ಹೀಗಿತ್ತು-ಕೊಡಗು-ಲಾಕ್‍ಡೌನ್...

ಮಡಿಕೇರಿ, ಮಾ. 24: ಕೊರೊನಾ ಆತಂಕದ ಗಂಭೀರತೆ ಯನ್ನು ಮೆಟ್ಟಿ ನಿಲ್ಲುವ ಪ್ರಯತ್ನವಾಗಿ ಕೊಡಗು ಜಿಲ್ಲೆಯಾದ್ಯಂತ ಸೆಕ್ಷನ್ 144 ರಂತೆ ನಿಷೇಧಾಜ್ಞೆಯೊಂದಿಗೆ ಇಡೀ ಜಿಲ್ಲೆ ‘ಲಾಕ್‍ಡೌನ್’ ಆಗಿದೆ.ತುರ್ತು ಪರಿಸ್ಥಿತಿಯ ರೀತಿಯ ಈ ಸನ್ನಿವೇಶ ಎಲ್ಲರನ್ನೂ ಆತಂಕಕ್ಕೆ ಈಡುಮಾಡುವುದರೊಂದಿಗೆ ಜನತೆ ಅಗತ್ಯ ವಸ್ತುಗಳಿಗಾಗಿ ಪರದಾಡು ವಂತಾಗಿದೆ. ಜಿಲ್ಲಾಡಳಿತ ರಾಜ್ಯ ಸರಕಾರದ ನಿರ್ಧಾರದಂತೆ ಕೊಡಗಿ ನಲ್ಲೂ ಹಲವು ನಿರ್ಬಂಧಗಳನ್ನು ಹೇರಿದ್ದು, ಜನತೆಯನ್ನು ಮನೆಯಲ್ಲೇ ಉಳಿಯುವಂತೆ ಮಾಡುವ ಪ್ರಯತ್ನವಾಗಿ ‘ದಂಡಂದಶಗುಣಂ’ ಎಂಬಂತೆ ಲಾಠಿ ಪ್ರಹಾರದ ಕ್ರಮವನ್ನು ಅಲ್ಲಲ್ಲಿ ನಡೆಸಿದೆ.ತಾ. 24 ರಂದು ಬೆಳಗ್ಗಿನ ಜಾವದಿಂದಲೇ ಪೊಲೀಸರ ಆಕ್ರೋಶಭರಿತ ಕಾರ್ಯಾಚರಣೆಯ ಫಲವಾಗಿ ಹಲವಾರು ಮಂದಿ ಲಾಠಿ ಏಟನ್ನು ತಿನ್ನಬೇಕಾಯಿತು. ಪತ್ರಿಕಾ ವಿತರಕರು, ಪತ್ರಕರ್ತರು ಸೇರಿದಂತೆ ಹಾಲಿನ ಅಂಗಡಿಯವರಿಗೂ ಇದರ ಬಿಸಿ ತಟ್ಟಿದ್ದು, ಈ ಬಗ್ಗೆ ಅಸಮಾಧಾನವೂ ಸ್ಫೋಟಗೊಂಡಿದ್ದು, ಇಂದಿನ ಬೆಳವಣಿಗೆಯಾಗಿತ್ತು.

ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಲ್ಲಿ ಪೊಲೀಸರ ಈ ಕ್ರಮ ಪ್ರಶ್ನೆ ಹಾಗೂ ಚರ್ಚೆಗೂ ಆಸ್ಪದವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಇದರ ಕುರಿತು ದೂರು ನೀಡಲಾಗಿತ್ತು.
ಜಿಲ್ಲಾಡಳಿತದ ಸೂಚನೆಯಂತೆ, ಮಡಿಕಲ್ ಶಾಪ್, ಪತ್ರಿಕೆ ವಿತರಣೆ, ಹಾಲು ಮತ್ತಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಇರಲಿಲ್ಲವಾದರೂ ಇವೆಲ್ಲ ನಿರ್ಧಾರದ ವಿರುದ್ಧವಾಗಿ ಕೆಲವು ಮಂದಿ ಪೊಲೀಸರು ನಡೆದು ಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಎಲ್ಲೆಲ್ಲೂ ಪೊಲೀಸ್ ‘ಬಿಗು’ ಸುಖಾಸುಮ್ಮನೆ ಬೀದಿಗೆ ಬರುತ್ತಿದ್ದ ಜನತೆಯನ್ನು ಮತ್ತೆ ಮನೆ ಸೇರುವಂತೆ ಮಾಡಿತ್ತು.
ಮ. 12 ರಿಂದ 2 ಗಂಟೆ ಅವಧಿ
ಜನತೆ ಅಗತ್ಯ ವಸ್ತುಗಳನ್ನು ಪಡೆಯಲು ಸಂಬಂಧಿಸಿದ ವಹಿವಾಟಿನ ಅಂಗಡಿಗಳನ್ನು ಮಾತ್ರ ತೆರೆಯಲು ನೀಡಲಾಗಿದ್ದು, ಅಪರಾಹ್ನ 12 ರಿಂದ 2 ಗಂಟೆಯ ಅವಧಿಯಲ್ಲಿ ಬಿರುಸಿನ ಚಟುವಟಿಕೆ ಕಂಡುಬಂದಿತು. ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಅಗತ್ಯ ಸಾಮಗ್ರಿ-ಸಂರಜಾಮುಗಳನ್ನು ಪಡೆದುಕೊಳ್ಳಬೇಕಾಯಿತು. ಮಡಿಕೇರಿಯ 
(ಮೊದಲ ಪುಟದಿಂದ) ಮೋರ್‍ನಂತಹ ಮಳಿಗೆಯಲ್ಲಿ ಒಂದು ಬಾರಿಗೆ ಕೇವಲ ನಾಲ್ಕೈದು ಮಂದಿ ಯನ್ನು ಮಾತ್ರ ಒಳ ಬಿಡಲಾಗುತ್ತಿತ್ತು. ಇತರರು ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಕಾಯಬೇಕಾಗಿತ್ತು. ಬೇಕರಿಯಂತಹ ಮಳಿಗೆ ತೆರೆಯಲು ಮುಂದಾಗಿದ್ದವರನ್ನು ಪೊಲೀಸರು ಮುಚ್ಚಿಸಿದರು.
ಕೆಲವೆಡೆ ಈ ಸಮಯದಲ್ಲಿ ದಿಢೀರನೆ ವಾಹನ ಜಂಗುಳಿಯೂ ಕಂಡುಬಂದು ಪೊಲೀಸರು ಇದನ್ನು ನಿಯಂತ್ರಿಸಿದರು. ನಿರ್ಧರಿತ ಸಮಯದ ಬದಲು ಉಳಿದ ವೇಳೆ ಯಲ್ಲಿ ವಾಹನ, ಜನ ಸಂಚಾರಕ್ಕೆ ಕಡಿವಾಣ ನಿರಂತರವಾಗಿತ್ತು.
ಜಿಲ್ಲೆಯ ಹಲವೆಡೆಗಳಲ್ಲಿ ಬೆಳಿಗ್ಗೆ ಯಿಂದ ವ್ಯಾಪಾರ ವಹಿವಾಟುಗಳ ಪ್ರಯತ್ನ ನಡೆದಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು-ಪಂಚಾಯಿತಿಯವರು ತಮ್ಮ ಅಧಿಕಾರವನ್ನು ಪ್ರದರ್ಶಿಸಬೇಕಾಯಿತು.
ಇನ್ನು ಕೆಲವೆಡೆಗಳಲ್ಲಿ ಕಾರ್ಮಿಕರ ಸಾಗಾಟ-ಓಡಾಟ ಮಾಮೂಲಿಯಾಗಿ ಕಂಡುಬಂದಿದ್ದಾಗಿಯೂ ಕೆಲವರು ಮಾಹಿತಿ ನೀಡಿದ್ದಾರೆ. ತಾ. 25 ರಂದು (ಇಂದು) ಯುಗಾದಿ ಹಬ್ಬ ಎದುರಾಗಿದ್ದರೂ ಮಡುಗಟ್ಟಿರುವ ಆತಂಕದಿಂದಾಗಿ ಸಂಭ್ರಮರಹಿತ ದಿನವಾಗಿ ತಾ. 24ರ ವಹಿವಾಟು ಮುಗಿಯಿತು.
ನಾಪೆÇೀಕ್ಲು: ಸರಕಾರ, ಜಿಲ್ಲಾಡಳಿತ ಕೊರೊನಾ ವೈರಸ್ ತಡೆಗಟ್ಟಲು ವಿವಿಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಹಲವರು ಈ ಬಗ್ಗೆ ಕ್ಯಾರೇ ಎನ್ನದೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದುದು ನಾಪೆÇೀಕ್ಲುವಿನಲ್ಲಿ ಕಂಡು ಬಂದಿದೆ.
ಏನೇನೋ ಸಾಬೂಬು ಹೇಳಿಕೊಂಡು ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನದಲ್ಲಿ ಸುತ್ತಾಡುವುದು ಕಂಡುಬಂತು. ಪೆÇಲೀಸರು ವಿಚಾರಿಸಿದರೂ ಸುಳ್ಳು ಹೇಳಿ ಮುಂದೆ ಸಾಗುವ ದೃಶ್ಯ ಮಾಮೂಲಿಯಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12ರಿಂದ ಅಪರಾಹ್ನ 2 ಗಂಟೆಯವರೆಗೆ ಸಮಯ ವಿಧಿಸಿದ್ದರೂ ಕೂಡ ನಾಪೆÇೀಕ್ಲು ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ತೆರೆದಿದ್ದ ತರಕಾರಿ ಅಂಗಡಿ ಎದುರು ಜನರು ಮುಗಿಬೀಳುತ್ತಿದ್ದುದು ಕಂಡುಬಂತು. ತಕ್ಷಣ ಪೆÇಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಿದರು. ನಂತರ ನಾಪೆÇೀಕ್ಲು ಪಟ್ಟಣದಲ್ಲಿ ಸ್ವಲ್ಪ ಮಟ್ಟಿಗೆ ಜನಸಂದಣಿ ಕಡಿಮೆಯಾಗಿದ್ದು ಗೋಚರಿಸಿತು.
ಬೇತು ಬಳಿ ಕೆಲವು ವರ್ತಕರು ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಂಗಡಿಯನ್ನು ಬಂದ್ ಮಾಡಿಸಿದರು.
ಮಧ್ಯಾಹ್ನ 12 ಗಂಟೆಯಿಂದ 2ರ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರೂ ಗ್ರಾಹಕರು ಹೆಚ್ಚಾಗಿ ಕಂಡು ಬರಲಿಲ್ಲ. 2 ಗಂಟೆಯ ನಂತರ ಮೆಡಿಕಲ್ ಸ್ಟೋರ್‍ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಯಿತು.
ಕೆಲವು ಅಂಗಡಿ ವರ್ತಕರು ದುಪ್ಪಟ್ಟು ದರದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು   - ಶಶಿ, ಪ್ರಭಾಕರ್

Home    About us    Contact