ಕೂಡಿಗೆ, ಜೂ. 11: ಸಮೀಪದ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮಣ್ಣು ಆರೋಗ್ಯ ಅಭಿಯಾನದಡಿಯಲ್ಲಿ ಮಣ್ಣು ಆರೋಗ್ಯ ಕೇಂದ್ರ 2016 ರಿಂದ ಪುನರ್ ಆರಂಭಗೊಂಡಿದೆ.

ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಣ್ಣು ಆರೋಗ್ಯ ಕೇಂದ್ರ ಈ ಸಾಲಿನಲ್ಲಿ ಅಂತರರಾಷ್ಟ್ರೀಯ ಮಣ್ಣು ಪರೀಕ್ಷಾ ವರ್ಷವಾಗಿರುವದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಮಣ್ಣು ಆರೋಗ್ಯ ಕೇಂದ್ರಗಳು ತೆರೆಯಲ್ಪಟ್ಟಿವೆ.

ಇದೇ ಸಂದರ್ಭ ಜಿಲ್ಲೆಯ ಮಣ್ಣು ಆರೋಗ್ಯ ಕೇಂದ್ರವಾಗಿರುವ ಕೂಡಿಗೆಯಲ್ಲಿ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿಕೊಳ್ಳು ವದರ ಮೂಲಕ ಜಮೀನಿನ ಫಲವತ್ತತೆ ಯನ್ನು ಹೆಚ್ಚಿಸಿಕೊಳ್ಳಬೇಕೆಂದು ಸೋಮವಾರಪೇಟೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ರೈತರಲ್ಲಿ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮಣ್ಣಿನ ಮಾದರಿ ಗಳನ್ನು ಗ್ರಿಡ್ ಮಾದರಿಯಲ್ಲಿ ಮಣ್ಣು ಸಂಗ್ರಹಿಸಿ, ಪರೀಕ್ಷೆ ಮಾಡಲಾಗುವದು. ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಇದೀಗ ಸುಸಜ್ಜಿತ ಉಪಕರಣಗಳಿಂದ ಕೂಡಿದ ಉತ್ತಮ ತಾಂತ್ರಿಕ ಸಿಬ್ಬಂದಿಗಳನ್ನೊಳ ಗೊಂಡಂತೆ ದಿನನಿತ್ಯ ಮಣ್ಣು ಮಾದರಿಯನ್ನು ವಿಶ್ಲೇಷಿಸಿ, ರೈತರಿಗೆ ಸಕಾಲದಲ್ಲಿ ಫಲಿತಾಂಶ ಕೊಡುವ ವ್ಯವಸ್ಥೆ ಇರುತ್ತದೆ. ಕೊಡಗು ಜಿಲ್ಲೆಯ ಮೂರು ತಾಲೂಕುಗಳಿಂದ ರೈತರು ಭತ್ತ, ಮುಸುಕಿನ ಜೋಳ, ಕಾಫಿ, ಏಲಕ್ಕಿ, ಶುಂಠಿ ಜಮೀನಿನ ಮಣ್ಣನ್ನು ಸಂಗ್ರಹಿಸಿ ಸಿಜಿಪಿಎಸ್ ಮಾದರಿಯಲ್ಲಿ ಅಂಕಿ ಅಂಶ ಮತ್ತು ರೇಖಾಂಶಗಳನ್ನು ದಾಖಲಿಸಿ, ಖುಷ್ಕಿ ಮತ್ತು ನೀರಾವರಿ ಜಮೀನಿನಲ್ಲಿ ಪ್ರತ್ಯೇಕವಾಗಿ ಮಣ್ಣನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ನೀಡಿ, ಮಣ್ಣು ಪರೀಕ್ಷೆ ಮಾಡಿಸಬೇಕು. ಅಲ್ಲದೆ, ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಲಘು ಪೋಷಕಾಂಶಗಳಾದ ಸತು, ಕಬ್ಬಿಣ, ತಾಮ್ರ ಹಾಗೂ ಬೇರೆ ಬೇರೆ ಅಂಶ ಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಇಲಾಖೆಯ ವತಿಯಿಂದ ತಾತ್ಕಾಲಿಕ ಸಿಬ್ಬಂದಿಗಳನ್ನು ಮಣ್ಣು ಮಾದರಿ ಸಂಗ್ರಹಿಸಲು ನೇಮಿಸಲಾಗಿದೆ.

ಗ್ರಾಮಗಳಿಗೆ ತೆರಳಿದ ಸಂದರ್ಭ ರೈತರು ಸಹಕಾರ ನೀಡಬೇಕು. ಪ್ರಯೋಗಾಲಯದಲ್ಲಿ ರಸಸಾರ ಹುಳಿ, ಲವಣಾಂಶ, ಸಾವಯವ ಇಂಗಾಲ ಸೇರಿದಂತೆ ವಿವಿಧ ಅಂಶಗಳ ವಿಶ್ಲೇಷಿಸಿ ವಿಂಗಡಿಸಲಾಗುವದು. ಇದರ ಆಧಾರದ ಮೇಲೆ ರಸಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಹೆಚ್ಚು ಬಳಸಿ, ಜಮೀನಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲ ವಾಗುವದು. ಜಿಲ್ಲೆಯ ರೈತರು ಇದನ್ನು ಸದ್ಬಳಸಿಕೊಳ್ಳಬೇಕೆಂದು ರಾಜಶೇಖರ್ ಅವರು ರೈತರಿಗೆ ತಿಳಿಸಿದರು.