ಚಿನ್ನಾಭರಣ-ನಗದು-ಕಳವು

ಮಡಿಕೇರಿ, ಡಿ. 2: ಬೆಟ್ಟಗೇರಿ-ಹೆರವನಾಡು ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳುವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ ಕೆ.ಸಿ. ಮೋಹನ್ ರಾಜ್ ಎಂಬವರು ನಾಪೋಕ್ಲುವಿನಲ್ಲಿ ವಿವಾಹ ಸಮಾರಂಭವೊಂದಕ್ಕೆ ತೆರಳಿದ್ದ ವೇಳೆ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು 72 ಸಾವಿರ ನಗದು, 16 ಗ್ರಾಂನ ಎರಡು ಚಿನ್ನದ ಬಳೆ, 2 ಗ್ರಾಂ. 60 ಮಿಲಿಯ ಚಿನ್ನದ ಓಲೆ ಹಾಗೂ 4 ಗ್ರಾಂನ ಒಂದು ಚಿನ್ನದ ಓಲೆಯನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರ ತಂಡ ಹಾಗೂ ಶ್ವಾನದಳ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.


Home    About us    Contact