ಮಡಿಕೇರಿ ಜೂ. ೭: ಸಹಕಾರ ಕ್ಷೇತ್ರ ರೈತರ ಬೆನ್ನೆಲುಬಾಗಿದ್ದು, ಇಂತಹ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಾಹಾ ಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಿಕಾರ್ಡ್ ಬ್ಯಾಂಕ್, ಎಪಿಸಿಎಂಎಸ್, ಜೇನು ಸಹಕಾರ ಸಂಘ, ಪತ್ತಿನ ಹಾಗೂ ಮಾರಾಟ ಸಹಕಾರ ಸಂಘಗಳ ಲೆಕ್ಕಿಗರು, ಸಹಾಯಕ ಸಿಬ್ಬಂದಿಗಳಿಗೆ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶಿಕ್ಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ, ಸಹಕಾರ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು, ತಿದ್ದುಪಡಿಗಳು, ನೀತಿ ನಿಯಮ, ಕಾನೂನುಗಳನ್ನು ಆಯಾ ಕಾಲಘಟ್ಟದಲ್ಲಿ ಮಾರ್ಪಾಡು ಮಾಡಲಾಗುತ್ತದೆ. ಇಂತಹ ವಿಚಾರಗಳ ಕುರಿತು ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ಅರಿತುಕೊಳ್ಳುವುದು ಅತೀ ಅವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲಾ ಯೂನಿಯನ್ ಮೂಲಕ ಉತ್ತಮ ಸಹಕಾರ ಸಂಘಗಳಿಗೆ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಅಲ್ಲಿನ ಸಿಬ್ಬಂದಿಗಳ ಅಳಿಲು ಸೇವೆಯೂ ಮುಖ್ಯವಾಗುತ್ತದೆ ಎಂಬುದನ್ನು ನೆನಪಿಡಬೇಕು ಎಂದು ಸಲಹೆ ನೀಡಿದರು.
ಅತಿಥಿ ಉಪನ್ಯಾಸಕ ಹಾಗೂ ಹಾಸನದ ಸನ್ನದ್ದು ಲೆಕ್ಕಿಗರಾದ ಸಿ.ಎ. ಶಂಭುಲಿAಗಪ್ಪ ಅವರು ಜಿಎಸ್‌ಟಿ, ಆದಾಯ ತೆರಿಗೆ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ೨೦೧೭ರಿಂದ ದೇಶದಲ್ಲಿ ಏಕರೂಪದ ತೆರಿಗೆ ಎಂಬ ನೀತಿಯ ಅಡಿಯಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಈ ನಿಯಮ ರೂಪಿಸುವ ಸಂದರ್ಭ ಕನಿಷ್ಟ ೬ ಸಾವಿರ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಕಷ್ಟಸಾಧ್ಯವಾದರೂ ಇದರ ಬಗ್ಗೆ ಸಹಕಾರ ಕ್ಷೇತ್ರದ ಪ್ರತಿ ಸಿಬ್ಬಂದಿಯೂ ಕನಿಷ್ಟ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು.
ಇನ್‌ಪುಟ್ ಟ್ಯಾಕ್ಸ್, ಔಟ್‌ಪುಟ್ ಟ್ಯಾಕ್ಸ್, ಔಟ್‌ಪುಟ್ ಟ್ಯಾಕ್ಸ್ ಕ್ರೆಡಿಟ್, ರಿವರ್ಸ್ ಚಾರ್ಜ್ ಮೆಕಾನಿಸಂ ಮತ್ತಿತರ ವಿಚಾರಗಳ ಕುರಿತು ಸಹಕಾರ ಸಂಸ್ಥೆ ಸಿಬ್ಬಂದಿಗಳು ಅರಿವು ಹೊಂದಿರಬೇಕು. ಇಲ್ಲವಾದಲ್ಲಿ ಜಿಎಸ್‌ಟಿ ಪದ್ದತಿಯ ಲಾಭದಿಂದ ಸಹಕಾರ ಸಂಸ್ಥೆಗಳು ಹೊರಗೆ ಉಳಿದು ಬಿಡುತ್ತವೆ ಎಂದು ಎಚ್ಚರಿಸಿದರು. ಸಹಕಾರ ಸಂಸ್ಥೆಗಳು ‘ವಾರ್ಷಿಕ ಪಾವತಿ’ ಕುರಿತು ಕೊನೆ ದಿನದವರೆಗೆ ಕಾಯಬಾರದು. ಸೂಕ್ತ ಸಮಯದಲ್ಲಿ ಎಲ್ಲಾ ಪಾವತಿಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಪ್ರತಿ ದಿನದ ದುಬಾರಿ ದಂಡ ಮೊತ್ತದಿಂದ ಪಾರಾಗಲು ಸಹಾಯವಾಗಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಎ.ಎಸ್. ಶ್ಯಾಂಚAದ್ರ, ಎಂ.ಎA. ಶ್ಯಾಮಲ, ಎಂ.ಟಿ. ಸುಬ್ಬಯ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಉಪಸ್ಥಿತರಿದ್ದರು.