-ಮಹಿಳೆ-ನಾಪತ್ತೆ
ಗೋಣಿಕೊಪ್ಪ ವರದಿ, ಜು. 10: ಮಾಯಮುಡಿ ಗ್ರಾಮದ ಮಡಿಕೆಬೀಡು ನಿವಾಸಿ ದಿ. ಉಮೇಶ್ ಪತ್ನಿ ಕವಿತಾ (37) ಕೂಲಿ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. 
ಅಂದಾಜು 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ತೆಳ್ಳಗಿನ ಮುಖ, ಎಡಗೈ ಸ್ವಲ್ಪ ಊನವಿದೆ. ತಮಿಳು, ಕನ್ನಡ, ಮಲೆಯಾಳಂ ಭಾಷೆಯಾಡುತ್ತಾರೆ.  
ಕಳೆದ ಮಾರ್ಚ್ 5 ರಂದು ಮನೆಯಿಂದ ಹೋದವರು ಹಿಂತಿರುಗಿ ಬಂದಿಲ್ಲ ಎಂದು ಮಗಳು ಮೀನಾ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಮಾಹಿತಿ ಇರುವವರು 08274-247333 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Home    About us    Contact