ಮನಿಲಾ, ಜೂ. ೮ : ಫಿಲಿಪೈನ್ಸ್ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ೭.೮ ತೀವ್ರತೆಯ ಭೂಕಂಪದಿAದ ೩೨ ಮಂದಿ ಮೃತಪಟ್ಟಿದ್ದು, ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಭೂಕAಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿದ್ದು, ಫಿಲಿಪೈನ್ಸ್ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾಓ, ಪಪುವಾ, ನ್ಯೂಗಿನಿಯಾ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಪ್ರಕಾರ, ಭೂಕಂಪವು ಫಿಲಿಪೈನ್ಸ್ನ ಮಿಂಡನಾವೊ ದ್ವೀಪದ ಸರಂಗಾನಿ ಪ್ರಾಂತ್ಯದಿAದ ಸುಮಾರು ೨೪ ಕಿಲೋಮೀಟರ್ ಪಶ್ಚಿಮ ಭಾಗದ ಸಮುದ್ರದಲ್ಲಿ ಸಂಭವಿಸಿದೆ. ಭೂಕಂಪದ ತೀವ್ರತೆ ಹೆಚ್ಚು ಇದ್ದ ಕಾರಣ ಹಲವು ಪ್ರದೇಶಗಳಿಗೆ ಭೂಕಂಪನ ಅನುಭವವಾಗಿದೆ.

ಜನರಲ್ ಸ್ಯಾಂಟೋಸ್ ನಗರ ಪೊಲೀಸ್ ಅಧಿಕಾರಿಗಳ ಪ್ರಕಾರ, ೩೨ ಮಂದಿ ಸಾವು ದೃಢಪಟ್ಟಿದ್ದು, ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿ ರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಸಂಪೂರ್ಣ ಕುಸಿದಿವೆ ಎಂದು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಜನರಲ್ ಸ್ಯಾಂಟೋಸ್ ನಗರದ ಒಂದು ವಾಣಿಜ್ಯ ಸಂಕೀರ್ಣ ಸಂಪೂರ್ಣವಾಗಿ ನೆಲಸಮವಾಗಿರುವ ದೃಶ್ಯಗಳು ಕಂಡುಬAದಿವೆ.

ಜಾಲಿಬೀ ಫಾಸ್ಟ್ಫುಡ್ ರೆಸ್ಟೋರೆಂಟ್ ಹೊಂದಿದ್ದ ಕಟ್ಟಡ ಕುಸಿದಿದ್ದು, ಮತ್ತೊಂದು ಪ್ರದೇಶದಲ್ಲಿ ಖಾಲಿಯಾಗಿದ್ದ ಶಾಲಾ ಕಟ್ಟಡವೂ ಧರೆಗುರುಳಿದೆ. “ದೇವರೇ, ಕಟ್ಟಡ ಸಂಪೂರ್ಣ ಕುಸಿದುಬಿಟ್ಟಿದೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿರುವುದು ವೀಡಿಯೊಗಳಲ್ಲಿ ಕೇಳಿಬಂದಿದೆ.

ಭೂಕAಪದ ಸುಮಾರು ಎರಡು ಗಂಟೆಗಳ ನಂತರ ೬.೧ ತೀವ್ರತೆಯ ಪ್ರಬಲ ಕಂಪನ (ಂಜಿಣeಡಿshoಛಿಞ) ಕೂಡ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಈ ನಡುವೆ ಅಧಿಕಾರಿಗಳು ಹಾನಿಗೊಳಗಾದ ಕಟ್ಟಡಗಳ ಸಮೀಪ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.