ಮಡಿಕೇರಿ, ಡಿ.2: ರಾಜ್ಯದಲ್ಲಿ ಬ್ರಾಹ್ಮಣ ಜಾತಿಯವರಿಗೆ ಬ್ರಾಹ್ಮಣ ಎಂದು ಜಾತಿ ದೃಢೀಕರಣ ಪತ್ರ ನೀಡುತ್ತಿಲ್ಲದಿರುವದು ಸರಕಾರದ ಗಮನಕ್ಕೆ ಬಂದಿದೆಯೇ? ಜಾತಿ ದೃಢೀಕರಣ ಪತ್ರ ನೀಡಲು ಇರುವ ತೊಡಕು ಏನು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಇಂದು ಸದನದಲ್ಲಿ ಪ್ರಶ್ನಿಸಿದರು.ರಾಜ್ಯದಲ್ಲಿರುವ ಜಾತಿಗಳನ್ನು ಯಾವ ಯಾವ ಪ್ರವರ್ಗಕ್ಕೆ ಸೇರಿಸಲಾಗಿದೆ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಜಾತಿಯವರಿಗೆ ದೃಢೀಕರಣ ಪತ್ರದ ಅವಶ್ಯಕತೆ ಇದ್ದು, ಇದಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳ ವಿವರ ಬೇಕೆಂದು ಅವರು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು, ಸರ್ಕಾರಿ ಆದೇಶ ಸಂಖ್ಯೆ:ಸಕಇ 225 ಬಿಸಿಎ 2000 ದಿನಾಂಕ :30.03.2002ರಲ್ಲಿ ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ ಪ್ರವರ್ಗಗಳಿಗೆ ಸೇರಿಸಲಾಗಿದೆ. ಸರ್ಕಾರದ ಆದೇಶದ ಪ್ರತಿಯನ್ನು ಇಲಾಖೆಯ ತಿತಿತಿ. bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ನೋಡಬಹುದು. ಬ್ರಾಹ್ಮಣ ಜಾತಿ

(ಮೊದಲ ಪುಟದಿಂದ) ಹಾಗೂ ಜಾತಿ ಪ್ರಮಾಣ ಪತ್ರವನ್ನು ನೀಡುವ ವಿಷಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಬರುವದಿಲ್ಲ. ಕರ್ನಾಟಕ ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ನಿಯಮಗಳನ್ವಯ ಬ್ರಾಹ್ಮಣ ಜಾತಿಯು ಸಾಮಾನ್ಯ ವರ್ಗಕ್ಕೆ ಸೇರಿದ್ದು, ಹಿಂದುಳಿದ ವರ್ಗಗಳ ಯಾವದೇ ಪ್ರವರ್ಗಕ್ಕೆ ಸೇರಿರುವದಿಲ್ಲ. ಸರ್ಕಾರದ ಅಧಿಸೂಚನೆ ಸಂಖ್ಯೆ : ಎಸ್‍ಡಬ್ಲ್ಯೂಡಿ 132 ಎಸ್‍ಎಡಿ 97 ದಿ:08.02.2000ರಂತೆ ಪ್ರವರ್ಗ-1ಕ್ಕೆ ಸೇರಿದವರಿಗೆ ನಮೂನೆ -ಇನಲ್ಲಿ ಹಾಗೂ ಪ್ರವರ್ಗ-1ನ್ನು ಹೊರತುಪಡಿಸಿ 2ಎ, 2ಬಿ, 3ಎ ಮತ್ತು 3ಬಿ ವರ್ಗದವರಿಗೆ ನಮೂನೆ-ಎಫ್ ನಲ್ಲಿ ಜಾತಿ ದೃಢೀಕರಣ ಪತ್ರವನ್ನು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ನೀಡುತ್ತಾರೆ. ಜಾತಿ ಪ್ರಮಾಣ ಪತ್ರ ನೀಡುವ ಕುರಿತ ಸರ್ಕಾರದ ಆದೇಶದ ಪ್ರತಿಯನ್ನು ಇಲಾಖೆಯ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ನೋಡಬಹುದೆಂದು ತಿಳಿಸಿದರು.