ಡಾಲು ಅವರ ಪತ್ನಿ ರಾಜೇಶ್ವರಿ (೪೩) ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಡಾಲು ಅವರು ಪಿಟ್ಸ್ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಡಾಲು ಅವರು ಕಿರಿಯ ವಯಸ್ಸಿನಿಂದಲೇ ಜಾನಪದ ಕಲಾವಿದರಾಗಿದ್ದು ಅನೇಕ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ತಾ. ೧೭ ರ ಭಾನುವಾರ ರಾತ್ರಿ ಪಿಟ್ಸ್ನಿಂದಾಗಿ ಡಾಲು ಆಯ ತಪ್ಪಿ ಬಿದ್ದಿದ್ದಾರೆ, ತಕ್ಷಣ ರಾಜೇಶ್ವರಿ ಅವರು ತಮ್ಮ ಗರ್ಭಿಣಿ ಮಗಳು ಮತ್ತು ಅಳಿಯನೊಂದಿಗೆ ಭಾನುವಾರ ರಾತ್ರಿ ತಮ್ಮ ಪತಿಯನ್ನು ಗೋಣಿಕೊಪ್ಪಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮಿದುಳು ನಿಷ್ಕಿçಯವಾಗಿರಬಹುದಾಗಿ ವೈದ್ಯರು ಸಂಶಯ ವ್ಯಕ್ತÀಪಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ೪೮ ಗಂಟೆಗಳ ಪರಿಶೀಲನೆ ಬಳಿಕ ಮಿದುಳು ನಿಷ್ಕಿçಯತೆ ಖಾತರಿಗೊಂಡಿದ್ದು ಬಳಿಕ ಮೈಸೂರು ಮತ್ತು ಬೆಂಗಳೂರಿನಿAದ ಪರಿಣಿತ ವೈದ್ಯರುಗಳನ್ನು ಕರೆಸಲಾಯಿತು. ಡಾಲು ಅವರ ಪತ್ನಿ ರಾಜೇಶ್ವರಿ ತೋಟಗಳಲ್ಲಿ ಹಾಗೂ ಮನೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ, ತನ್ನ ಪತಿಯ ಮಿದುಳು ನಿಷ್ಕಿçಯವಾದಾಗ ಪರೋಪಕಾರದ ವಿಶಾಲ ಚಿಂತನೆಯಿAದ ಅಂಗಾAಗ ದಾನಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಅವರ ಮಗಳು ಅನುಷಾ ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿರುವ ನವೀನ್ ಅವರನ್ನು ವಿವಾಹವಾಗಿದ್ದಾರೆ. ಈ ಘಟನೆ ಸಂದರ್ಭ ಆಕೆ ತನ್ನ ಪತಿಯೊಂದಿಗೆ ಅರವತ್ತ್ತೊಕ್ಕಲುವಿನಲ್ಲಿದ್ದರು. ತನ್ನ ತಂದೆಯ ಅಂಗಾAಗ ದಾನಕ್ಕೆ ಈಕೆಯೂ ಸಮ್ಮತಿಯಿತ್ತಿದ್ದು ತನ್ನ ತಂದೆಯನ್ನು ಆಸ್ಪತ್ರೆಗೆ ಒಯ್ಯುವ ಸಂದರ್ಭ ಅವರ ಪತಿ ಸಹಿತವಾಗಿ ತಾಯಿಯೊಂದಿಗೆ ಓಡಾಡಿದ್ದಾರೆ.. ರಾಜೇಶ್ವರಿ ಅವರ ಮಗ ಹರ್ಷ ಗೋಣಿಕೊಪ್ಪದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆÉ.ಮಡಿಕೇರಿ, ಮೇ ೨೩: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಮಿದುಳು ನಿಷ್ಕಿçಯಗೊಂಡ ವ್ಯಕ್ತಿಯಿಂದ ಅಂಗಾAಗ ಸಂಗ್ರಹಣೆ ಯಶಸ್ವಿಯಾಗಿ ನೆರವೇರಿದ್ದು, ಕೊಡಗು ಜಿಲ್ಲೆಯ ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ಗೋಣಿಕೊಪ್ಪ ಸಮೀಪದ ಅರವತ್ತೊಕ್ಲು ಗ್ರಾಮದ ೪೬ ವರ್ಷದ ಡಾಲು ಅವರು ಪಿಟ್ಸ್ನಿಂದ ಬಿದ್ದ ಆಘಾತದಲ್ಲಿ ತೀವ್ರ ತಲೆಗೆ ಗಾಯಗೊಂಡು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಬ್ರೇನ್ಸ್ಟೆಮ್ ಡೆತ್ ಶಂಕೆ ವ್ಯಕ್ತಪಡಿಸಿದರು. ಭಾರತೀಯ ಕಾನೂನು ಪ್ರಕಾರ ಎರಡು ಹಂತಗಳಲ್ಲಿ ವೈದ್ಯಕೀಯ ಸಮಿತಿಯಿಂದ ಪರೀಕ್ಷೆ ನಡೆಸಿ, ೪೮ ಗಂಟೆಗಳ ವೀಕ್ಷಣೆಯ ಬಳಿಕ ಮಿದುಳು ನಿಷ್ಕಿçಯತೆಯನ್ನು ದೃಢಪಡಿಸಲಾಯಿತು.
ಈ ಸಂದರ್ಭದಲ್ಲಿ ಕೊಡವ ಭಾಷಿಕ ೨೧ ಜನಾಂಗದವರಲ್ಲಿ ಒಬ್ಬರಾದ ಡಾಲು ಅವರ ಪತ್ನಿ ರಾಜೇಶ್ವರಿ ಹಾಗೂ ಕುಟುಂಬ ಸದಸ್ಯರು ಮಹತ್ವದ ಮಾನವೀಯ ನಿರ್ಧಾರ ಕೈಗೊಂಡು ಅಂಗಾAಗ ದಾನಕ್ಕೆ ಒಪ್ಪಿಗೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಈಗಾಗಲೇ ಸರಕಾರಿ ಅಧೀನದ ಅಂಗಾAಗ ದಾನ ನೆರವಿನ ಸಂಸ್ಥೆಗಳಾದ ಸೋಟ್ಟೋ ಮತ್ತು ನೋಟ್ಟೋಗಳಿಂದ ಮಾನ್ಯತೆ ಪಡೆದಿರುವ ಹಿನ್ನೆಲೆ, ಪ್ರಕರಣವನ್ನು ಈ ಸಂಸ್ಥೆಗಳಿಗೆ ವರದಿ ಮಾಡಲಾಯಿತು. ಈ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಅಂಗಾAಗ ಸಂಗ್ರಹಣೆಯ ಪ್ರಕ್ರಿಯೆ ಕೈಗೊಳ್ಳಲಾಯಿತು.
ಡೀನ್ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಡಾ. ಲೋಕೇಶ್ ಎ.ಜೆ., ಆಸ್ಪತ್ರೆಯ ಅಧೀಕ್ಷಕರಾದ ಡಾ. ಸೋಮಶೇಖರ್ ಹಾಗೂ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಡಾ. ನಂಜುAಡಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಐಸಿಯು ತಂಡದ ಡಾ. ನಿಶೀದ್ ಜೋಸೆಫ್ ಹಾಗೂ ನರ್ಸಿಂಗ್ ಅಧಿಕಾರಿ ಪವನ್ ಅವರು ರೋಗಿಯ ದೇಹದ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ನಿರಂತರ ಶ್ರಮಿಸಿದರು. ಇಂದು ಬೆಳಗಿನ ೨ ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆಯಲ್ಲಿ ಎರಡು ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಕಣ್ಣುಗಳ ಕಾರ್ನಿಯಾಗಳನ್ನು ಯಶಸ್ವಿಯಾಗಿ ಸಂಗ್ರಹಿಸಲಾಯಿತು. ಮೈಸೂರಿನಿಂದ ಆಗಮಿಸಿದ ಯೂರೋಸರ್ಜನ್ಗಳಾದ ಡಾ. ಸಚಿನ್ ಧಾರವಾಡ್ಕರ್ ಮತ್ತು ಡಾ. ವಿಜಯಕುಮಾರ್ ಮೂತ್ರಪಿಂಡ ಸಂಗ್ರಹಣೆ ನಡೆಸಿದರು. ಡಾ. ಅಭಿನಂದನ್ ಮತ್ತು ಡಾ. ಚಂದ್ರಶೇಖರ್ ಹೃದಯ ಕವಾಟಗಳನ್ನು, ಡಾ. ಶ್ರುತಿ ಮತ್ತು ತಂಡ ಕಾರ್ನಿಯಾಗಳನ್ನು ಸಂಗ್ರಹಿಸಿದರು. ನರ್ಸಿಂಗ್ ಸಿಬ್ಬಂದಿಯಾದ ಜಯಶ್ರೀ, ಅನಿಲ್ ಮತ್ತು ಮಂಜುನಾಥ್ ಹಾಗೂ ಹಿರಿಯ ನರ್ಸಿಂಗ್ ಅಧಿಕಾರಿಗಳಾದ ವಸಂತ್ ಮತ್ತು ಮಹೇಶ್ ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದರು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಅಂಗಾAಗ ಸಾಗಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಶಾಸಕರುಗಳೂ ಸಹಕರಿಸಿದರು.
ನಂತರ ಡಾಲು ಅವರ ಪಾರ್ಥಿವ ಶರೀರವನ್ನು “ವಾಕ್ ಆಫ್ ಆನರ್” ಮೂಲಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ನರ್ಸಿಂಗ್ ತಂಡ ದಾನಿಯ ಸೇವೆಯನ್ನು ಗೌರವಿಸಿದರು. ಕುಟುಂಬವನ್ನು ಸನ್ಮಾನಿಸಲಾಯಿತು. ಈ ಕುರಿತು ಮಾತನಾಡಿದ ಡೀನ್ ಡಾ. ಲೋಕೇಶ್ ಎ.ಜೆ., “ಇದು ಕೊಡಗು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಐತಿಹಾಸಿಕ ಕ್ಷಣ. ಅಂಗಾAಗ ದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ” ಎಂದು ಹೇಳಿದರು. ಭಾರತದಲ್ಲಿ ಅಂಗಾAಗಗಳ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಡಾಲು ಅವರ ಕುಟುಂಬದ ಈ ನಿರ್ಧಾರ ಅನೇಕ ಜೀವಗಳಿಗೆ ಹೊಸ ಆಶೆಯಾಗಿ ಪರಿಣಮಿಸಿದೆ.
ಡಾ ಧನಂಜಯ , ಡಾ. ನಿಶೀದ್ ಜೋಸೆಫ್ ಡಾ. ಅಯ್ಯಪ್ಪ,ಡಾ ಚೇತನ್, ಡಾ. ಪ್ರಮೋದ್, ಡಾ. ಅಮಿತಾ, ಡಾ. ಅಮೂಲ್ಯ, ಡಾ. ಅಕ್ಷತಾ, ಡಾ ಚಂದ್ರಶೇಖರ್, ಡಾ. ಕೃಪಾಲಿನಿ, ಡಾ ಆತೀಶ್, ಡಾ ಉಮೇಶ್ ಬಾಬು, ಡಾ ಕಿಶೋರ್ ಕುಮಾರ್, ಡಾ ಪ್ರಸನ್ನ, ಕೌನ್ಸಿಲರ್ಗಳಾದ ವಿನೋದ್ ಕುಮಾರ್, ಕಾರ್ತಿಕ್ , ಸ್ನಾತಕೋತ್ತರ ವೈದ್ಯರು, ಶುಶ್ರೂಷಕ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಗಳು ಸಹಕರಿಸಿದರು.