ಕೂರ್ಗ್-ವಿಲೇಜ್---ಆಕ್ಷೇಪಣೆಗೆ-ದಿನಾಂಕ-ನಿಗದಿ

ಮಡಿಕೇರಿ, ಜ. 13: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಪ್ರವಾಸಿ ತಾಣ ಯೋಜನೆ ಸಂಬಂಧ ಆಕ್ಷೇಪಣೆ ಸಲ್ಲಿಸಲು ತಾ. 21ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.ರೂ. 98.50 ಲಕ್ಷ ವೆಚ್ಚದಲ್ಲಿನಿರ್ಮಾಣವಾಗುತ್ತಿರುವ ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ; ಈ ಯೋಜನೆಗೆ ಅವಕಾಶ ನೀಡಬಾರದೆಂದು ತಡೆಯಾಜ್ಞೆ ಕೋರಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಗಳ ದಾಖಲೆ ಒದಗಿಸುವಂತೆ ಪ್ರಿನ್ಸಿಪಲ್ ಮುನ್ಸಿಪ್ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಧೀಶರಾದ ಬಿ.ಕೆ. ಮನು ಅವರು; ಜಿಲ್ಲಾಡಳಿತಕ್ಕೆ ಸೂಚಿಸಿದ ಮೇರೆಗೆ ಕಳೆದ (ಮೊದಲ ಪುಟದಿಂದ) ತಾ. 22 ರಂದು ಜಿಲ್ಲಾಡಳಿತ ಪರ ಸರಕಾರಿ ಅಭಿಯೋಜಕರಾದ ಶ್ರೀಧರನ್ ನಾಯರ್ ಅವರು ದಾಖಲೆಗಳನ್ನು ಸಲ್ಲಿಸಿದ್ದರು. ಇದೇ ವೇಳೆ ಈ ಪ್ರಕರಣದಲ್ಲಿ ತಮ್ಮನ್ನೂ ಕೂಡ ವಾದಿಗಳಾಗಿ ಪರಿಗಣಿಸುವಂತೆ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಅವರೂ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆಯನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.ಇಂದು ಅಭಿಯೋಜಕ ಶ್ರೀಧರನ್ ನಾಯರ್ ಅವರು ರವಿಚಂಗಪ್ಪ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಸಲುವಾಗಿ ಸಮಾಯಾವಕಾಶ ಕೋರಿದರು. ಅಲ್ಲದೆ; ಅರ್ಜಿದಾರ ಕೆ.ಜಿ. ಹರೀಶ್ ಅವರು ಕೂಡ ಆಕ್ಷೇಪಣೆ ಸಲ್ಲಿಸುವ ಸಲುವಾಗಿ ಸಮಾಯಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆಕ್ಷೇಪಣೆ ಸಲ್ಲಿಸಲು ತಾ. 21ರ ದಿನಾಂಕ ನಿಗದಿಪಡಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ನಡುವೆ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು; ನಿರ್ಮಿತಿ ಕೇಂದ್ರ ವತಿಯಿಂದ ಕಾಮಗಾರಿ ನಿರ್ವಹಿಸಲಾಗುತ್ತಿದೆ. 


Home    About us    Contact