ಮಡಿಕೇರಿ, ಅ. 5: ಕ.ರಾ.ಬ.ಸ.ಪ್ರೌ.ಸ.ಶಿ. ಸಂಘದ 4ನೇ ವಾರ್ಷಿಕ ಸಭೆ ಸಂಘದ ಅಧಕ್ಷ್ಷೆ ಕೆ.ಎಸ್. ಪುಷ್ಪವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರೌ.ಶಾ. ಬಡ್ತಿ ಶಿಕ್ಷಕರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಂಘವು ಈ ಸಾಲಿನಲ್ಲಿ ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳ ಬಗ್ಗೆ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು. ಉಷಾರಾಣಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಹೆಚ್. ಪುಷ್ಪ ವಾರ್ಷಿಕ ವರದಿಯನ್ನು, ಖಜಾಂಚಿ ಪುಷ್ಪ ಕೆ.ಕೆ. ಲೆಕ್ಕಪತ್ರ ಮಂಡಿಸಿದರು. ರಾಜ್ಯ ಸಂಘದ ಉಪಾಧ್ಯಕ್ಷೆ ರೋಹಿಣಿ ರಾಜ್ಯ ಸಂಘದ ಚಟುವಟಿಕೆಗಳು ಹಾಗೂ ಹೋರಾಟದ ಹಾದಿಯನ್ನು ತಿಳಿಸಿದರು. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕೆ.ಎನ್. ಮಂಜುನಾಥ್ ಉಪಾಧ್ಯಕ್ಷರಾಗಿ ಗೀತಾ ರಾಜ್ಯ ಸಂಘಕ್ಕೆ, ಜಿಲ್ಲಾ ಸಂಘಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ರಂಜಿತ್ ಅಧಿಕಾರ ವಹಿಸಿಕೊಂಡರು. ಸಂಘದ ವತಿಯಿಂದ ನಿವೃತ್ತ ಶಿಕ್ಷಕಿ ಸ.ಪ್ರೌ. ಶಾಲೆ, ಪೊನ್ನಂಪೇಟೆಯ ಶಾಂತ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಂಜುನಾಥ್ ಸಂಘದ ಬಲವರ್ಧನೆಗೆ ಎಲ್ಲರ ಸಹಕಾರವನ್ನು ಕೋರಿದರು. ಉಪಾಧ್ಯಕ್ಷ ಶಿವಣ್ಣ ವಂದಿಸಿದರು.