ಜಿಂಕೆ-ಬೇಟೆ:ಮೂವರ-ಬಂಧನ

ಗೋಣಿಕೊಪ್ಪ ವರದಿ, ಜೂ. 29: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿದ ಗೋಣಿಕೊಪ್ಪ ವರದಿ,  ಪೆÇನ್ನಂಪೇಟೆ ನ್ಯಾಯಾಧೀಶರ ಎದುರು ಆರೋಪಿಗಳನ್ನು ಹಾಜರಿ ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿತಿಮತಿ ಗ್ರಾಮದ ಆಟೋ ಚಾಲಕ ಸತೀಶ (46),  ಕೆ. ಮಂಜುನಾಥ್ (38), ಅಜಿತ್ (39) ಬಂಧಿತ ಆರೋಪಿಗಳು. ವಿಶ್ವ (30) ತಲೆಮರೆಸಿಕೊಂಡಿದ್ದಾನೆ. ಬಂಧಿತ ರಿಂದ ಒಂದು ಒಂಟಿ ನಳಿಗೆ ಕೋವಿ, ಜಿಂಕೆ ಚರ್ಮ ಸೇರಿದಂತೆ 9 ಕೆ.ಜಿ. ಮಾಂಸ, ಸಾಗಾಟಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆಯಲಾಗಿದೆ.

(ಮೊದಲ ಪುಟದಿಂದ) ಸೋಮವಾರ ಮುಂಜಾನೆ 3.30 ಸುಮಾರಿಗೆ ಮತ್ತಿಗೋಡು ವನ್ಯಜೀವಿ ವಲಯದ ತಂಡ ಗಸ್ತು ತಿರುಗುತ್ತಿದ್ದಾಗ ಜಿಂಕೆ ಮಾಂಸ ಸಾಗಾಟಕ್ಕೆ ಮುಂದಾಗಿದ್ದಾಗ ದಾಳಿ ನಡೆಸಿದೆ. ಹುಲಿ ಸಂರಕ್ಷಿತ ಪ್ರದೇಶದ ಕಾರೆಕಂಡಿ ಎಂಬಲ್ಲಿ ಜಿಂಕೆಗೆ ಗುಂಡು ಹೊಡೆದು ಸಾಗಿಸುತ್ತಿದ್ದರು.  ಈ ಸಂದರ್ಭ ಸೆರೆ ಸಿಕ್ಕಿದ್ದಾರೆ.  ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ನೇತೃತ್ವದಲ್ಲಿ ಡಿಆರ್ ಎಫ್‍ಒ ಅಧಿಕಾರಿಗಳಾದ ಯೋಗೇಶ್ವರಿ, ಸತೀಶ್, ಫಾರೆಸ್ಟರ್ ರವಿ ಕಾರ್ಯಾಚರಣೆಯಲ್ಲಿದ್ದರು.

Home    About us    Contact