ಸುಂಟಿಕೊಪ್ಪ, ಆ. 9: ಇಲ್ಲಿಗೆ ಸಮೀಪದ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ ಹೆಚ್ಚುವರಿ ಶಿಕ್ಷಕರ ಹುದ್ದೆ ಸ್ಥಳಾಂತರದ ವರ್ಗಾವಣೆಯಲ್ಲಿ ಕೊಡ್ಲಿಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ವರ್ಗಗೊಂಡ ಜುಡಿತ ಪ್ರೀತಾ ಅವರಿಗೆ ಶಾಲೆ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.

ಗಿರಿಜನ ಹಾಡಿಯಲ್ಲಿ ಸತತವಾಗಿ 11 ವರ್ಷಗಳಿಂದ ಸೇವೆ ಸಲ್ಲಿಸಿದ್ದು ಮಕ್ಕಳಿಗೂ ಮತ್ತು ಗ್ರಾಮಸ್ಥರಿಗೂ ಜನಪ್ರಿಯವಾಗಿದ್ದ ಶಿಕ್ಷಕಿಯನ್ನು ಶಾಲಾ ಮುಖ್ಯೋಪಾಧ್ಯಾಯ ಹೆಚ್.ಎಂ. ವೆಂಕಟೇಶ ಅವರು ಸನ್ಮಾನಿಸಿ, ಗೌರವಿಸಿದರು. ಸಹ ಶಿಕ್ಷಕಿ ಪ್ರಮೀಳಾ ಪ್ರಾರ್ಥಿಸಿ, ಸ್ವಾಗತಿಸಿದರು. ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿ ದರೆ, ಶಿಕ್ಷಕಿ ಮಂಜುಳಾ ವಂದಿಸಿದರು.