ವೀರಾಜಪೇಟೆ, ಜೂ. ೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದ ಹೆಗ್ಗಳ ಕಾರ್ಯಕ್ಷೇತ್ರದ ನಂದಾದೀಪ ಹಾಗೂ ಧರ್ಮಶಾಸ್ತç ಸಂಘದ ೧೬ನೇ ವರ್ಷದ ವಾರ್ಷಿಕೋತ್ಸವವನ್ನು ಬೇಟೋಳಿಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಕ್ತಿ ವೃದ್ಧಾಶ್ರಮದ ೨೫ ವೃದ್ಧರಿಗೆ ಒಂದು ವಾರಕ್ಕೆ ಬೇಕಾದ ಅಕ್ಕಿ, ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುವ ಮುಖಾಂತರ ಒಕ್ಕೂಟದ ಸದಸ್ಯರು ಮಾನವೀಯ ಸೇವೆ ಸಲ್ಲಿಸಿದರು. ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷೆ ಮಲ್ಲಿಗೆ, ಹೆಗ್ಗಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶಿಲ್ಪಾ, ವೀರಾಜಪೇಟೆ ವಲಯದ ಮೇಲ್ವಿಚಾರಕ ಶಿವಕುಮಾರ್, ಸಂಘದ ಸದಸ್ಯರು ಭಾಗವಹಿಸಿದ್ದರು.