ಮಡಿಕೇರಿ, ಜೂ. ೮: ಕೊಡಗಿನ ಕ್ರೀಡಾತಾರೆಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಇದೀಗ ಕೊಡಗಿನ ಮತ್ತೋರ್ವ ಉದಯೋನ್ಮುಖ ಕ್ರೀಡಾ ಪ್ರತಿಭೆ ಮುರಿದಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸೀನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ೨೦೦ ಮೀಟರ್ ಓಟದಲ್ಲಿ ೨೩.೧ ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಇದು ನೂತನ ದಾಖಲೆಯಾಗಿದೆ.
ಈ ಹಿಂದೆ ಒಲಂಪಿಯನ್ ಅಶ್ವಿನಿ ನಾಚಪ್ಪ ಅವರು ೧೯೯೦ರಲ್ಲಿ ೨೦೦ ಮೀಟರ್ ಓಟದಲ್ಲಿ ೨೩.೪ ಸೆಕೆಂಡ್ನಲ್ಲಿ ಸಾಧನೆ ತೋರಿ ರಾಜ್ಯ ದಾಖಲೆ ನಿರ್ಮಿಸಿದ್ದರು. ಇದೀಗ ೩೬ ವರ್ಷಗಳ ಸುದೀರ್ಘ ಅಂತರದ ಬಳಿಕ ಒಲಂಪಿಯನ್ ಅಶ್ವಿನಿ ನಿರ್ಮಿಸಿದ್ದ ದಾಖಲೆಯನ್ನು ಕೊಡಗಿನವರೇ ಆದ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿಯಾಗಿರುವ ಉನ್ನತಿ ಅಯ್ಯಪ್ಪ ಮುರಿದಿರುವುದು ಹೊಸ ದಾಖಲೆ ಸೃಷ್ಟಿಯಾಗಿದೆ.
ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತಿ ಅಯ್ಯಪ್ಪ ತಮ್ಮ ಪೋಷಕರಾದ ತಂದೆ ಅಯ್ಯಪ್ಪ ಹಾಗೂ ತಾಯಿ ಪ್ರಮೀಳಾ ಇಬ್ಬರೂ ಅಥ್ಲೆಟ್ಗಳಾಗಿದ್ದು, ತಾವೂ ಕೂಡ ವೃತ್ತಿಪರವಾಗಿ ಅಥ್ಲೆಟಿಕ್ಸ್ನಲ್ಲಿ ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಮುಂದಿನ ಏಷ್ಯನ್ ಗೇಮ್ಸ್ಗೆ ಅರ್ಹತೆಗಳಿಸಿ ದೇಶಕ್ಕೆ ಪದಕ ತರುವ ಕನಸ್ಸು ಹೊಂದಿರುವುದಾಗಿ ಹೇಳಿದ್ದಾರೆ.
ಅಶ್ವಿನಿ ಸಂತಸ
೩೬ ವರ್ಷಗಳ ಹಿಂದೆ ತಾವು ನಿರ್ಮಿಸಿದ ದಾಖಲೆಯನ್ನು ಇದೀಗ ಯುವ ಪ್ರತಿಭೆ ಉನ್ನತಿ ಅಯ್ಯಪ್ಪ ಮುರಿದಿರುವ ಬಗ್ಗೆ ಒಲಂಪಿಯನ್ ಅಶ್ವಿನಿ ನಾಚಪ್ಪ ಅವರು ಸಂತಸ ವ್ಯಕ್ತಪಡಿಸಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸ್ವಾಗತಿಸಿದ್ದಾರೆ. “ಶಕ್ತಿ’’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ದಾಖಲೆಯನ್ನು ಮತ್ತೋರ್ವ ಕೊಡವತಿಯೇ ಮುರಿದಿರುವುದು ತಮಗೆ ಇನ್ನಷ್ಟು ಸಂತಸ ತಂದಿದೆ ಎಂದಿದ್ದಾರೆ.
ಇದಲ್ಲದೆ x ಖಾತೆಯಲ್ಲೂ ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಅಶ್ವಿನಿ ಅವರು ೩೬ ವರ್ಷಗಳ ಬಳಿಕ ತಮ್ಮ ದಾಖಲೆಯನ್ನು ಉನ್ನತಿ ಮುರಿದಿರುವುದು ಹೆಮ್ಮೆಯ ಕ್ಷಣವಾಗಿದೆ. ದಾಖಲೆಗಳು ಕುಸಿದಾಗ ಅದು ಕೇವಲ ಸಂಖ್ಯೆಗಳ ಬಗ್ಗೆ ಅಲ್ಲ. ಇದು ಯುವ ಪ್ರತಿಭೆಗಳು ಹೇಗೆ ಮುಂದೆ ಬರುತ್ತಾರೆ ಮತ್ತು ರಾಷ್ಟಿçÃಯ ವೇದಿಕೆಯಲ್ಲಿ ಛಾಪು ಮೂಡಿಸುತ್ತವೆ ಎಂಬುದನ್ನು ನೆನಪಿಸುತ್ತದೆ. ಅಭಿನಂದನೆಗಳು ಉನ್ನತಿ ಆಕೆಯ ಪೋಷಕರು ಮತ್ತು ತರಬೇತುದಾರರಿಗೂ ಸಹ ದೊಡ್ಡ ಚಪ್ಪಾಳೆ ಎಂದು ಬರೆದಿದ್ದಾರೆ. - ಶಶಿ