ಮಡಿಕೇರಿ, ನ. ೧೪: ವಿ. ಬಾಡಗದ ೧೧ ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದಿAದ ಎಲ್ಲಾ ರೀತಿಯ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ದೊರೆಯಲಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿತ ೪ನೇ ವರ್ಷದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
೪ನೇ ವರ್ಷಕ್ಕೆ ಪಂದ್ಯಾವಳಿ ಕಾಲಿಟ್ಟಿರುವುದು ಶ್ಲಾಘನೀಯ ವಿಚಾರ. ನಿರಂತರವಾಗಿ ಕಾರ್ಯಕ್ರಮ ನಡೆಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾರಂಭದಲ್ಲಿರುವ ಆಸಕ್ತಿ ನಂತರದಲ್ಲಿ ಆಯೋಜಕರು ಕಳೆದುಕೊಳ್ಳುತ್ತಾರೆ. ಆದರೆ, ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಶ್ರಮವಹಿಸಿ ವರ್ಷದಿಂದ ವರ್ಷಕ್ಕೆ ಅದ್ದೂರಿತನದಿಂದ ಕ್ರಿಕೆಟ್ ಆಯೋಜಿಸುತ್ತಿರುವುದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತಿದೆ. ಕ್ರೀಡೆ ಕೊಡವ ಜನಾಂಗದ ಸಂಸ್ಕೃತಿಯ ಭಾಗವಾಗಿದೆ. ಆಟೋಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯ ವಿವಿಧೆಡೆ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಪೂರಕವಾದ ಉತ್ತಮ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶ್ಲಾಘಿಸಿದರು. ೫ನೇ ಪುಟಕ್ಕೆ
(ಮೊದಲ ಪುಟದಿಂದ) ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ರಾಜ್ಯ ಸರಕಾರ ಕೊಡಗಿನಲ್ಲಿ ಕ್ರೀಡಾ ಕ್ಷೇತ್ರದ ಬೇಡಿಕೆಯನ್ನು ಪೂರೈಸುತ್ತಿದೆ. ವಿ. ಬಾಡಗದಲ್ಲಿ ೧೧ ಎಕರೆ ಜಾಗ ಗುರುತಿಸಿ ಕ್ರೀಡಾ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ಕಾರ್ಯಗತ ಹಂತದಲ್ಲಿದೆ. ಇದರಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಅಗತ್ಯ ತರಬೇತಿಯೊಂದಿಗೆ ಸುಸಜ್ಜಿತ ಮೈದಾನ ನಿರ್ಮಾಣ ಮಾಡಲಾಗುವುದು. ಕೊಡಗು ಜಿಲ್ಲೆಯಲ್ಲಿ ಅನೇಕರಿಗೆ ಗನ್ ಶೂಟಿಂಗ್ ಮೇಲೆ ಆಸಕ್ತಿ ಇದೆ. ಅಂತರರಾಷ್ಟಿçÃಯ ಮಟ್ಟದಲ್ಲಿ ಶೂಟಿಂಗ್ ಪಟುಗಳು ಹೊರಹೊಮ್ಮುವ ಸಾಧ್ಯತೆ ಇರುವ ಹಿನ್ನೆಲೆ ತರಬೇತಿ ಕೇಂದ್ರದಲ್ಲಿ ಶೂಟಿಂಗ್ ಪಾಯಿಂಟ್ ಜೊತೆಗೆ ಅಥ್ಲೆಟಿಕ್ ಮೈದಾನ ಸೇರಿದಂತೆ ಅನೇಕ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಲಾಗುವುದು. ಕ್ರೀಡೆಗೆ ಕೊಡಗು ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಇಲ್ಲಿನ ಮೈದಾನ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಪ್ರತಿಭಾನ್ವಿತರಿಗೆ ಅವಕಾಶ ದೊರೆಯಬೇಕೆಂಬ ಅಭಿಲಾಷೆ ಹೊಂದಿದ್ದೇನೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಘ ಸಂಸ್ಥೆಗಳಿಗೆ ಸದಾ ಬೆಂಬಲ ನೀಡುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದೆ ಕಾಣತಂಡ ಬೀನಾ ಜಗದೀಶ್, ಸಿಗ್ಮ ನೆಟ್‌ವರ್ಕ್ನ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಶರಣ್ ಪೂಣಚ್ಚ ಸೇರಿದಂತೆ ಅಸೋಸಿಯೇಷನ್ ಪ್ರಮುಖರು ಹಾಜರಿದ್ದರು.
ಇದೇ ಸಂದರ್ಭ ಪುತ್ತಾಮನೆ ವಿದ್ಯಾ ಜಗದೀಶ್ ಸಾಹಿತ್ಯ ಬರೆದು, ಹಾಡಿರುವ ಕೊಡವ ಕ್ರಿಕೆಟ್ ಲೀಗ್ ಕುರಿತ ಕೊಡವ ಗೀತೆಯನ್ನು ಬಿಡುಗಡೆ ಮಾಡಲಾಯಿತು.
ತಾ. ೧೬ರವರಗೆ ಲೀಗ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಅಂಜಿಗೇರಿ ನಾಡ್, ಡೀ ಕೋಚ್, ಟೀಮ್ ಕೊಡವ ಟ್ರೆöÊಬ್, ಕೊಡವ ನೈಟ್ಸ್, ಕೊಡವ ವಾರಿಯರ್ಸ್, ಕೊಡವಮ್ಮೆ ಕಲ್ಟ್÷್ಸ, ಎಜೆ ಬಾಯ್ಸ್, ಟೀಮ್ ಮಹಾಗುರು, ಟೀಮ್ ಭಗವತಿ, ಮರ್‌ನಾಡ್ ಯುನೈಟೈಡ್, ಎಂಟಿಬಿ ರಾಯಲ್ಸ್ ಮತ್ತು ಕೊಡವ ಬಂಬೊAಗ ಒಳಗೊಂಡAತೆ ೧೨ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಮುಕ್ಕಾಟಿರ ಮಾನಸ ದೀಪಕ್ ಸ್ವಾಗತಿಸಿ, ಬಾಳೆಯಂಡ ದಿವ್ಯಾ ನಿರೂಪಿಸಿ, ವಂದಿಸಿದರು.