ಕಣಿವೆ, ನ. ೨೯: ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ರೋಟರಿ ಇಂರ್ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭ ನಡೆಯಿತು.
ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ, ಗೌಡ ಅಕಾಡೆಮಿ ಸದಸ್ಯ ಸಂದೀಪ್ ಪ್ರತಿಜ್ಞಾ ವಿಧಿ ಬೋಧಿಸಿ, ಇಂರ್ಯಾಕ್ಟ್ ಮೂಲಕ ವಿದ್ಯಾರ್ಥಿಗಳು ಅಂತರರಾಷ್ಟಿçÃಯ ಸಂಸ್ಥೆಯೊAದಿಗೆ ಕೈಜೋಡಿಸಿ ಮೇಲೆ ಬರಲು ಇದೊಂದು ಸದವಕಾಶ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂತದಿAದಲೇ ಸಾಮಾಜಿಕ ಕಾಳಜಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಶಾಲೆಗಳಲ್ಲಿ ಇಂರ್ಯಾಕ್ಟ್ ಘಟಕಗಳನ್ನು ತೆರೆಯುತ್ತಿದೆ ಎಂದು ಮಡಿಕೇರಿಯ ರೋಟರಿ ಮಿಸ್ಟ್ ಹಿಲ್ಸ್ ಇಂರ್ಯಾಕ್ಟ್ ಚೇರ್ಮ್ಯಾನ್ ಅನಂತಶಯನ ಹೇಳಿದರು.
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಯೊಂದಿಗೆ ಸಾಮಾಜಿಕ ಬದ್ಧತೆಯನ್ನು ಹುರಿದುಂಬಿಸುವ ಮೂಲಕ ಅವರನ್ನು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಇಂರ್ಯಾಕ್ಟ್ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲಿ ಎಂದು ಅನಂತಶಯನ ಕರೆಕೊಟ್ಟರು.
ಮಡಿಕೇರಿಯ ಸ್ತಿçà ರೋಗ ತಜ್ಞರಾದ ಡಾ. ಬಿ.ಕೆ. ರಾಜೇಶ್ವರಿ ನವೀನ್ ಮಹಿಳೆಯರಲ್ಲಿ ಗರ್ಭಕೋಶ ಕಂಠದಲ್ಲಿನ ಕ್ಯಾನ್ಸರ್ ತಡೆಗಟ್ಟುವ ಕುರಿತು ವಿಶೇಷವಾಗಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಮಹಿಳಾ ಪೋಷಕರಿಗೆ ಆರೋಗ್ಯ ಮಾಹಿತಿ ನೀಡಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ಕಾರ್ಯದರ್ಶಿ ಕಾರ್ಯಪ್ಪ, ಜ್ಞಾನಗಂಗಾ ವಸತಿ ಶಾಲೆಯ ಚೇರ್ಮ್ಯಾನ್ ಸುಧೀರ್, ಕಾರ್ಯದರ್ಶಿ ನಿಂಗಪ್ಪ, ಪ್ರಾಂಶುಪಾಲೆ ಎಸ್.ಎಂ. ಸತ್ಯ ಸುಲೋಚನಾ ಇದ್ದರು.
ಇಂರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳು
ರೋಟರಿ ಇಂರ್ಯಾಕ್ಟ್ ಕ್ಲಬ್ ಸಂಚಾಲಕರಾಗಿ ಶಿಕ್ಷಕಿ ಬಿ.ಬಿ. ವಿನಿತಾ, ಅಧ್ಯಕ್ಷರಾಗಿ ಉನ್ನತ್ ಸಾರಥ್ಯ, ಉಪಾಧ್ಯಕ್ಷರಾಗಿ ಜೆ. ಧುವಿತಾ, ಖಜಾಂಚಿಯಾಗಿ ಸೆರೇನಾ ದೇಚಮ್ಮ, ಕಾರ್ಯದರ್ಶಿಯಾಗಿ ಎ. ಹಿತೇನ್, ಜಂಟಿ ಕಾರ್ಯದರ್ಶಿಯಾಗಿ ಯಶಿಕಾ ರಾಜ್, ನಿರ್ದೇಶಕರಾಗಿ ಪಾರ್ವತಿ, ಹಂಸಿಕಾ, ಪುನರ್ವ, ಸಮರ್ಥ್, ಕೃತಿಕಾ ಹಾಗೂ ಸದಸ್ಯರಾಗಿ ಇತರೆ ೧೧ ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಶಿಕ್ಷಕಿ ವಿನಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ನಿರೂಪಿಸಿದರು. ರೊ. ಕಾರ್ಯಪ್ಪ ವಂದಿಸಿದರು.