ಮಡಿಕೇರಿ, ಮೇ ೨೩: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ತಾ. ೨೮ ರಂದು ನಡೆಯಲಿರುವ ಬೇಡು ಹಬ್ಬದ ಸಂದರ್ಭ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ವೇಷಧಾರಿಗಳು ದೇವಸ್ಥಾನದ ಹರಕೆ ತೀರಿಸಲು ಬರುತ್ತಾರೆ. ಈ ವೇಳೆ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಕಂಡುಬAದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಎಚ್ಚರಿಸಿದ್ದಾರೆ.

ಕೆಲವು ವೇಷಧಾರಿ ಭಕ್ತಾದಿಗಳು ವಿಪರೀತ ಮದ್ಯಪಾನ ಮಾಡಿ ಪಟ್ಟಣಗಳಲ್ಲಿ ಅಂಗಡಿ-ಮುAಗಟ್ಟುಗಳಿಗೆ ತೆರಳಿ ಹಣ ನೀಡುವಂತೆ ಒತ್ತಾಯಿಸುವುದು, ಸಾರ್ವಜನಿಕರನ್ನು ಹಾಗೂ ವಾಹನಗಳನ್ನು ಅಡ್ಡಗಟ್ಟುವುದು, ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ಮಾಲೀಕರೊಂದಿಗೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ನಿಂದಿಸುವ ಘಟನೆ ಕಂಡುಬAದಲ್ಲಿ ಸಂಬAಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.