ಮಡಿಕೇರಿ, ಮಾ.೩ : ಸ್ತಿçÃ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಅಮೋಘವಾದ ಕ್ರೀಡಾ ಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಅಂತರರಾಷ್ಟಿçÃಯ ಬಾಸ್ಕೆಟ್‌ಬಾಲ್ ಕ್ರೀಡಾಪಟು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಂಡೇಪAಡ ಪುಷ್ಪಾ ಕುಟ್ಟಣ್ಣ ಅಭಿಪ್ರಾಯಪಟ್ಟಿದ್ದಾರೆ.

ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರ ಕೊಡವ ಕುಟುಂಬಗಳ ನಡುವೆ ಏಪ್ರಿಲ್ ಮತ್ತು ಮೇ ತಿಂಗಳಿನÀಲ್ಲಿ ಮೂರ್ನಾಡು ಹಾಗೂ ಅರಮೇರಿಯಲ್ಲಿ ನಡೆಸಲಿರುವ ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವ ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-೨೦೨೬’ರ ವೆಬ್‌ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶಿಷ್ಟ ಮತ್ತು ಹೊಂದಾಣಿಕೆಯ ಕ್ರೀಡಾಕೂಟಗಳು ಕೊಡಗು ಹೊರತುಪಡಿಸಿದರೆ ದೇಶದ ಬೇರೆ ಯಾವ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇಶ ಸೇರಿದಂತೆ ಪ್ರಪಂಚದ ಎಲ್ಲಾ ಕಡೆಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ತಂಡಗಳಿರುತ್ತವೆ. ಒಂದಾಗಿ ಪಾಲ್ಗೊಳ್ಳಲು ಯಾವುದೇ ಕ್ರೀಡೆಯಲ್ಲಿಯೂ ಅವಕಾಶ ಇರುವುದಿಲ್ಲ. ಆದರೆ ಕೊಡಗಿನಲ್ಲಿ ಆಯೋಜಿಸುವ ಹಾಕಿ, ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾಕೂಟಗಳಲ್ಲಿ ಒಂದು ತಂಡವಾಗಿ ಪುರುಷರು ಹಾಗೂ ಮಹಿಳೆಯರು ಜೊತೆಯಾಗಿ ಪಾಲ್ಗೊಳ್ಳುತ್ತಾರೆ. ಇದು ಹೆಮ್ಮೆಯ ಬೆಳವಣಿಗೆ ಎಂದು ತಿಳಿಸಿದರು.

ಕೆಲವು ಸಮಯದ ಹಿಂದೆ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದರು. ಇದೀಗ ಕ್ರಿಕೆಟ್ ನಮ್ಮೆಯ ಆತಿಥ್ಯ ವಹಿಸಿರುವುದು ಕುಟುಂಬದ ಸಂಘಟನಾ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕ್ರೀಡಾಕೂಟಗಳÀ ಆಯೋಜನೆ ಅಷ್ಟು ಸುಲಭ ಸಾಧ್ಯವಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಒಗ್ಗಟ್ಟು ಇರುತ್ತದೆ ಎಂದು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾಶಾಲೆಗಳು ಇಲ್ಲದ ಕಾಲಘಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟç ಮತ್ತು ಅಂತರ್ ರಾಷ್ಟಿçÃಯ ಮಟ್ಟಕ್ಕೇರಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಉತ್ತಮ ಕಾರ್ಯವಾಗಿದೆ ಎಂದು ಡಾ.ಪುಷ್ಪಾ ಕುಟ್ಟಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ನೆರವು ಅಗತ್ಯ

ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಹಣಕಾಸಿನ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಕೊಡವ ಕುಟುಂಬಗಳ ಹಲವು ಮಂದಿ ಇಂದು ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಪಂದ್ಯಾವಳಿ ಆಯೋಜಿಸುವ ಕುಟುಂಬಕ್ಕೆ ಕೊಡವ ಉದ್ಯಮಿಗಳು ಆರ್ಥಿಕ ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಫುಟ್ಬಾಲ್ ಪಂದ್ಯಾವಳಿಯ ಬಳಿಕ ಇದೀಗ ಕ್ರಿಕೆಟ್ ಕ್ರೀಡಾಕೂಟ ಆಯೋಜನೆ ಮಾಡುತ್ತಿರುವುದು ಬೇತ್ರಿ ಮುಕ್ಕಾಟಿರ ಕುಟುಂಬದ ಒಗ್ಗಟ್ಟಿನ ಪ್ರತೀಕ ಎಂದು ಶ್ಲಾಘಿಸಿದರು.

ಪೋಷಕರು ತಮ್ಮ ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಉತ್ತಮ ಕ್ರೀಡಾಪಟು ರೂಪುಗೊಳ್ಳಲು ಸಾಧ್ಯವಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಿಕೊಂಡು ಬರುತ್ತಿರುವುದು ದೊಡ್ಡ ಸಾಧನೆಯಾಗಿದೆ. ಎಲ್ಲಾ ಕೊಡವ ಕುಟುಂಬಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಳ್ಳಬೇಕು. ಸೋಲು, ಗೆಲುವಿನ ಲೆಕ್ಕಾಚಾರ ಇಲ್ಲದೆಯೇ ಕ್ರೀಡೆಯಲ್ಲಿ ಒಂದಾಗಬೇಕು ಎಂದು ಮಾದಂಡ ತಿಮ್ಮಯ್ಯ ಕರೆ ನೀಡಿದರು. ಕ್ರಿಕೆಟ್ ಪಂದ್ಯಾಟದ ವೆಬ್‌ಸೈಟ್ ಬಿಡುಗಡೆ ಮಾಡುತ್ತಿರುವುದು ಜಿಲ್ಲೆಯ ಮಟ್ಟಿಗೆ ಹೊಸ ವಿಚಾರ ಎಂದು ಅಭಿಪ್ರಾಯಪಟ್ಟರು.

ವೆಬ್‌ಸೈಟ್ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಗಳ ಕುರಿತು ಅಜ್ಜೇಟಿರ ವಿಕ್ರಮ್ ಉತ್ತಪ್ಪ ಅವರು ವಿವರಿಸಿದರು. ಇದೇ ಸಂದರ್ಭ ಕ್ರಿಕೆಟ್ ನಮ್ಮೆಯ ಕುರಿತು ಮುಕ್ಕಾಟಿರ ಮೌನಿ ಅವರು ಬರೆದಿರುವ ಸಣ್ಣುವಂಡ ನಿಶ್ಮಾ ಅವರ ಕಂಠದಲ್ಲಿ ಮೂಡಿಬಂದಿರುವ ಹಾಡಿನ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು. ಮುಕ್ಕಾಟಿರ ರವಿ ಚೀಯಣ್ಣ ಸ್ವಾಗತಿಸಿ, ಕ್ರಿಕೆಟ್ ಪಂದ್ಯಾವಳಿಗೆ ಬೆಂಬಲ ಕೋರಿದರು. ಮುಕ್ಕಾಟಿರ ಸರಸು ನವೀನ್ ಪ್ರಾರ್ಥಿಸಿ, ಮೂಕಚಂಡ ಬೊಳ್ಳಮ್ಮ ಕಾರ್ಯಕ್ರಮ ನಿರೂಪಿಸಿದರು.

ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ, ಪಂದ್ಯಾವಳಿಯ ಕಾರ್ಯದರ್ಶಿ ಮುಕ್ಕಾಟಿರ ಪೊನ್ನಣ್ಣ, ಖಜಾಂಚಿ ಮುಕ್ಕಾಟಿರ ಗಣಪತಿ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಎನ್. ಕಾರ್ಸನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಕುಂಡ್ರAಡ ಎಂ. ಬೋಪಣ್ಣ, ಕಾಂತೂರು ಮೂರ್ನಾಡು ನಾಡು ತಕ್ಕರಾದ ಪಳಂಗAಡ ಮೇದಪ್ಪ, ಕೋಟೇರ ಮುತ್ತಣ್ಣ, ಮಡೆೆಯಂಡ ಚಂಗಪ್ಪ, ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರುಗಳು ಸೇರಿದಂತೆ ತಕ್ಕರು, ತಾಮನೆ ಪೊಮ್ಮಕ್ಕ, ಮುಕ್ಕಾಟಿರ ಹಾಗೂ ವಿವಿಧ ಕೊಡವ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.