ಮೂರ್ನಾಡು, ಅ. 28: ಹೊದ್ದೂರು ಗ್ರಾಮದ ಪಾಲೇಮಾಡು ಪೈಸಾರಿಯಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದ ಘಟನೆ ನಡೆದಿದೆ.

ಪಾಲೇಮಾಡು ಪೈಸಾರಿ ನಿವಾಸಿ ಬಿ.ಎನ್. ಸುಂದರ ಅವರ ಗುಡಿಸಲು ಮನೆಯಲ್ಲಿ ಇಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಮನೆಯ ಒಳಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಮನೆಯಲ್ಲಿದ್ದ ಮಂಚ, ಟಿವಿ ಸ್ಟ್ಯಾಂಡ್, ಸೋಫಾ, ಬಟ್ಟೆ, ಕುರ್ಚಿ ಇನ್ನಿತರ ಗೃಹೋಪ ಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕÀಲಾಗಿದೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿ ಆಗಿದೆ ಎಂದು ಅಂದಾಜಿಸಲಾಗಿದೆ.

ಸುಂದರ ಅವರ ಪತ್ನಿ ಪದ್ಮ ಅವರು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಕಬಡಕೇರಿಗೆ ನೆಂಟರ ಮನೆಗೆ ತೆರಳಿದ ಬಳಿಕ ಅನಾಹುತ ಸಂಭವಿಸಿದೆ. ಶಸುಪಾಸಿನ ನಿವಾಸಿಗಳು ಬೆಂಕಿ ಹೊತ್ತಿಕೊಂಡ ವಿಷಯ ಅರಿತು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಮೂರ್ನಾಡು ಪೊಲೀಸ್ ಉಪಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.