ಫೀ.ಮಾ.-ಕಾರ್ಯಪ್ಪ-ಜನ್ಮದಿನಾಚರಣೆ-:-ವರ್ಷ-ಕಳೆದರೂ-ಬಾರದ-ಅನುದಾನ

ಮಡಿಕೇರಿ, ಜ. 13: ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ ಶಿಸ್ತಿನ ಸಿಪಾಯಿ, ಕೊಡಗಿನ ಹೆಮ್ಮೆಯ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯ ಗೊಂದಲ ಪ್ರಸಕ್ತ ವರ್ಷವೂ ಮುಗಿದಂತೆ ಕಂಡು ಬರುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಸರಕಾರಿ ಕಾರ್ಯಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಆಚರಣೆ ಕಾಣುತ್ತಿದ್ದ ಈ ಕಾರ್ಯಕ್ರಮ ಕಳೆದ ವರ್ಷ ಅದೇಕೋ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಂಡಿರಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕಾರ್ಯಪ್ಪ ಜನ್ಮದಿನಾಚರಣೆಯನ್ನು  ನಡೆಸಿಕೊಂಡು ಬರುತ್ತಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾಡಳಿತ ಗೊಂದಲಕ್ಕೆ ಒಳಗಾಗಿತ್ತು.ಮಡಿಕೇರಿ, ಜ. 13: ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ ಶಿಸ್ತಿನ ಸಿಪಾಯಿ, ಕೊಡಗಿನ ಹೆಮ್ಮೆಯ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯ ಗೊಂದಲ ಪ್ರಸಕ್ತ ವರ್ಷವೂ ಮುಗಿದಂತೆ ಕಂಡು ಬರುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಸರಕಾರಿ ಕಾರ್ಯಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಆಚರಣೆ ಕಾಣುತ್ತಿದ್ದ ಈ ಕಾರ್ಯಕ್ರಮ ಕಳೆದ ವರ್ಷ ಅದೇಕೋ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಂಡಿರಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕಾರ್ಯಪ್ಪ ಜನ್ಮದಿನಾಚರಣೆಯನ್ನು  ನಡೆಸಿಕೊಂಡು ಬರುತ್ತಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾಡಳಿತ ಗೊಂದಲಕ್ಕೆ ಒಳಗಾಗಿತ್ತು.

ಮುಂದುವರಿಸಲು ನಿರ್ಧರಿಸುವದನ್ನು ಇಲಾಖೆಯ ಮೂಲಕ ಪ್ರಕಟಿಸಿ ರೂ. 10 ಲಕ್ಷ ಅನುದಾನವನ್ನು ಮಂಜೂರು ಮಾಡಿತ್ತು. ಇದರಂತೆ ತರಾತುರಿಯಾದರೂ ಕಳೆದ ವರ್ಷ ಈ ಕಾರ್ಯಕ್ರಮ ಸಾಧಾರಣ ರೀತಿಯಲ್ಲಿ ಆಚರಿಸಲ್ಪಟ್ಟಿತ್ತು.
ಇನ್ನೂ ಬಿಡುಗಡೆಯಾಗದ ಅನುದಾನ
ಸರಕಾರವೇನೋ ರೂ. 10 ಲಕ್ಷ ಹಣ ಮಂಜೂರು ಮಾಡಿ ಕಾರ್ಯಕ್ರಮ ಮುಂದುವರಿಸುವ ಆದೇಶವನ್ನು ಅಧಿಕೃತವಾಗಿ ನೀಡಿದೆಯಾದರೂ; ಇದೀಗ ವರ್ಷವೇ ಪೂರ್ಣಗೊಳ್ಳುತ್ತಿದ್ದು ಇನ್ನೂ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. 
ಕಳೆದ ಬಾರಿಯ ಕಾರ್ಯಕ್ರಮಕ್ಕೆ ಸುಮಾರು ರೂ. 6ಲಕ್ಷ  ವೆಚ್ಚ ತಗುಲಿದೆ. ಈ ಪೈಕಿ ಇನ್ನೂ ಕಾರ್ಯಕ್ರಮ ನಡೆಸಲು ವ್ಯವಸ್ಥೆ ಮಾಡಿದವರಿಗೆ ಹಣ ಪಾವತಿಯಾಗಿಲ್ಲ. ಶಾಮಿಯಾನ, ಮೈಕ್ ಮತ್ತಿತರ ವ್ಯವಸ್ಥೆ, ಊಟದ ವೆಚ್ಚ, ಪಾಲ್ಗೊಂಡಿದ್ದ ಕಲಾ ತಂಡಗಳಿಗೆ ಸಂಭಾವನೆ 
(ಮೊದಲ ಪುಟದಿಂದ) ಈ ರೀತಿಯಾಗಿ ಇನ್ನೂ ಹಣ ಪಾವತಿಯಾಗಿಲ್ಲ. ಕಳೆದ ಬಾರಿ ಕೆಲಸ ವ್ಯವಸ್ಥೆ ಕಲ್ಪಿಸಿದ್ದ ಫೋರಂಗೂ ಹಣ ನೀಡಬೇಕಾಗಿದೆ.
ಕಳೆದ ಸೆಪ್ಟಂಬರ್‍ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಈಗಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವರಾಗಿರುವ ಸಿ.ಟಿ. ರವಿ ಅವರು ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದ್ದ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ಅವರು ಪತ್ರಿಕಾ ವರದಿಯನ್ನು ಆಧರಿಸಿ ಇದನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರವಿ ಅವರು ತ್ವರಿತವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರೂ ಇದೀಗ ಮತ್ತೆ ಐದು ತಿಂಗಳು ಕಳೆಯುತ್ತಿದೆ. ಆದರೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ.
ಜ. 28 ರಂದು ಜನ್ಮ ದಿನ
ಈ ನಡುವೆ ಕಾರ್ಯಪ್ಪ ಅವರ ಜನ್ಮ ದಿನ ಇದೇ ಜನವರಿ 28ಕ್ಕೆ ಬರುತ್ತಿದ್ದು; ಮತ್ತೊಮ್ಮೆ ಗೊಂದಲ ಸೃಷ್ಟಿಯಾಗುತ್ತಿದೆ. ಕಳೆದ ವರ್ಷದ ಅನುದಾನವೇ ಬಾರದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಏನೂ ತೋಚದಂತಿದೆ ಎಂದು ಹೇಳಲಾಗುತ್ತಿದೆ. ಜನವರಿ 28ಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು; ಈ ಕುರಿತು ಇಲಾಖೆಯಿಂದಾಗಲಿ, ಜಿಲ್ಲಾಡಳಿತದಿಂದಾಗಲಿ, ಯಾವದೇ ಸಿದ್ಧತೆಯಾಗಲಿ, ಪೂರ್ವಭಾವಿ ಸಭೆಯಾಗಲಿ ಈ ತನಕ ಜರುಗಿಲ್ಲ.
ತಾ. 15 ರಂದು ಫೋರಂ ಸಭೆ
ಕಾರ್ಯಪ್ಪ ಜನ್ಮದಿನಾಚರಣೆ ಕುರಿತು ತಾ. 15 ರಂದು ಫೋರಂನ ಪದಾಧಿಕಾರಿಗಳು ಸಭೆಯೊಂದನ್ನು ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ತಾ. 15ರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವದು. ಸರಕಾರ ವೀರ ಸೇನಾನಿಯ ಜನ್ಮ ದಿನಾಚರಣೆಯ ಮೂಲಕ ಯುವ ಜನಾಂಗವನ್ನು ದೇಶ ಪ್ರೇಮದ ಭಾವನೆಯತ್ತ ಉತ್ತೇಜಿಸಬೇಕಾಗಿದೆ. ಒಂದು ವೇಳೆ ಈ ಬಾರಿಯೂ ವೃಥಾಗೊಂದಲ ಸೃಷ್ಟಿಯಾದರೆ ಫೋರಂನಿಂದಲೇ ಸರಳವಾಗಿಯಾದರೂ ಕಾರ್ಯಕ್ರಮ ನಡೆಸಲಾಗುವದು. ಕೊಡವ ಸಾಹಿತ್ಯ ಅಕಾಡೆಮಿಯ ಸಹಕಾರವನ್ನೂ ಪಡೆಯುವ ಚಿಂತನೆ ಇದ್ದು; ಅಕಾಡೆಮಿ ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಕಳೆದ ವರ್ಷದ ಕಾರ್ಯಕ್ರಮದ ಸಂದರ್ಭ ಫೋರಂನಿಂದಲೂ ಹಲವು ಸಹಕಾರ ನೀಡಲಾಗಿತ್ತು ಎಂದು ಸುಬ್ಬಯ್ಯ ತಿಳಿಸಿದ್ದಾರೆ. ಫೋರಂನ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರು ಪ್ರತಿಕ್ರಿಯಿಸಿ ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ ದಿನವಾದ ಜನವರಿ 15ನ್ನು ದೇಶದ ರಕ್ಷಣಾ ಪಡೆಯಲ್ಲೇ ‘ಆರ್ಮಿ ಡೇ’ ಎಂದು ಆಚರಿಸಲಾಗುತ್ತಿದೆ. ನವದೆಹಲಿಯ ಪೆರೇಡ್ ಮೈದಾನಕ್ಕೂ ಕಾರ್ಯಪ್ಪ ಅವರ ಹೆಸರನ್ನೇ ನಾಮಕರಣ ಮಾಡಲಾಗಿದ್ದು; ಈ ದಿನದಂದು ಸೇನೆಯ ಸಾಮಥ್ರ್ಯ ಪ್ರದರ್ಶನ, ರಕ್ಷಣಾ ಪಡೆಯ ಮೂರು ವಿಭಾಗದ ಮುಖ್ಯಸ್ಥರು ಪಾಲ್ಗೊಳ್ಳುತ್ತಾರೆ. ಆದರೆ ಅವರ ತವರು ಜಿಲ್ಲೆಯಲ್ಲಿ ವರ್ಷಂಪ್ರತಿ ನಿರ್ಲಕ್ಷ್ಯದ ಮನೋಭಾವ ಕಂಡುಬರುತ್ತಿರುವದು ವಿಷಾದಕರ ಎಂದಿದ್ದಾರೆ. ಇವರ ಜನ್ಮ ದಿನವನ್ನು ರಾಷ್ಟ್ರೀಯ ಶಿಸ್ತು ದಿನವನ್ನಾಗಿ ಮಾಡಬೇಕೆಂಬದು ಫೋರಂನ ಅಭಿಲಾಷೆಯಾಗಿದೆ ಎಂದು ಅವರು ಹೇಳಿದ್ದಾರೆ.

Home    About us    Contact