ಮಡಿಕೇರಿ, ಮೇ ೨೩: ಹೇರೂರು ಗ್ರಾಮದ ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಪ್ರಾರ್ಥನಾ ಮಂದಿರವನ್ನು ಸರಕಾರದ ವಶಕ್ಕೆ ಪಡೆದು ಆಸ್ಪತ್ರೆಯಾಗಿ ಮಾಡುವಂತೆ ಹೇರೂರು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಬಿಜೆಪಿ ಪ್ರಮುಖ ಎಂ.ಸಿ. ಚಂದ್ರಶೇಖರ್; ಹೇರೂರು ಗಿರಿಜನ ಹಾಡಿಯ ಸಮಾಜಕಲ್ಯಾಣ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿ ಅದರ ಉದ್ಘಾಟನೆಗೆ ಇತ್ತೀಚೆಗೆ ತಮಿಳುನಾಡಿನ ಕೆಲವರು ಆಗಮಿಸಿದ್ದ ಸಂದರ್ಭ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆಗಮಿಸಿ ಕ್ರಮ ಕೈಗೊಂಡಿದ್ದರು. ಆದರೆ ನಂತರದಲ್ಲಿ ಅವರುಗಳ ಮೇಲೆ ಕೈಗೊಂಡಿರುವ ಬಗ್ಗೆ ಯಾವದೇ ಮಾಹಿತಿ ಇಲ್ಲ. ಈ ವಿಚಾರದ ಬಗ್ಗೆ ಹೋರಾಟ ಮಾಡಿದ ಬಳಿಕ ಇದೀಗ ಜಿಲ್ಲಾಧಿಕಾರಿಗಳು ಆ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದು ಇಲಾಖೆಗೆ ಸಂಬAಧಿಸಿದ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಂಬAಧಿಸಿದ ಇಲಾಖೆಗೆ ಸುಚನೆ ನೀಡಿದ್ದಾರೆ. ಈ ಕಟ್ಟಡವನ್ನು ಆಸ್ತೆçಯನ್ನಾಗಿ ಮಾಡಿದರೆ ಹೇರೂರು ಹಾಡಿಯ ೩೨೦ ಮಂದಿ ಹಾಗೂ ಪಕ್ಕದ ಕಲ್ಲೂರು ಹಾಡಿಯ ಜನರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಹಾಡಿವಾಸಿಗಳು ಮುಗ್ಧರಾಗಿದ್ದು, ಅವರುಗಳನ್ನು ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಸಂಬAಧಿಸಿದ ಸಮಾಜ ಕಲ್ಯಾಣ ಇಲಾಖೆಯವರು ಹಾಡಿಗಳಿಗೆ ಭೇಟಿ ನೀಡಿ ಅವರುಗಳ ಆರೋಗ್ಯ, ಕಷ್ಟ ಸುಖ ವಿಚಾರಿಸಿದರೆ ಮತಾಂತರದAತಹ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಮತಾಂತರವಾಗಿರುವವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಲಿದ್ದು, ಅವರುಗಳಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಕಡಿತಗೊಳಿಸಿದರೆ ಮತಾಂತರವಾಗುವದು ಸ್ಥಗಿತಗೊಳ್ಲಲಿದೆ ಎಂದು ಹೇಳಿದರು.
ನಾಕೂರು ಶಿರಂಗಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಸಿ. ಜಗನ್ನಾಥ್ ಮಾತನಾಡಿ; ಹೇರೂರು ಹಾಡಿಯಲ್ಲಿ ೨೦೦ಕುಟುಂಬಗಳು ನೆಲೆಸಿದ್ದು, ಎಲ್ಲರಿಗೂ ಸರಕಾರದಿಂದಲೇ ಮನೆ ನಿರ್ಮಿಸಿಕೊಡಲಾಗಿದ್ದು, ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೂ ತಮಿಳುನಾಡಿನಿಂದ ಬಂದು ಮುಗ್ಧ ಜನರನ್ನು ಮತಾಂತರ ಮಾಡುತ್ತಿದ್ದಾರೆ. ಅವರುಗಳಿಗೆ ತಿಳುವಳಿಕೆ ಕಡಿಮೆ ಇದ್ದು, ಆಮಿಷ ತೋರಿ ಮತಾಂತರ ಮಾಡಲಾಗುತ್ತಿದೆ. ಆರೋಗ್ಯ ಸಮದ್ಯೆ ಸರಿಪಡಿಸುದಾಗಿ ಹೇಳಿ ಹೆಚ್ಚಿನ ಜನರನ್ನು ಮತಾಂತರ ಮಾಡಲಾಗುತ್ತಿದ್ದು ಶೇ.೯೦ರಷ್ಟು ಮಂದಿ ಮತಾಂತರಗೊAಡಿದ್ದಾರೆ ಎಂದು ಹೇಳಿದರು. ಶಾಂತಿಯಿAದ ಕೂಡಿರುವ ಗ್ರಾಮದಲ್ಲಿ ಎಲ್ಲರೂ ಯಾವದೇ ತಾರತಮ್ಯವಿಲ್ಲದೆ ಜೀವನ ಸಾಗಿಸುತ್ತಿದ್ದು, ಹಾಡಿವಾಸಿಗಳು ಹಾಗೂ ಗ್ರಾಮಸ್ಥರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ, ಇದೀಗ ಹೊರ ರಾಜ್ಯದಿಂದ ಬಂದು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತಾಂತರವಾಗುವದನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಬಿ.ಎಸ್. ವಸಂತ, ಗ್ರಾಮಸ್ಥರಾದ ಕೆ.ಎಸ್. ರಮೇಶ್, ಚರಣ್ ತೆಕ್ಕಡೆ, ಗಗನ್ ಮಂದೋಡಿ ಇದ್ದರು.