿರ್ವಹಣೆಯ ಒತ್ತಡದಿಂದ ಕಾಲೇಜಿನ ಕಡೆಗೆ ತೆರಳಲು ಸಾಧ್ಯವಿರುವದಿಲ್ಲ. ಆದರೆ ಸಂಘದ ಮೂಲಕ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಅವಕಾಶ ದೊರಕಿದಂತಾಗುತ್ತದೆ. ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳವಂತೆ ಸಂಘಕ್ಕೆ ಸಲಹೆ ನೀಡಿದರು

ಅಧ್ಯಕ್ಷ ಪ್ರೊ. ಪಟ್ಟಡ ಪಿ. ಪೂವಣ್ಣ ಮಾತನಾಡಿ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ನಡೆಯುವ ಕಾರ್ಯಕ್ರಮ ವೀಕ್ಷಿಸಬಹುದು ಮತ್ತು ಸಂಪರ್ಕ ಸಾಧಿಸಬಹುದು. ಸಲಹೆ, ಸೂಚನೆ, ಸಹಾಯ ಸಂಘದ ಕಟ್ಟಡ ನಿರ್ಮಾಣದ ಕೆಲಸÀಕ್ಕೆ ಕೈಜೋಡಿಸುವಂತೆ ಹಳೇ ವಿದ್ಯಾರ್ಥಿ ಬಂಧುಗಳನ್ನು ಕೋರಿದರು.

ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಹಾಗೂ ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲು ಶ್ರಮಿಸುತ್ತಿರುವ ಚೆಲುವ ಅವರನ್ನು ಸನ್ಮಾನಿಸಲಾಯಿತು. ನೀರಜಾ ಕುಶಾಲಪ್ಪ ಪ್ರಾರ್ಥಿಸಿ, ಉಪಾಧ್ಯಕ್ಷ ಟಿ.ಎಂ. ದೇವಯ್ಯ ಸ್ವಾಗತಿಸಿದರೆ, ಕಾರ್ಯದರ್ಶಿ ವಾಣಿ ಚಂಗಪ್ಪ ವಂದಿಸಿದರು. ಡಯಾನ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪಿ.ಯು.ಸಿ. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ವೆಬ್ ಡಿಸೈನರ್ ದಿವಾಕರ್, ಹಳೇ ವಿದ್ಯಾರ್ಥಿಗಳಾದ ಪಿ.ಟಿ. ಸುಭಾಶ್, ಅಜಿತ್ ಅಯ್ಯಪ್ಪ, ಬಿ.ಎನ್. ಪ್ರಕಾಶ್, ಅನೀಶ್ ಮಾದಪ್ಪ, ಡಯಾನ ಸಂಚಾಲಕಿ, ರಜನಿ, ಮನು ನಂಜಪ್ಪ, ಜೆ.ಕೆ. ಸೋಮಣ್ಣ ಹಾಜರಿದ್ದರು.