ಕನ್ನಡ   Archives   epaper

SIGN UP

I have read the term and conditions!

OR


Existing user?

LOG IN

Forgot Your Password?Incorrect login or password
-೬,-೭,-೮ನೇ-ತರಗತಿ-ಆರಂಭ
ಮಡಿಕೇರಿ, ಫೆ. ೨೨: ಕೊರೊನಾ ಪರಿಸ್ಥಿತಿಯಿಂದ ಶೈಕ್ಷಣಿಕ ಕ್ಷೇತ್ರ ತಲೆಕೆಳಗಾಗಿದ್ದು, ಇದೀಗ ಮೆಲ್ಲನೆ ಚೇತರಿಕೆ ಕಾಣುತ್ತಿದೆ. ಈಗಾಗಲೇ ೯ ಮತ್ತು ೧೦ನೇ ತರಗತಿ ಆರಂಭಗೊAಡಿದ್ದು, ಕಾಲೇಜು ಶಿಕ್ಷಣ ಕೂಡ ಪ್ರಾರಂಭಗೊAಡಿದೆ. ವಿದ್ಯಾಗಮದ ಮೂಲಕ ಅರ್ಧ ದಿನ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದ ೬,೭,೮ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ದಿನ ತರಗತಿಗಳು ತಾ.೨೨ ರಿಂದ ಶುರುವಾಗಿದೆ. ತರಗತಿಯ ಮೊದಲ ದಿನ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆ ಕಡೆ ಮುಖ ಮಾಡಿದರು. ಜಿಲ್ಲೆಯಲ್ಲಿ ಒಟ್ಟು ೨೩,೩೬೯ ವಿದ್ಯಾರ್ಥಿಗಳಿದ್ದು, ಮಡಿಕೇರಿ ತಾಲೂಕಿನ ೬ನೇ ತರಗತಿಯ ೨,೨೩೭ ವಿದ್ಯಾರ್ಥಿಗಳ ಪೈಕಿ ೧,೪೯೬ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ೨,೯೫೫ ವಿದ್ಯಾರ್ಥಿ ಪೈಕಿ ೧,೮೭೦, ವೀರಾಜಪೇಟೆ ತಾಲೂಕಿನ ೨,೬೯೯ ವಿದ್ಯಾರ್ಥಿ ಪೈಕಿ ೧೯೪೦ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ೭ನೇ ತರಗತಿ ವಿಭಾಗದಲ್ಲಿ ೨,೭೮೦ ವಿದ್ಯಾರ್ಥಿಗಳ ಪೈಕಿ ೧,೭೧೦, ಮಡಿಕೇರಿ ತಾಲೂಕಿನ ೨,೨೧೨ ವಿದ್ಯಾರ್ಥಿಗಳ ಪೈಕಿ ೧,೭೧೦, ವೀರಾಜಪೇಟೆ ತಾಲೂಕಿನ ೨,೭೩೪ ವಿದ್ಯಾರ್ಥಿಗಳ ಪೈಕಿ ೧,೬೮೪, ಮಡಿಕೇರಿ ತಾಲೂಕಿನ ೮ನೇ ತರಗತಿ ವಿಭಾಗದಲ್ಲಿ ೨,೧೯೩ ವಿದ್ಯಾರ್ಥಿ ಪೈಕಿ ೧,೪೧೦, ಸೋಮವಾರಪೇಟೆ ತಾಲೂಕಿನಲ್ಲಿ ೨,೮೭೭ ವಿದ್ಯಾರ್ಥಿ ಪೈಕಿ ೧,೬೬೯, ವೀರಾಜಪೇಟೆ ತಾಲೂಕಿನ ೨,೬೮೨ ವಿದ್ಯಾರ್ಥಿಗಳ ಪೈಕಿ ೯೯೫ ವಿದ್ಯಾರ್ಥಿಗಳು ಹಾಜರಾಗಿದ್ದಾರೆ, ಸೂಕ್ತ ಮುಂಜಾಗ್ರತೆ: ಕಳೆದ ಕೆಲ ತಿಂಗಳಿನಿAದ ವಿದ್ಯಾಗಮದ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ಹಿನ್ನೆಲೆ ಸೂಕ್ತ ಮುಂಜಾಗ್ರತೆ ವಹಿಸಲಾಗಿತ್ತು.  ಶಾಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಥರ್ಮಲ್ ಸ್ಕಾö್ಯನಿಂಗ್ ಮೂಲಕ ಉಷ್ಣಾಂಶ ಪರೀಕ್ಷೆ, ಕೈಗಳಿಗೆ ಸ್ಯಾನಿಟೈಸರ್, ಕುಡಿಯಲು ಬಿಸಿ ನೀರು ವ್ಯವಸ್ಥೆ ಕಲ್ಪಿಸಲಾಗಿತ್ತು. 
ಒಂದು ಮೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳು 
(ಮೊದಲ ಪುಟದಿಂದ) ಮಾತ್ರ ಕೂರಲು ಅವಕಾಶ ನೀಡಲಾಗಿತ್ತು. ತರಗತಿ ಮುಗಿದ ಬಳಿಕ ಇಡೀ ತರಗತಿಯನ್ನು ಸ್ಯಾನಿಟೈಜ್ ಮಾಡಲಾಯಿತು.  
ಉತ್ಸಾಹದಿಂದ ಬಂದ ವಿದ್ಯಾರ್ಥಿಗಳು
ಪೂರ್ಣ ದಿನದ ತರಗತಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದರು. ಶಿಕ್ಷಕರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ನಡೆದುಕೊಂಡರು. ಬೆಳಿಗ್ಗೆ ೯ ರಿಂದ ಸಂಜೆ ೪.೩೦ರ ತನಕ ತರಗತಿ ನಡೆದವು.
ಸೂಕ್ತ ಮುಂಜಾಗ್ರತೆ ವಹಿಸಿಕೊಂಡಿದ್ದೇವೆ. ಪೋಷಕರು ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಆಗಾಗ್ಗೆ ಸ್ಯಾನಿಟೈಸರ್ ಬಳಸುತ್ತಿದ್ದೇವೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ ಎಂದು ಮಡಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ೭ನೇ ತರಗತಿ ವಿದ್ಯಾರ್ಥಿನಿ ರಶ್ಮಿ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.
ನಾಪೋಕ್ಲು: ಶಿಕ್ಷಣ ಇಲಾಖೆಯ ಆದೇಶದಂತೆ  ೬ರಿಂದ ೮ನೇ ತರಗತಿಯ ಪೂರ್ಣ ತರಗತಿಯ ಆರಂಭಗೊAಡಿದ್ದು, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಹಾಜರಾತಿ ಕಂಡುಬAದಿದೆ. ಗ್ರಾಮೀಣ ಪ್ರದೇಶ ಶಾಲೆಗಳÀಲ್ಲಿ ಅಲ್ಪ ಇಳಿಕೆಯಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ೬ನೇ ತರಗತಿಗೆ ೧೫ ಮತ್ತು ೭ನೇ ತರಗತಿಗೆ ೨೫ ಮಕ್ಕಳು ದಾಖಲಾಗಿದ್ದಾರೆ. ಪೂರ್ಣ ತರಗತಿಗೆ ೧೦೦% ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ.
ಗ್ರಾಮೀಣ ಪ್ರದೇಶದ ನೆಲಜಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ೬ನೇ ತರಗತಿಗೆ ೯ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಶಾಲೆಗೆ ೬ ವಿದ್ಯಾರ್ಥಿಗಳು ಹಾಜರಾದರು. ೭ನೇ ತರಗತಿಗೆ ೪ ವಿದ್ಯಾರ್ಥಿಗಳು ದಾಖಲಾಗಿದ್ದು, ೩ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ.
ಬಲ್ಲಮಾವಟಿ ನೇತಾಜಿ ಪ್ರೌಢ ಶಾಲೆಯ ೮ನೇ ತರಗತಿಗೆ ೨೬ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪೂರ್ಣ ತರಗತಿಗೆ ೧೯ ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಶನಿವಾರಸಂತೆ: ಭಾರತೀ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಸರಕಾರದ ಆದೇಶದಂತೆ ತಾ. ೨೨ ರಂದು ೮ನೇ ತರಗತಿಯು ಪೂರ್ಣ ಪ್ರಮಾಣದಲ್ಲಿ ಆರಂಭಗೊAಡಿದ್ದು, ವಿದ್ಯಾರ್ಥಿಗಳು ಉತ್ಸುಕರಾಗಿ ಶಾಲೆಗೆ ಆಗಮಿಸಿದರು.
ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಹೆಚ್ಚಿದ್ದು, ಸಂತೋಷದ ಸಂಗತಿಯಾಗಿದೆ ಎಂದು ತರಗತಿ ಶಿಕ್ಷಕರಾದ ಹೆಚ್.ಎನ್. ಮಂಗಳ, ಮುಖ್ಯ ಶಿಕ್ಷಕ ಪಿ. ನರಸಿಂಹಮೂರ್ತಿ ಮತ್ತು ಇತರ ಸಹ ಶಿಕ್ಷಕರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
*ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಹೆಚ್ಚಿದ್ದು, ಸಂತೋಷದ ವಿಷಯವಾಗಿದೆ ಎಂದು ಶಾಲಾ ಪ್ರಬಾರ ಮುಖ್ಯೋಪಾಧ್ಯಾಯಿನಿ ಜಾಕ್ಲಿನ್ ಹಾಗೂ ಸಹ ಶಿಕ್ಷಕರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ತರಗತಿಗಳು ಇüದೀಗ ಆರಂಭಗೊAಡಿದ್ದು, ೬, ೭ನೇ ತರಗತಿ ಹಾಗೂ ೮ನೇ ತರಗತಿ ಮಕ್ಕಳು ಶಾಲೆಗೆ ಹಾಜರಾದರು. ಸಿದ್ದಾಪುರ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಕೊಂಡು ತರಗತಿಗಳಿಗೆ ಹಾಜರಾದರು. ಇದೇ ರೀತಿ ಅಮ್ಮತ್ತಿ ಭಾಗದ ಒಂಟಿಯAಗಡಿ, ಹಾಲುಗುಂದ ಭಾಗದಲ್ಲಿ ಕೂಡ ಸರ್ಕಾರಿ ಶಾಲೆಯ ಹಾಗೂ ಖಾಸಗಿ ಶಾಲೆಯ ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು. ಪಾಠ ಪ್ರವಚನಗಳಲ್ಲಿ ಭಾಗಿಯಾಗಿದ್ದರು.
ಕೂಡಿಗೆ: ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು ಗ್ರಾಮ ವ್ಯಾಪ್ತಿಯ ೬, ೭ ಮತ್ತು ೮ ತರಗತಿಗಳು ಪ್ರಾರಂಭಗೊAಡವು.   
ಸರಕಾರದ ನಿಯಮನುಸಾರವಾಗಿ ವಿದ್ಯಾರ್ಥಿಗಳ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ ಸೇರಿದಂತೆ ಶಾಲೆಯ ಆವರಣವನ್ನು ಮತ್ತು ಕೊಠಡಿಗಳನ್ನು ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿ, ಮುನ್ನೆಚರಿಕೆ ಕ್ರಮಗಳನ್ನು ಅಯಾ ಶಾಲೆಗಳಲ್ಲಿ ತೆಗೆದುಕೊಳ್ಳಲಾಯಿತು.
ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳು ಪ್ರಾರಂಭಗೊAಡಿದ್ದು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.
ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಚನಹಳ್ಳಿ ಸರಕಾರಿ ಶಾಲೆ ಸೇರಿದಂತೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಬೆಳಗ್ಗೆ ೧೦ ರಿಂದ ಸಂಜೆ ೪ ರ ತನಕ ಪಾಠ ಪ್ರವಚನದಲ್ಲಿ ಪಾಲ್ಗೊಂಡರು. ೯ ಮತ್ತು ೧೦ನೇ ತರಗತಿಗೆ ಜನವರಿ ಒಂದರಿAದ ತರಗತಿ ನಡೆಯುತ್ತಿದ್ದು, ೬ ರಿಂದ ೮ರ ತನಕ ಇದುವರೆಗೆ ವಾರದಲ್ಲಿ ೨ ದಿನಗಳ ಕಾಲ ತರಗತಿ ನಡೆಸಲಾಗತ್ತಿತ್ತು ಎಂದು ಸರಕಾರಿ ಶಾಲಾ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ: ಕೊರೊನಾ ಲಾಕ್‌ಡೌನ್ ನಂತರ ಇಂದಿನಿAದ ಪ್ರಾರಂಭವಾದ ೬, ೭, ೮ನೇ ತರಗತಿಗಳಲ್ಲಿ ಸೋಮವಾರಪೇಟೆ ತಾಲೂಕಿನಾದ್ಯಂತ ಸರಾಸರಿ ಶೇ. ೫೦ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇತ್ತು.
ತಾಲೂಕಿನ ೧೬೫ ಸರ್ಕಾರಿ ಪ್ರಾಥಮಿಕ ಶಾಲೆ, ೨೩ ಸರ್ಕಾರಿ ಪ್ರೌಢಶಾಲೆ, ೧೫ ಅನುದಾನಿತ ಶಾಲೆಗಳೊಂದಿಗೆ ೩೨ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ತರಗತಿಗಳು ಪ್ರಾರಂಭಗೊAಡವು.
ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಶಾಲೆಗಳಿಗೆ ಆಗಮಿಸಿದ ಸಂದರ್ಭ ಸ್ಯಾನಿಟೈಸರ್ ನೀಡಿ ತರಗತಿಗಳಿಗೆ ಪ್ರವೇಶ ಕಲ್ಪಿಸಲಾಯಿತು. ಕೊರೊನಾ ವೈರಸ್ ಹರಡುವುದರಿಂದ ಪಾರಾಗುವ ವಿಧಾನಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರು ತಾಲೂಕಿನ ಗರಗಂದೂರು, ಹೊಸತೋಟ ಸೇರಿದಂತೆ ಇನ್ನಿತರ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್-೧೯ ಹಿನ್ನೆಲೆ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ಪರಿಶೀಲಿಸಿದರು.
Prev  Next

Press (ctrl +/ ctrl-), to zoom in/ out.

Complete access will only be given to registered users.


About us    Contact    Terms    Privacy Policy