ಪಕ್ಷಿ-ನುಂಗಿದ-ನಾಗರ-ಹಾವು-ಕಾಡಿಗೆ

 ಸುಂಟಿಕೊಪ್ಪ, ಜೂ. 17: ಇಲ್ಲಿಗೆ ಸಮೀಪದ ಮಾದಪಟ್ಟಣ ನಿವಾಸಿ ಕೆ.ಎನ್. ತಿಮ್ಮಯ್ಯ ಎಂಬವರ ಮಾವಿನ ತೋಟದ ಪಕ್ಷಿ ಗೂಡಿಗೆ ನುಗ್ಗಿದ ನಾಗರ ಹಾವನ್ನು ಸ್ನೇಕ್ ಶಾಜಿ ಹಿಡಿದು ಸಮೀಪದ ಆನೆ ಕಾಡಿಗೆ ಬಿಟ್ಟಿದ್ದಾರೆ.

ನಿನ್ನೆ ರಾತ್ರಿ ಸುಮಾರು 4 ಅಡಿ ಉದ್ದದ ನಾಗರ ಹಾವೊಂದು ಪಕ್ಷಿ ಗೂಡಿಗೆ ನುಗ್ಗಿ ಅವರು ಸಾಕಿದ್ದ 4 ಪಕ್ಷಿಗಳನ್ನು ನುಂಗಿದೆ. ಇದನ್ನು ಗಮನಿಸಿದ ತಿಮ್ಮಯ್ಯ ಅವರು, ಸುಂಟಿಕೊಪ್ಪದ ಹೊಸಕೋಟೆ ನಿವಾಸಿಯಾಗಿರುವ ಉರಗ ಪ್ರೇಮಿ ಸ್ನೇಕ್ ಶಾಜಿ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದಾಗ, ಕೂಡಲೇ ಸ್ಪಂದಿಸಿದ ಶಾಜಿ ಅಲ್ಲಿಗೆ ತೆರಳಿ ಹಾವನ್ನು ಹಿಡಿದು ತಂದು ಸಮೀಪದ ಆನೆ ಕಾಡಿಗೆ ಬಿಡುವದರೊಂದಿಗೆ ಮನೆಯವರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಈ ಪಕ್ಷಿ ಗೂಡಿಗೆ  ನಾಗರ ಹಾವು 5ನೇ  ಬಾರಿ ನುಗ್ಗಿರುವದಾಗಿ ತಿಮ್ಮಯ್ಯ ತಿಳಿಸಿದರು.

Home    About us    Contact