ಚೆಯ್ಯಂಡಾಣೆ, ನ. ೩೦: ಕರಡ ಗ್ರಾಮದ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಮೂರನೇ ವರ್ಷದ ಕಡಿಯತ್ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಕೈಕಾಡು ತಂಡವನ್ನು ಚೇಲಾವರ ತಂಡ ೨-೧ ಗೋಲಿನಿಂದ ಸೋಲಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಕೈಕಾಡು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿತ ಫೈನಲ್ ಪಂದ್ಯ ರೋಚಕತೆ ಸೃಷ್ಟಿಸಿತು. ಮೊದಲಾರ್ದದಲ್ಲಿ ಕೈಕಾಡು ತಂಡದ ಆಟಗಾರ ಕುಶ ಪೆನಾಲ್ಟಿ ಕಾರ್ನರ್ ಅನ್ನು ೩ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿದರು. ಚೇಲಾವರ ತಂಡದ ಅತಿಥಿ ಆಟಗಾರ ವಚನ್ ೧೨ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಮಬಲ ಮಾಡಿದರು. ನಂತರ ಚೇಲಾವರ ತಂಡದ ಆಟಗಾರ ಅಚ್ಚಯ್ಯ ೧೪ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು. ಈ ಮೂಲಕ ೨-೧ ಗೋಲುಗಳ ಅಂತರದಲ್ಲಿ ಚೇಲಾವರ ಚಾಂಪಿಯನ್ ಸ್ಥಾನ ಪಡೆಯಿತು.
ಇದಕ್ಕೂ ಮೊದಲು ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಾಲಂಗಾಲ ತಂಡ ಕಿರುಂದಾಡು ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು. ನಾಲ್ಕನೇ ಸ್ಥಾನವನ್ನು ಕಿರುಂದಾಡು ಪಡೆದುಕೊಂಡಿತು.
ವೈಯಕ್ತಿಕ ಬಹುಮಾನ
ಪಂದ್ಯ ಪುರುಷ ಪ್ರಶಸ್ತಿಯನ್ನು ಚೇಲಾವರ ತಂಡದ ಚೇತನ್ ಚೀಯಣ್ಣ, ಬೆಸ್ಟ್ ಗೋಲ್ಕೀಪರ್ ಪ್ರಶಸ್ತಿ ಚೇಲಾವರ ತಂಡದ ಚಂಗಪ್ಪ, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿ ಕಿರುಂದಾಡು ತಂಡದ ವೆಂಕಿ, ಬೆಸ್ಟ್ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಕೈಕಾಡು ತಂಡದ ಕುಶ ಗೌಡ, ಬೆಸ್ಟ್ ಆಫ್ ಬ್ಯಾಕ್ ಪ್ರಶಸ್ತಿಯನ್ನು ಪಾಲಂಗಾಲ ತಂಡದ ಆಟಗಾರ ಸೋಮಯ್ಯ ಪಡೆದುಕೊಂಡರು.
ತೀರ್ಪುಗಾರರಾಗಿ ಕರವಂಡ ಅಪ್ಪಣ್ಣ, ಪಟ್ರಪಂಡ ಸಚಿನ್ ಮಂದಣ್ಣ, ಚಂದಪAಡ ಆಕಾಶ್, ಪಂದ್ಯಾಟದ ನಿರ್ದೇಶಕರಾಗಿ ಚೆಯ್ಯಂಡ ಲವ ಅಪ್ಪಚ್ಚು, ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಚೇನಂಡ ಸಂಪತ್ ಹಾಗೂ ವಿಲಿನ್ ಕಾರ್ಯನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮ
ಅಂತರರಾಷ್ಟಿçÃಯ ಮಾಜಿ ಹಾಕಿ ತೀರ್ಪುಗಾರ ಅಚ್ಚಕಾಳೆರ ಪಳಂಗಪ್ಪ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಆಟಗಾರರನ್ನು ಪ್ರೋತ್ಸಾಹಿಸಲು ಈ ರೀತಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಕ್ರೀಡಾ ಶಾಲೆಗೆ ಮಕ್ಕಳ ಸೇರ್ಪಡೆಗೆ ರಾಜ್ಯ ಹಾಕಿ ಅಸೋಸಿ ಯೇಷನ್ ಸಹಾಯ ಮಾಡುತ್ತಿದೆ. ಪೋಷ ಕರು ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಕೊಡವ ಹಾಕಿ ಅಕಾಡೆ ಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ, ಕೊಡವ ಹಾಕಿ ಅಕಾಡೆ ಮಿಯ ವತಿಯಿಂದ ಡಿ. ೨೬ ರಿಂದ ೩೦ ರವ ರೆಗೆ ೪ಐದನೇ ಪುಟಕ್ಕೆ (ಮೊದಲ ಪುಟದಿಂದ)
ಚಾAಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿಯನ್ನು ಮೂರ್ನಾಡಿನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಕಳೆದ ೨೫ ವರ್ಷಗಳಿಂದ ಕೊಡವ ಕುಟುಂಬಗಳು ಆಯೋಜಿಸಿದ್ದ ಕೊಡವ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ ಎಂದರು.
ದಾನಿ ನೆರ್ಪಂಡ ಸತೀಶ್ ಮಾತನಾಡಿ, ಹಾಕಿ ಜನಕ ಪಾಂಡAಡ ಕುಟ್ಟಪ್ಪ ಅವರು ಇದೇ ಮೈದಾನದಲ್ಲಿ ಆರಂಭಿಸಿದ ಕೊಡವ ಕೌಟುಂಬಿಕ ಹಾಕಿ ನಮ್ಮೆ ಜನಪ್ರಿಯವಾಗಿದೆ. ಕಡಿಯತ್ನಾಡ್ ಹಾಕಿ ಕಪ್ ಅದೇ ರೀತಿ ಜನಪ್ರಿಯವಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ ಮಾತನಾಡಿದರು. ಇದೆ ಸಂದರ್ಭ ಅಚ್ಚಕಾಳೆರ ಪಳಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ ಕ್ರೀಡಾ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಮುಕ್ಕಾಟಿರ ಕಿರಣ್, ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಸೇರಿದಂತೆ ಇನ್ನಿತರರು ಹಾಜರಿದ್ದರು. ಬೇಪಡಿಯಂಡ ವಿಯಾಂಕಾ ಪ್ರಾರ್ಥಿಸಿ, ಬೇಪಡಿಯಂಡ ವಿಲಿನ್ ಸ್ವಾಗತಿಸಿ, ವಂದಿಸಿದರು.
ಚಿತ್ರ, ವರದಿ : ಅಶ್ರಫ್