ೆಕಟ್ಟೆಯಲ್ಲಿ ಕಳೆದ ಸಾಲಿನ ೨೦೨೪-೨೫ನೇ ಜೂನ್ ಮೊದಲ ವಾರದಲ್ಲಿ ಶೇ. ೯೦ ರಷ್ಟು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಾಗಿ, ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಮತ್ತು ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚು ಮಳೆ ಬೀಳುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ಮುಂಗಾರು ಮಳೆ ಹಿನ್ನಡೆ ಕಾಣುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ.
ಕಳೆದ ಸಾಲಿನಲ್ಲಿ ಜೂನ್ ಮೊದಲ ವಾರದಲ್ಲಿ ನೀರಿನ ಸಂಗ್ರಹ ಮಟ್ಟವು ೬.೫೦. ಟಿ.ಎಂ.ಸಿಯಷ್ಟಿತ್ತು. ಕಳೆದ ಸಾಲಿನಲ್ಲಿ ಮುಂಗಾರು ಮಳೆಯು ಮೇ ತಿಂಗಳುಗಳಲ್ಲಿ ಹೆಚ್ಚು ಬಿದ್ದ ಕಾರಣದಿಂದಾಗಿ ಅಣೆಕಟ್ಟೆಯ ಒಳ ಹರಿವು ೧.೮೦೦ ಕ್ಯೂಸೆಕ್ಸ್ ನೀರು ಬರುತ್ತಿದ್ದ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶದ ಮೂಲಕ ಜೂನ್ ಮೊದಲ ವಾರದಲ್ಲಿ ವಿದ್ಯುತ್ ಘಟಕದ ಮೂಲಕ ನದಿಗೆ ೧.೬೦೦. ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ಮಳೆಯ ಪ್ರಮಾಣವು ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕೇವಲ ೨.೯೭. ಟಿ.ಎಂ.ಸಿ. ಮಾತ್ರ ಇದೆ. ದಿನಂಪ್ರತಿ ಕೇವಲ ೨೦೦. ಕ್ಯೂಸೆಕ್ಸ್ ನೀರು ಮಾತ್ರ ನದಿಗೆ ಹರಿಯುತ್ತಿದೆ.
ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮದ ಸೂಚನೆಯಂತೆ ನೀರಾವರಿ ಇಲಾಖೆಯ ಮುಖೇನ ಅಣೆಕಟ್ಟೆಯ ಮುಖ್ಯ ಕ್ರಸ್ಟ್ ಗೇಟ್ಗಳ ದುರಸ್ತಿ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕಾಗುತ್ತಿದೆ. ಮುಂದಿನ ದಿನಗಳಲ್ಲಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಸಂದರ್ಭದಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಮುಂದಿನ ಹಂಗಾಮಿ ಬೆಳೆಗೆ ನೀರು ಹರಿಸಲಾಗುವುದು ಎಂದು ಅಣೆಕಟ್ಟೆಯ ಉಸ್ತುವಾರಿ ಕಿರಣ್ ದೇವಯ್ಯ ಮಾಹಿತಿ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.