ಮಾದಾಪುರದಲ್ಲಿ-ಗಾಂಜಾ-ಮಾರಾಟ-:-ಮೂವರ-ಬಂಧನ

ಸೋಮವಾರಪೇಟೆ,ಆ.1: ತಾಲೂಕಿನ ಮಾದಾಪುರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿ ಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.ಮಾದಾಪುರದ ಇಗ್ಗೋಡ್ಲು ಜಂಕ್ಷನ್‍ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾದಾಪುರದ ನಿವಾಸಿ ವೀರೇಶ್ ಎಂಬವರ ಪುತ್ರ ವಿನೋದ್, ಜಂಬೂರು ಬಾಣೆಯ ಕಾಳಿದಾಸ ಅವರ ಪುತ್ರ ತಂಗದೊರೈ, ಯೂಸುಫ್ ಎಂಬವರ ಮಗ ಶಾಫಿ ಅವರುಗಳೇ ಬಂಧಿತ ಆರೋಪಿಗಳು. ಆರೋಪಿಗಳಿಂದ 185 ಗ್ರಾಂ ಗಾಂಜಾ ಹಾಗೂ ಸಿಗರೇಟ್ ಮಾದರಿ ಗಾಂಜಾ ತುಂಬಿಸಲು ಬಳಸುತ್ತಿದ್ದ ವಿದೇಶೀ ನಿರ್ಮಿತ ಸಣ್ಣ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರೂ. 6 ಸಾವಿರಕ್ಕೆ ಮೈಸೂರಿನಿಂದ ಗಾಂಜಾವನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಠಾಣಾಧಿಕಾರಿ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಬಸಪ್ಪ, ಮಂಜುನಾಥ್, ಶಿವರಾಜ್, ನದಾಫ್ ಹಾಗೂ ಕುಮಾರ್ ಅವರುಗಳು ಭಾಗಿಯಾಗಿದ್ದರು.

Home    About us    Contact