ಕುಶಾಲನಗರ, ಆ. 22: ಕುಶಾಲನಗರದ ದೇವಾಂಗ ಸಂಘದ ಆಶ್ರಯದಲ್ಲಿ ರಥಬೀದಿಯ ಚೌಡೇಶ್ವರಿ ದೇವಾಲಯದಲ್ಲಿ ಉಪಾಕರ್ಮ ಪೂಜಾ ಕಾರ್ಯಕ್ರಮ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನಕುಮಾರ್ ಭಟ್ ಮತ್ತು ಪರಮೇಶ್ವರ್ ಭಟ್ ಉಪಾಕರ್ಮ ಪೂಜಾ ವಿಧಿವಿಧಾನ ಗಳನ್ನು ನೆರವೇರಿಸಿದರು. ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಸಮಾಜ ಬಾಂಧವರು ಉಪಕರ್ಮ ಪೂಜೆಯಲ್ಲಿ ಪಾಲ್ಗೊಂಡು ಜನಿವಾರ ಧಾರಣೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಕಾರ್ಯದರ್ಶಿ ಡಿ.ವಿ. ರಾಜೇಶ್, ಉಪಕರ್ಮ ಜನಿವಾರ ಹಬ್ಬ ಕಾರ್ಯಕ್ರಮ ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಪ್ರಮುಖ ಆಚರಣೆಯಾಗಿದೆ. ಜೊತೆಗೆ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ತುಂಬಿರಲೆಂದು ಪ್ರಾರ್ಥಿಸಿ ಈ ಪೂಜಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. 50 ಕ್ಕೂ ಅಧಿಕ ಮಂದಿ ಜನಿವಾರ ಹಬ್ಬದಲ್ಲಿ ಪಾಲ್ಗೊಂಡು ಜನಿವಾರ ಧಾರಣೆ ನಡೆಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಡಿ.ಆರ್. ಸೋಮಶೇಖರ್, ಡಿ.ಕೆ. ಮಹೇಶ್, ಖಜಾಂಚಿ ಪಿ.ಆರ್. ಕೃಷ್ಣಕುಮಾರ್, ಸಹಕಾರ್ಯದರ್ಶಿ ಡಿ.ವಿ. ಚಂದ್ರು ಇದ್ದರು.