ಸಿದ್ದಾಪುರ, ಮೇ ೨೩: ಕಾಡಾನೆ ಕಾರ್ಯಾಚರಣೆ ಸಂದರ್ಭ ತಂಡವನ್ನು ಕಾಡಾನೆಗಳು ಬೆನ್ನಟ್ಟಿದ ಘಟನೆ ಗುಹ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ. ಗುಹ್ಯ ಗ್ರಾಮ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡು ಸುತ್ತಮುತ್ತ ಪ್ರದೇಶಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡಿತು.

ಈ ಸಂದರ್ಭ ಗುಂಪಿನಲ್ಲಿದ್ದ ಕಾಡಾನೆಗಳು ಆಕ್ರೋಶಗೊಂಡು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಕಾಡಾನೆ ದಾಳಿಯನ್ನು ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಕಾಫಿ ತೋಟದೊಳಗೆ ಓಡಿ ಹೋಗಿ ಪಾರಾಗಿದ್ದಾರೆ. ಗುಂಪಿನಲ್ಲಿದ್ದ ಬಹುತೇಕ ಕಾಡಾನೆಗಳು ಕಾಫಿ ತೋಟಗಳಿಂದ ಹೊರಕ್ಕೆ ತೆರಳಲು ಹಿಂದೇಟು ಹಾಕಿದವು. ಇದರಿಂದಾಗಿ ಒಂದು ಗುಂಪಿನ ಕಾಡಾನೆಗಳು ಗುಹ್ಯ ಗ್ರಾಮದಲ್ಲಿ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ನದಿ ತೀರದ ಬಳಿ ಉಳಿದುಕೊಂಡಿವೆ. ಕಾರ್ಯಾಚರಣೆ ಸಂದರ್ಭ ೫ ಮರಿ ಯಾನೆಗಳು ಸೇರಿದಂತೆ ೨೧ಕ್ಕೂ ಅಧಿಕ ಕಾಡಾನೆಗಳು ಕಂಡುಬAದಿತು ಎಂದು ತಿಳಿದುಬಂದವು. ಕಾಡಾನೆಗಳು ಕಾಫಿ ತೋಟದೊಳಗೆ ಸುತ್ತಾಡಿ ಕಾಡಿನತ್ತ ತೆರಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಫಲಗೊಂಡಿತು. ಆಹಾರವನ್ನು ಅರಿಸಿಕೊಂಡು ಕಾಡಿನಿಂದ ಬಂದಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ಹಲಸಿನ ಹಣ್ಣು ರುಚಿಯನ್ನು ಕಂಡುಕೊAಡಿದ್ದು ಕಾಡಿನತ್ತ ತೆರಳದಿರುವುದು ಕಾರ್ಯಾಚರಣೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಕಾರ್ಯಚರಣೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮತ್ತು ಮಡಿಕೇರಿ ವಿಭಾಗದ ಎ.ಸಿ.ಎಫ್. ಸೆಂದಿಲ್ ಉಪವಲಯ ಅರಣ್ಯ ಅಧಿಕಾರಿ ರಾಘವ, ಸಂಜೀತ್ ಸೋಮಯ್ಯ, ಶ್ರೀನಿವಾಸ್, ಸೇರಿದಂತೆ ೩೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

- ವಾಸು ಎ.ಎನ್.