-ವಿದ್ಯುತ್-ಸ್ಪರ್ಶ:-ಯುವಕ-ಸಾವು

 

 
ಸಿದ್ದಾಪುರ, ಜು. 10: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ಸಾವನಪ್ಪಿದ ಘಟನೆ  ವಾಲ್ನೂರು ಗ್ರಾಮದಲ್ಲಿ ಗುರುವಾರದಂದು ನಡೆದಿದೆ. ವಾಲ್ನೂರು ಕಾಫಿ ತೋಟವೊಂದರಲ್ಲಿ ಕಬ್ಬಿಣದ ಏಣಿ  ಒಂದನ್ನು ತೆಗೆದುಕೊಂಡು ಹೋಗುತ್ತಿರುವ ಸಂದರ್ಭ ತೋಟದ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್  ತಂತಿಗೆ ಏಣಿ ತಗಲಿ ವಿದ್ಯುತ್ ಸ್ಪರ್ಶಗೊಂಡು ಅಜಯ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಮೂಲತಹ ಕಾನೂರು ನಿವಾಸಿಯಾಗಿದ್ದಾನೆ. ಸಿದ್ದಾಪುರ ಠಾಣಾಧಿಕಾರಿ ಮೋಹನ್‍ರಾಜ್, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Home    About us    Contact