ಬೆಳಿಗ್ಗೆ-6-ರಿಂದ-8ರ-ವರೆಗೆ-ಹಾಲು-ಪತ್ರಿಕೆ-ಖರೀದಿಸಿ

ಮಡಿಕೇರಿ, ಮಾ. 24: ಕೊಡಗು ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ತಿದ್ದುಪಡಿ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಸಾರ್ವಜನಿಕರಿಗೆ ಹಾಲು ಮತ್ತು ದಿನಪತ್ರಿಕೆ ಖರೀದಿಗೆ ಮತ್ತು ಹಾಲು ವಿತರಕರಿಗೆ ಹಾಲು ವಿತರಿಸಲು ಅವಕಾಶ ಕಲ್ಪಿಸಲಾಗಿದೆ.ಜಿಲ್ಲೆಯ ಕಾಫಿ ತೋಟಗಳಿಗೆ ಕಾರ್ಮಿಕರು ಗುಂಪಾಗಿ ತೆರಳುವುದು ಮತ್ತು ಗುಂಪಾಗಿ ಕೆಲಸ ಮಾಡುವುದು ಕಂಡುಬಂದಿದ್ದು, ಈ ರೀತಿ ಗುಂಪಾಗಿ ತೆರಳಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.ಬೆಳಿಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ದಿನಪತ್ರಿಕೆ ಸೆಗ್ರಿಗೇಷನ್ (ವಿಭಜನೆ) ಮಾಡಲು ವಿತರಣೆದಾರರಿಗೆ ಹಾಗೂ ದಿನಪತ್ರಿಕೆಯನ್ನು ಮನೆ ಮನೆಗೆ ವಿತರಣೆ ಮಾಡುವ ಪೇಪರ್ ಬಾಯ್ಸ್‍ಗಳಿಗೆ ಪೇಪರ್ ವಿತರಿಸಲು ಬೆ. 8.30ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 

ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

Home    About us    Contact