ಮಡಿಕೇರಿ, ಜೂ. ೭: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಮಹಾಸಭೆ ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಬಾಚರಣಿಯಂಡ ರಾಣು ಅಪ್ಪಣ್ಣ ವಹಿಸಿದ್ದರು. ರಾಣು ಅಪ್ಪಣ್ಣ ಅವರು ಸುಮಾರು ೧೪ ವರ್ಷಗಳ ಅವಧಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಮುಂದಿನ ಅವಧಿಗಾಗಿ ಹೊಸ ಅಡಳಿತ ಮಂಡಳಿಯನ್ನು ನೇಮಕ ಮಾಡಲು ವಿನಂತಿಸಿದರು.

ಯುವ ಪೀಳಿಗೆ ಪರಿಷತ್ತಿನ ಜವಾಬ್ದಾರಿಯನ್ನು ಕೊಡುವುದು, ಭಾಷೆ, ನೆಲ ಸಂಸ್ಕೃತಿ, ಪದ್ಧತಿ ಇವುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆಯಿತ್ತರು.

ಎಲ್ಲಾ ಸದಸ್ಯರುಗಳ ಒಮ್ಮತದೊಂದಿಗೆ ಮುಂದಿನ ೩ ವರ್ಷಗಳ ಅವಧಿಗಾಗಿ ಹೊಸ ಕಾರ್ಯಕಾರಿ ಮಂಡಳಿಯನ್ನು ನೇಮಕ ಮಾಡಲಾಯಿತು.

ಅಧ್ಯಕ್ಷೆಯಾಗಿ ಐಚಂಡ ರಶ್ಮಿ ಮೇದಪ್ಪ, ಉಪಾಧ್ಯಕ್ಷೆಯಾಗಿ ಕರವಂಡ ಸರಸು ಪೆಮ್ಮಯ್ಯ, ಕಾರ್ಯದರ್ಶಿಯಾಗಿ ಕೋಡಂಗಡ ಡೈನಾ ದಮಯಂತಿ, ಖಜಾಂಚಿಯಾಗಿ ಕೊಕ್ಕಲೆರ ಧರಣಿ ಸೋಮಣ್ಣ ಇವರುಗಳನ್ನು ಅವಿರೋಧವಾಗಿ ನೇಮಕ ಮಾಡಲಾಯಿತು. ಕಾರ್ಯಕಾರಿ ಸದಸ್ಯರುಗಳಾಗಿ ಮೂವೆರ ರೇಖಾ ಪ್ರಕಾಶ್, ಸುಳ್ಳಿಮಾಡ ಶಿಲ್ಪಾ ಅಪ್ಪಣ್ಣ, ನೂರೆರ ರತಿ ಅಚ್ಚಪ್ಪ, ಅಚ್ಚಕಾಳೆರ ಸವಿತಾ ಮೊಣ್ಣಪ್ಪ, ಅಜ್ಜಮಾಡ ಸಾವಿತ್ರಿ ಪೆಮ್ಮಯ್ಯ ಹಾಗು ಮಂಡೆಪAಡ ತ್ಯಾಗಿ ಅಪ್ಷಯ್ಯ ಇವರುಗಳನ್ನು ನೇಮಿಸಲಾಯಿತು.

ಸಭೆಯಲ್ಲಿ ಅ. ಕೊ. ಸ. ಪೊಮ್ಮಕ್ಕಡ ಪರಿಷತ್ತು ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು, ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಸದಸ್ಯರುಗಳು ಉಪಸ್ಥಿತರಿದ್ದರು.