ಸುಂಟಿಕೊಪ್ಪ, ಜೂ. 11: ಇಲ್ಲಿಗೆ ಸಮೀಪದ ಮಾದಾಪುರ ರಸ್ತೆಯ ಕೆಂಚಟ್ಟಿ ರಸ್ತೆ ಬದಿಯ ತೋಟವೊಂದರಲ್ಲಿ ಮರವೊಂದು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ- ಗಾಳಿಗೆ ಸಮೀಪದ ತೋಟವೊಂದರ ಮರವೊಂದು ವಿದುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸುಮಾರು 5 ಕಂಬಗಳು ನೆಲಕಚ್ಚಿದ್ದು,ಇದರಿಂದ ಚೆಸ್ಕಾಂ ಇಲಾಖೆಗೆ ಅಂದಾಜು ರೂ.75000 ದಷ್ಟು ನಷ್ಟ ಸಂಭವಿಸಿದೆ ಎಂದು ಸುಂಟಿಕೊಪ್ಪ ಚೆಸ್ಕಾಂ ಕಿರಿಯ ಅಭಿಯಂತರ ಬಸವರಾಜು ತಿಳಿಸಿದರು.

ಈ ವರ್ಷದ ಮೊದಲ ಮಳೆಗೆ ಸುಮಾರು 84 ವಿದ್ಯುತ್ ಕಂಬಗಳು ಗಾಳಿ ಮಳೆಗೆ ಧರೆಗುರುಳಿ ಬಿದ್ದು ಅಪಾರ ನಷ್ಟ ಸಂಭವಿಸಿದ ಬೆನ್ನಲ್ಲೇ ಮತ್ತೇ ವಿದ್ಯುತ್ ಕಂಬಗಳು ಹಾನಿಯಾಗಿವೆ.ತೋಟದ ಮಾಲೀಕರು ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಬೇಕೆಂದು ಬಸವರಾಜು ಮನವಿ ಮಾಡಿದ್ದಾರೆ.