ಕನ್ನಡ   Archives   epaper

SIGN UP

I have read the term and conditions!

OR


Existing user?

LOG IN

Forgot Your Password?Incorrect login or password
-ಚಂಗನೆ-ಎರಗಿದ-ವ್ಯಾಘ್ರ-:-ಮೂರ್ಛೆ-ಹೋದ-ಕಾಲೇಜು-ವಿದ್ಯಾರ್ಥಿನಿ!
ಗೋಣಿಕೊಪ್ಪಲು, ಫೆ. ೨೨: ಕಾಲೇಜು ವಿದ್ಯಾರ್ಥಿನಿಯೋರ್ವಳು ಎಂದಿನAತೆ ತನ್ನ ಮನೆ ಯಿಂದ ಮುಂಜಾನೆ ಹೊರಟು ಕಾಲು ದಾರಿಯಲ್ಲಿ ನಡೆದು ಕೊಂಡು ಬರುತ್ತಿದ್ದ ವೇಳೆ ಸಮೀಪದ ಕಾಡಿನಲ್ಲಿ ದಿಢೀರನೆ  ಪ್ರತ್ಯಕ್ಷಗೊಂಡ ಹುಲಿಯು ಚಂಗನೆ ಹಾರಿ ಸಮೀಪದ ಕಾಡಿನಲ್ಲಿ ಮರೆಯಾಗಿದೆ. ಅತ್ಯಂತ ಸಮೀಪದಿಂದ ಹುಲಿಯನ್ನು ಕಂಡ ಕಾಲೇಜು ವಿದ್ಯಾರ್ಥಿನಿ ಕಿರುಚಿಕೊಂಡು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿದ ಘಟನೆ ಮುಗುಟಗೇರಿ ಬಳಿ ಸೋಮವಾರ ಮುಂಜಾನೆ ೮ ಗಂಟೆಗೆ ನಡೆದಿದೆ. ಗೋಣಿಕೊಪ್ಪಲುವಿನ ವಿದ್ಯಾನಿಕೇತನ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಕ್ಷ ದೇಚಮ್ಮ ಹುಲಿಯನ್ನು ಕಂಡು ಬೆಚ್ಚಿ ಪ್ರಜ್ಞೆ ತಪ್ಪಿದ ಯುವತಿಯಾಗಿದ್ದಾಳೆ ರಸ್ತೆಯಲ್ಲಿ ವಿದ್ಯಾರ್ಥಿನಿಯ ಕಿರುಚಾಟವನ್ನು ಕೇಳಿಸಿಕೊಂಡ ಸಮೀಪದ ಮನೆಯವರು ರಸ್ತೆಗೆ ಬಂದು ನೋಡುತ್ತಿದ್ದಂತೆಯೇ ಯುವತಿ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಕಂಡು ಈಕೆಯನ್ನು ಮನೆಗೆ ಕರೆದೊಯ್ದು ನಂತರ ಯುವತಿಯ ಪೋಷಕರಾದ ಗಾಡಂಗಡ ಉಮೇಶ್‌ರವರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ರೈತ ಸಂಘದ ಪೊನ್ನಂಪೇಟೆ ಅಧ್ಯಕ್ಷರಾದ ಚೊಟ್ಟೆಕಾಳಪಂಡ ಮನು ಕೂಡಲೇ ಯುವತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಪೊನ್ನಂಪೇಟೆಯ ರಾಮಕೃಷ್ಣ ಆಸ್ಪತ್ರೆಗೆ ತಲುಪಿದ್ದಾರೆ. 
ಇಲ್ಲಿ ಮುಂಜಾನೆ ವೈದ್ಯರು ಲಭ್ಯವಿಲ್ಲದ ಕಾರಣ ಕೂಡಲೇ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದಾಳೆ. ಆದರೆ ಹುಲಿಯನ್ನು ಅತ್ಯಂತ ಸಮೀಪದಲ್ಲಿ ಕಂಡಿರುವುದರಿAದ ಭಯ 
(ಮೊದಲ ಪುಟದಿಂದ) ಈಕೆಯನ್ನು ಇನ್ನು ಕಾಡುತ್ತಿದೆ ಮತ್ತು ಗಾಬರಿಯಿಂದ ಇನ್ನೂ ಕೂಡ ಹೊರ ಬಂದಿಲ್ಲ. ಕಾಲೇಜಿನ ವಿದ್ಯಾಭ್ಯಾಸಕ್ಕಾಗಿ ರಕ್ಷ ದೇಚಮ್ಮ ತನ್ನ ಮಾವನ ಮನೆಯಾದ ಮುಗುಟಗೇರಿಯಿಂದ ಗೋಣಿಕೊಪ್ಪ ಕಾಲೇಜಿಗೆ ತೆರಳುತ್ತಿದ್ದಳು. ರಕ್ಷ ದೇಚಮ್ಮ ಹೇರ್ಮಾಡು ನಿವಾಸಿ ಕೇಚಮಾಡ ಉಮೇಶ್‌ರವರ ಮಗಳಾಗಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಪ್ರಯತ್ನದಿಂದ ವಿದ್ಯಾರ್ಥಿನಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಶ್ರೀಮಂಗಲ ಸಮೀಪದ ಕುಮುಟೂರು ಹಾಗೂ ಟಿ.ಶೆಟ್ಟಿಗೇರಿ ಬಳಿಯಲ್ಲಿ ಹುಲಿ ೨ ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಸಾರ್ವಜನಿಕರು ಈ ಆಘಾತದಿಂದ ಇನ್ನು ಕೂಡ ಹೊರಬಂದಿಲ್ಲ. ಅಷ್ಟರೊಳಗಾಗಿ ಹುಲಿಯು ಪೊನ್ನಂಪೇಟೆ ಸಮೀಪದ ಮುಗುಟಗೇರಿಯಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹುಲಿಯು ಜನವಸತಿ ಪ್ರದೇಶದಲ್ಲಿ ಆಗಿಂದಾಗ್ಗೆ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದು ಕಾಫಿ ಕುಯ್ಲಿನ ಸಮಯದಲ್ಲಿ ತೋಟದಲ್ಲಿ ಅಡಗಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಪೊನ್ನಂಪೇಟೆ  ಆರ್‌ಎಫ್‌ಒ ದಿವಾಕರ್ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.  
ದ.ಕೊಡಗಿನ ವಿವಿಧ ಭಾಗದಲ್ಲಿ ಹುಲಿಯ ಸಂಚಾರ ಹೆಚ್ಚಾಗಿರುವುದರಿಂದ ಈ ಭಾಗದ ರೈತರ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಜಾನುವಾರುಗಳನ್ನು ಕೊಂದು ತಿನ್ನುವುದಲ್ಲದೆ ಮನುಷ್ಯರ ಮೇಲೆಯೂ ಹುಲಿ ದಾಳಿ ನಡೆಸುತ್ತಿದ್ದು ಸಹಜವಾಗಿಯೇ ಗ್ರಾಮೀಣ ಭಾಗದಲ್ಲಿರುವ ಜನರು ನಡೆದುಕೊಂಡು ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಜಾನುವಾರುಗಳನ್ನು ಹಾಗೂ ಮನುಷ್ಯರನ್ನು ಬೆೆÃಟೆಯಾಡುತ್ತಿರುವ ಹುಲಿಯನ್ನು ಕೂಡಲೇ ಸೆರೆ ಹಿಡಿಯುವ ಕಾರ್ಯ ತುರ್ತಾಗಿ ಆಗಬೇಕೆಂದು ಮುಗುಟಗೇರಿ ರೈತ ಮುಖಂಡರಾದ ಚೀರಂಡ ಕಂದಾ ಸುಬ್ಬಯ್ಯ ಒತ್ತಾಯಿಸಿದ್ದಾರೆ. ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಿಜೆಪಿ ಪಕ್ಷದ ಮುಖಂಡರಾದ ಗೋಣಿಕೊಪ್ಪಲಿನ ಮಂಜುರೈ, ತಿತಿಮತಿಯ ಚೆಪ್ಪುಡೀರ ಮಾಚು, ಮತ್ತಿತರರು ಆಸ್ಪತ್ರೆಗೆ ತೆರಳಿ ಯುವತಿಯ ಆರೋಗ್ಯ ಕ್ಷೇಮ ವಿಚಾರಿಸಿದ್ದಾರೆ. 
 
Prev  Next

Press (ctrl +/ ctrl-), to zoom in/ out.

Complete access will only be given to registered users.


About us    Contact    Terms    Privacy Policy