*ಗೋಣಿಕೊಪ್ಪಲು, ಜ. 2 : ತಮಿಳುನಾಡಿನ ರಾಮನಾಥಪುರದಲ್ಲಿ ನಡೆಯುವ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ಬಾಲಕಿಯರ ತಂಡ ಭಾಗವಹಿಸುತ್ತಿದೆ. ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡಿಗೆ ಕ್ರೀಡಾ ಶಾಲೆ, ಪೊನ್ನಂಪೇಟೆ ಕ್ರೀಡಾ ಶಾಲೆ, ಕೊಡಗು ವಿದ್ಯಾಲಯ, ಮಡಿಕೇರಿ ಸಾಯಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ತಮಿಳುನಾಡಿನ ರಾಮನಾಥಪುರ ದಲ್ಲಿ ತಾ. 4ರಿಂದ 13ರ ವರೆಗೆ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಂಡ ಭಾಗವಹಿಸಲಿದ್ದಾರೆ. ಪೊನ್ನಂಪೇಟೆ ಕ್ರೀಡಾ ಶಾಲೆಯಿಂದ ಹೆಚ್.ಜಿ.ಧನುಶ್ರೀ, ಪಾರ್ವತಿ, ಧನ್ಯ, ದೀಪ್ತಿ, ಭೂವಿಕಾ, ಆದಿರ, ನಿತ್ಯ, ಸಿಂಚನ, ಜಾಹ್ನವಿ, ಟಿ.ಸಿ. ಸುಚಿತ, ಕೆ.ಎಸ್. ಸುರಕ್ಷಾ, ಕೂಡಿಗೆ ಕ್ರೀಡಾ ಶಾಲೆಯಂದ ಲಕ್ಷ್ಮಿ, ಗಾನವಿ, ಭೂಮಿಕಾ, ಕಾವ್ಯ, ಪದ್ಮಾವತಿ ಮತ್ತು ಮಡಿಕೇರಿ ಸಾಯಿ ಕ್ರೀಡಾ ನಿಲಯದಿಂದ ದೇಚಮ್ಮ, ಕೊಡಗು ವಿದ್ಯಾಲಯ ಶಾಲೆಯಿಂದ ಕಾವೇರಮ್ಮ, ರಿಷಿಕಾ, ತರಬೇತುದಾರ ಅರುಣ್, ವ್ಯವಸ್ಥಾಪಕಿ ಹರಿಣಾಕ್ಷಿ ಭಾಗವಹಿಸಲಿದ್ದಾರೆ ಎಂದು ಹಾಕಿ ಕೂರ್ಗ್‍ನ ಪಂದ್ಯಾವಳಿ ಚೇರ್‍ಮೆನ್ ಬಿಟ್ಟಿಯಂಡ ಚಂಗಪ್ಪ ತಿಳಿಸಿದ್ದಾರೆ. ತಂಡವು ತ. 3ರಂದು (ಇಂದು) ತಮಿಳುನಾಡಿಗೆ ಪಯಣ ಬೆಳೆಸಲಿದೆ.