ಮಡಿಕೇರಿ, ನ. ೧೪: ವಸತಿ ಕಲ್ಪಿಸಲು ಸರಕಾರ ವಿಫಲವಾಗಿದ್ದು, ೨೦೧೮ರಲ್ಲಿ ಮನೆ ಕಳೆದುಕೊಂಡ ನೆರೆಸಂತ್ರಸ್ತರಿಗೆ ಇದುವರೆಗೂ ವಸತಿ ನೀಡದೆ ನಿರ್ಲಕ್ಷö್ಯ ವಹಿಸಲಾಗುತ್ತಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮಡಿಕೇರಿ ತಾಲೂಕಿನ ಹಲವು ಗ್ರಾಮಗಳ ನಿವಾಸಿಗಳು ಮನೆ ಕಳೆದುಕೊಂಡಿದ್ದಾರೆ. ಅನೇಕ ನೈಜ ಫಲಾನುಭವಿಗಳಿಗೆ ಇದುವರೆಗೂ ಮನೆ ನೀಡುವಲ್ಲಿ ಸರಕಾರ, ಜಿಲ್ಲಾಡಳಿತ ವಿಫಲವಾಗಿದೆ. ಇಂದಿನವರೆಗೂ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳಿಗೆ ಸೂಕ್ತ ಉತ್ತರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಮನೆ ದೊರೆಯದ ೧೫೦ಕ್ಕೂ ಹೆಚ್ಚು ಮಂದಿ ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ನೆರೆಸಂತ್ರಸ್ತರಿಗೆ ನಿರ್ಮಿಸಿದ ಮನೆಗಳಲ್ಲಿ ಹಲವು ಖಾಲಿ ಇವೆ. ಜಂಬೂರು, ಮಡಿಕೇರಿ ಆರ್‌ಟಿಓ ಕಚೇರಿ ಬಳಿ ಹಾಗೂ ಮದೆಯಲ್ಲಿರುವ ಮನೆಗಳನ್ನು ಇವರಿಗೆ ಹಂಚಿಕೆ ಮಾಡುವ ಕೆಲಸ ಆಗಬೇಕು. ಇತ್ತೀಚಿಗೆ ಫಲಾನುಭವಿ ಒಬ್ಬರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಅಧಿಕಾರಿಗಳು ಹಿಂದಕ್ಕೆ ನೀಡಿದ್ದಾರೆ. ಇದರೊಂದಿಗೆ ಅನೇಕ ವಸತಿ ರಹಿತರು ಹಲವು ವರ್ಷಗಳಿಂದ ವಸತಿಗಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಒಂದು ಮನೆಯನ್ನು ನೀಡಲು ಸಾಧ್ಯವಾಗಿಲ್ಲ. ಸೂಕ್ತ ಕ್ರಮವಹಿಸದಿದ್ದಲ್ಲಿ ವಸತಿ ರಹಿತರನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಅವರು, ಜನಪ್ರತಿನಿಧಿಗಳು ಜನರ ಅಹವಾಲು ಆಲಿಸುತ್ತಿಲ್ಲ, ಸರಕಾರ ಇದ್ದು, ಇಲ್ಲದ ಪರಿಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು. ನೆರೆ ಸಂತ್ರಸ್ತೆ ರಾಧಾ ಮಾತನಾಡಿ, ೨೦೧೮ರಲ್ಲಿ ೨ನೇ ಮೊಣ್ಣಂಗೇರಿಯ ತನ್ನ ಮನೆ ಸಂಪೂರ್ಣ ಬಿದ್ದಿದೆ. ೫ನೇ ಪುಟಕ್ಕೆ (ಮೊದಲ ಪುಟದಿಂದ) ಆದರೆ, ಇದುವರೆಗೂ ಮನೆ ಮಂಜೂರಾತಿಯಾಗಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದರು.

ಬೆಟ್ಟತ್ತೂರು ಬಲೆಕಂಡಿ ಹಾಡಿ ನಿವಾಸಿ ಕೆ.ಎ. ಸೋಮಯ್ಯ ಮಾತನಾಡಿ, ಕುಡಿಯ ಜನಾಂಗ ವಾಸವಿರುವ ನಮ್ಮ ಹಾಡಿಗೆ ಇದುವರೆಗೂ ವಿದ್ಯುತ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಕತ್ತಲಲ್ಲಿ ವಾಸ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅರಣ್ಯ ಇಲಾಖೆಯ ಅಡ್ಡಿಯೂ ಇರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಬೆಟ್ಟತ್ತೂರಿನ ಹಾಡಿ ಪರಿಸ್ಥಿತಿಗಳು ಇದೇ ರೀತಿ ಇದೆ. ಕಳೆದ ಚುನಾವಣೆ ಸಂದರ್ಭ ವಿದ್ಯುತ್ ಸಂಪರ್ಕ ಕಲ್ಪಿಸಲೆಂದು ವಿದ್ಯುತ್ ಕಂಬಗಳನ್ನು ತಂದು ಹಾಕಲಾಗಿತ್ತು. ಚುನಾವಣೆ ಮುಗಿದ ತಕ್ಷಣ ಅದನ್ನು ಕೊಂಡೊಯ್ಯಲಾಗಿದೆ ಎಂದು ದೂರಿದರು.

ಪ್ರಾಕೃತಿಕ ವಿಕೋಪದಲ್ಲಿ ತನ್ನ ಮಗಳು ಮಂಜುಳಾ ಮೃತಪಟ್ಟಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ. ನಾಪತ್ತೆ ಪ್ರಕರಣ ದಾಖಲಾದ ಕಾರಣ ಇಂದಿನ ತನಕ ಮರಣ ದೃಢೀಕರಣ ಪತ್ರ ನೀಡಿಲ್ಲ. ಇದರಿಂದ ಮಂಜುಳಾ ಖಾತೆಯಲ್ಲಿರುವ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ತನ್ನ ಮೂರು ಮಕ್ಕಳ ಪೈಕಿ ಒಬ್ಬರಿಗೆ ಸರಕಾರಿ ಉದ್ಯೋಗ ಕಲ್ಪಿಸಲಾಗುವುದು ಎಂದು ಹಿಂದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಅದು ಕೂಡ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ನಿವೇಶನ ರಹಿತರಾದ ಮಡಿಕೇರಿಯ ಜಯ, ಪದ್ಮ, ಕೃಷಿಕ ಶಾಂತೆಯAಡ ಬೋಪಯ್ಯ ಹಾಜರಿದ್ದರು.