ಇಪ್ಪತ್ತೊಂದು-ದಿನ-ಭಾರತ-ಲಾಕ್‍ಡೌನ್

ನವದೆಹಲಿ: ವಿಶ್ವಕ್ಕೆ ಸವಾಲಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ಸೋಂಕಿನ ದುಷ್ಪರಿಣಾಮ ವನ್ನು ಎದುರಿಸಲು ಸಾಮಾಜಿಕ ಅಂತರವನ್ನು ಕಾಪಾಡುವುದು ಮಾತ್ರ ಏಕೈಕ ಮಾರ್ಗವೆಂದು ದೇಶದ ಹಾಗೂ ವಿಶ್ವದ ಪರಿಣಿತರು ತೀರ್ಮಾನಕ್ಕೆ ಬಂದಿದ್ದಾರೆ. ಈ ಮಹಾಮಾರಿಯನ್ನು ಹೋಗ ಲಾಡಿಸಲು ಸದ್ಯಕ್ಕೆ ಅನ್ಯಮಾರ್ಗ ಕಾಣದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಾಣ ರಕ್ಷಣೆಗೋಸ್ಕರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೊಳ್ಳು ವಂತೆ ಮುಂದಿನ 21 ದಿನಗಳ ಕಾಲ ಭಾರತದಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿ ಗೊಳ್ಳಲಿದೆ. ಈ ಸಂದರ್ಭ ಭಾರತದ ಪ್ರತಿಯೊಂದು ನಗರ ಪ್ರದೇಶ, ಗ್ರಾಮೀಣ ಪ್ರದೇಶ, ದೇಶದ ಗಲ್ಲಿಗಲ್ಲಿಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ನಾಗರಿಕನು ಮನೆಯಿಂದ ಹೊರಗೆ ಬರದೆ ಗೃಹಬಂಧನದಲ್ಲಿg Àಬೇಕು ಎಂದು ಪ್ರಧಾನಿ ಕರೆ ನೀಡಿದರು. ನಿಮ್ಮ ಮನೆಗಳ ಮುಂಬಾಗಿಲಿನಲ್ಲಿ ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳಿ. ಯಾವದೇ ಕಾರಣಕ್ಕೆ ಆ ಲಕ್ಷ್ಮಣರೇಖೆಯನ್ನು ಕುಟುಂಬ ಸದಸ್ಯರು ದಾಟದಿರಿ ಎಂದು ನಿರ್ದೇಶಿಸಿದರು. ಇದರಲ್ಲಿ ನಾನು ಪ್ರಧಾನಿ, ನೀವು ಬೇರೆ ಎಂಬ ಭಾವನೆ ಇಲ್ಲ. ನಿಮ್ಮನ್ನು ಉಳಿಸಲು ಗೃಹದಿಂದ ಹೊರಗೆ ಹೋಗಬಾರದು. ಈಗಾಗಲೇ ವಿಶ್ವದ ಕೊರೊನಾ ಪೀಡಿತ ದೇಶಗಳ ಪೈಕಿ ಚೀನಾ, ಅಮೇರಿಕಾ, ಜರ್ಮನಿ, ಇಟಲಿ, ಇರಾನ್, ಸ್ಪೇನ್ ದೇಶಗಳಲ್ಲಿ ಕಂಡುಬಂದ ಅನುಭವಗಳ ಆಧಾರದಲ್ಲಿ ಪರಿಣಿತರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆ. ವಿಶ್ವಮಟ್ಟದಲ್ಲಿ 

 (ಮೊದಲ ಪುಟದಿಂದ) ದೊರೆತ ಅಂಕಿಅಂಶದಂತೆ ಮೊದಲ 67 ದಿನಗಳಲ್ಲಿ  ಒಂದು ಲಕ್ಷವಿದ್ದ ಸೋಂಕಿತರ ಸಂಖ್ಯೆ ನಂತರದ 11 ದಿನಗಳಲ್ಲಿ 1 ಲಕ್ಷದಂತೆ ಮತ್ತೆ 4 ದಿನಗಳಲ್ಲಿ ಪುನಃ 1 ಲಕ್ಷ ಏರಿಕೆಗೊಂಡು 3 ಲಕ್ಷ ತಲುಪಿದ ಸ್ಪಷ್ಟ ನಿದರ್ಶನವಿದೆ. ಅತ್ಯಂತ ಮುಂದುವರಿದ ರಾಷ್ಟ್ರಗಳಾದ ಇಟಲಿ, ಅಮೇರಿಕಾ, ಚೀನಾಗಳಲ್ಲಿ ವೈದ್ಯಕೀಯ ವಿಭಾಗದಲ್ಲಿ ಅತ್ಯಂತ ಆಧುನೀಕೃತ ಸೌಲಭ್ಯಗಳಿದ್ದರೂ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಇಂತಹ ದೇಶಗಳಿಗೆ ಸವಾಲಾಗಿರುವ ಕೊರೊನಾ ಭಾರತಕ್ಕೂ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೊರೊನಾ ಪರೀಕ್ಷೆಗೆ ಅಗತ್ಯ ವೈದ್ಯಕೀಯ ಉಪಕರಣಗಳು, ಪ್ರತ್ಯೇಕ ವಾರ್ಡ್‍ಗಳು, ವೆಂಟಿಲೇಟರ್‍ಗಳು, ಔಷಧಿ ಮುಂತಾದವುಗಳ ನೂತನ ವ್ಯವಸ್ಥೆ ಕಲ್ಪಿಸಲು ರೂ. 15000 ಕೋಟಿ ಹಣವನ್ನು ವಿನಿಯೋಗಿಸಲಾಗುವದು ಎಂದು ಪ್ರಧಾನಿ ಮೋದಿ ಮಾಹಿತಿ ಇತ್ತರು.
ಈ ನಿರ್ಧಾರದಿಂದಾಗಿ ದೇಶದ ಜನರ ಆರ್ಥಿಕ ವ್ಯವಸ್ಥೆಗೆ ಹೊಡೆತ ಉಂಟಾಗುತ್ತದೆ ಎನ್ನುವ ಅರಿವು ಕೇಂದ್ರ ಸರಕಾರಕ್ಕೆ ಇದೆ. ಆದರೆ  ಅದಕ್ಕೂ ಮುನ್ನ ಪ್ರತಿಯೊಬ್ಬ ಭಾರತೀಯನ, ಆತನ ಪರಿವಾರದ ಜೀವ ಉಳಿಯುವುದು ಅತಿ ಮುಖ್ಯವಾಗಿದೆ. ಜೀವವಿದ್ದರೆ ಮಾತ್ರ ಜೀವನದ ಆಶಾಕಿರಣವಿರುತ್ತದೆ. ಆ ಜೀವ ಉಳಿಯಬೇಕಾದರೆ  21 ದಿನಗಳ ಕಠಿಣ ನಿರ್ಧಾರ ಅತ್ಯಗತ್ಯ. ಈ ಹಿಂದೆ ಭಾನುವಾರದ ದಿನ ನೀವೆಲ್ಲರು ಜನತಾ ಕಫ್ರ್ಯೂವನ್ನು ಯಶಸ್ವಿಗೊಳಿಸಿದ್ದೀರಿ. ಇದಕ್ಕಾಗಿ ನೀವೆಲ್ಲರು ಪ್ರಶಂಸೆಗೆ ಪಾತ್ರರಾಗಿದ್ದೀರಿ. ಕಳೆದ 2 ದಿನಗಳಲ್ಲಿ ಜಾರಿಯಾಗಿದ್ದ ಲಾಕ್‍ಡೌನ್ ಕೂಡ ಎದುರಿಸಿದ್ದೀರಿ. ಇದೀಗ 3 ವಾರಗಳ ಕಾಲದ ಕಫ್ರ್ಯೂ ಮಾದರಿಯ ಕಾನೂನಾತ್ಮಕ ಆದೇಶವನ್ನು ಪ್ರಧಾನಿಯಾದ ನಾನೂ ಸೇರಿದಂತೆ ನೀವೆಲ್ಲರು ಪಾಲನೆ ಮಾಡಲೇಬೇಕು. ನಿಮ್ಮ, ನಮ್ಮ ಮಕ್ಕಳ, ಕುಟುಂಬದ ಹಿತಕ್ಕಾಗಿ ಇದು ಅನಿವಾರ್ಯವಾಗಿದೆ ಎಂದು ಪ್ರಧಾನಿ ದೃಢಪಡಿಸಿದರು.
ಇದೊಂದು ಸಂಕ್ರಮಣ ಕಾಲವಾಗಿದೆ. ಈ ಸಂಕಷ್ಟದಿಂದ ಹೊರಬರಲು ಸಂಯಮದ ಅವಶ್ಯಕತೆ ಇದೆ. ಈ ಸಂದರ್ಭ ಸೋಂಕಿತರ ಶುಶ್ರೂಷೆ ನಡೆಸುತ್ತಿರುವ ನರ್ಸ್‍ಗಳು, ವೈದ್ಯರುಗಳು, ಸಫಾಯಿ ಕರ್ಮಚಾರಿಗಳ ಒಳಿತಿಗಾಗಿ ನೀವೆಲ್ಲರೂ ಪ್ರಾರ್ಥಿಸಿ. ನಿಮಗಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಮಿತ್ರರ ಹಾಗೂ ಪೊಲೀಸರ ಸೇವೆಯನ್ನು ಸ್ಮರಿಸಿ ಎಂದು ಮೋದಿ ನೆನಪಿಸಿದರು.
ಈ ನಿರ್ಬಂಧ ಇರುವ ದಿನಗಳ ಸಂದರ್ಭ ಬಡವರಿಗೆ ಅವಶ್ಯಕ ವಸ್ತುಗಳ ಪೂರೈಕೆಗಾಗಿ ನಾಗರಿಕ ಸಮಾಜಗಳ , ಸಂಘಟನೆಗಳ ಸಹಕಾರ ಪಡೆದು ವ್ಯವಸ್ಥೆಗೊಳಿಸಲಾಗುವುದು. ಎಲ್ಲಾ ರಾಜ್ಯಗಳು ಕೂಡ ಇತರ ವಿಚಾರಗಳಿಗಿಂತಲು ಕೂಡ ಕೊರೊನಾ ಸವಾಲನ್ನು ಎದುರಿಸುವ ಸಲುವಾಗಿ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲಾ ಮಟ್ಟಗಳ, ಸ್ಥಾನೀಯ ಮಟ್ಟಗಳ, ಆಡಳಿತಗಳು ಕೂಡ ಈ ದಿಸೆಯಲ್ಲಿ ಕೈ ಜೋಡಿಸಬೇಕು. ಖಾಸಗಿ ವಲಯದ ಪ್ರಮುಖರು, ಖಾಸಗಿ ಆಸ್ಪತ್ರೆಗಳು ಕೂಡ ಸಹಕರಿಸಬೇಕೆಂದು ಮೋದಿ ಈ ಸಂದರ್ಭ ಸಲಹೆ ಇತ್ತರು.
 

Home    About us    Contact