ಗೋಣಿಕೊಪ್ಪಲು, ನ. ೧೩: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆಯ ಅಂಗವಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯಿAದ ವಾಣಿಜ್ಯ ನಗರ ಗೋಣಿಕೊಪ್ಪಲುವಿನವರೆಗೆ ಏಕತಾ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ ೧೦ ಗಂಟೆಗೆ ಪೊನ್ನಂಪೇಟೆಯ ಬಸ್ ನಿಲ್ದಾಣಕ್ಕೆ ಆಗಮಿಸಿದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಾಗಮಗೊಳ್ಳುವ ಮೂಲಕ ಪಾದಯಾತ್ರೆ ಆರಂಭಿಸಿದರು. ಸಾವಿರಾರು ವಿದ್ಯಾರ್ಥಿಗಳೊಂದಿಗೆ ನೂರಾರು ಸಂಖ್ಯೆಯ ನಾಗರಿಕರು ಸರತಿ ಸಾಲಿನಲ್ಲಿ ಹೆಜ್ಜೆ ಹಾಕಿದರು.

ಪಾದಯಾತ್ರೆಗೆ ಕೊಡಗು ಮೈಸೂರು ಕ್ಷೇತ್ರದ ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸರ್ದಾರ್ ವಲ್ಲಭಭಾಯಿಪಟೇಲ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಸಂಸದರೊAದಿಗೆ ಕೊಡಗು ಜಿಲ್ಲಾ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಮಂಡೇಪAಡ ಅಪ್ಪಚ್ಚುರಂಜನ್, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್, ಜಿಲ್ಲಾ ಯೂನಿಯನ್ ಬ್ಯಾಂಕ್‌ನ ಅಧ್ಯಕ್ಷರಾದ ಪಳೆಯಂಡ ರಾಬಿನ್ ದೇವಯ್ಯ. ಸಮಾಜ ಸೇವಕರಾದ ನೆಲ್ಲಿರ ಚಲನ್ ಕುಮಾರ್, ರವಿ ಕಾಳಪ್ಪ, ಕುಲ್ಲಚಂಡ ಬೋಪಣ್ಣ, ಗುಮ್ಮಟ್ಟಿರ ಕಿಲನ್ ಗಣಪತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.

ಏಕತಾ ಪಾದಯಾತ್ರೆ ಸಾಗಿ ಬರುತ್ತಿದ್ದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ನಾಗರಿಕರು ಏಕತಾ ಯಾತ್ರೆಯನ್ನು ವೀಕ್ಷಣೆ ಮಾಡಿದರು. ರಾಷ್ಟçಮಟ್ಟದಲ್ಲಿ ಭಾರತದ ಯುವಜನತೆ ಏಕತೆ ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಸಾಧನೆಯನ್ನು ಎಚ್ಚರಗೊಳಿಸುವ ಸಂದೇಶ ಸಾರಲಾಯಿತು. ಪಾದಯಾತ್ರೆ ಅಭಿಯಾನದ ಮೂಲಕ ಯುವ ಜನರು ಏಕ್ ಭಾರತ್ ಆತ್ಮ ನಿರ್ಭರ್ ಭಾರತದ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರೋತ್ಸಾಹಿಸುವುದು ಅಲ್ಲದೆ ನಶಾಮುಕ್ತ ಭಾರತ್ ಪ್ರತಿಜ್ಞೆಯನ್ನು ಸ್ವೀಕರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೊಡಗು ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಏಕತಾ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಭಾರತ ಸರ್ಕಾರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಮೂಲಕ ‘ವಿಕಸಿತ ಭಾರತ್ ಪಾದಯಾತ್ರೆ’ ಯನ್ನು ರಾಷ್ಟçವ್ಯಾಪ್ತಿ ಆಯಾಯ ಕ್ಷೇತ್ರದ ಸಂಸದರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದ್ದು, ಕೊಡಗು ಮೈಸೂರು ಕ್ಷೇತ್ರದಲ್ಲಿ ಸಂಸದರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದಾಳತ್ವದಲ್ಲಿ ರಾಷ್ಟಿçÃಯ ಹೆಮ್ಮೆಯನ್ನು ಬೆಳೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ರೇಖಾ ಶ್ರೀಧರ್ ಪ್ರಾರ್ಥಿಸಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ಏಕತಾ ಪಾದಯಾತ್ರೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ಪ್ರಶಂಸನಾ ಪತ್ರ ವಿತರಿಸಿದರು. ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಕೊಡಗಿನ ಸಾಂಪ್ರದಾಯಿಕ ಕೋಲಾಟ, ಕತ್ತಿಯಾಟ್ ಹಾಗೂ ಉಮ್ಮತ್ತಾಟ್ ಪ್ರದರ್ಶನ ಮೂಡಿ ಬಂದವು. ೪ಐದÀನೇ ಪು (ಮೊದಲ ಪುಟದಿಂದ) ಮಾಜಿ ಶಾಸಕ ಅಪ್ಪಚ್ಚುರಂಜನ್‌ರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು.

ಸ್ವರಾಜ್ಯಕ್ಕಾಗಿ ಹೋರಾಟ

ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪ ಸಮಾರಂಭದಲ್ಲಿ ಕೊಡಗು ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ ಕನಸು ನನಸಾಗಿಸುವತ್ತ ಯುವಜನತೆ ಮುಂದೆ ಬರಬೇಕು. ಸ್ವಾತಂತ್ರö್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರೊAದಿಗೆ ಸ್ವರಾಜ್ಯಕ್ಕಾಗಿ ಹೋರಾಟ ಮಾಡಿದವರು ಉಪ ಪ್ರಧಾನಿಯಾದ ಸಂದರ್ಭ ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.

ರೈತರ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸರ್ದಾರ್ ಎಂಬ ಬಿರುದು ಇವರ ಪಾಲಾಯಿತು. ಉಕ್ಕಿನ ಮನುಷ್ಯನ ಕ್ರಾಂತಿಕಾರಕ ನಿರ್ಣಯಗಳು ಗಮನ ಸೆಳೆದಿದ್ದವು. ಭಾರತಕ್ಕೋಸ್ಕರ ಯುವಜನತೆ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ಅಭಿವೃದ್ದಿಗೆ ಸಹಕರಿಸಬೇಕು. ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು ತಮ್ಮ ಕೊನೆಯ ಉಸಿರಿನವರೆಗೂ ಏಕತೆಗಾಗಿ ಹೋರಾಟ ಮಾಡಿದವರು. ಅಂತಹ ಹೋರಾಟಗಾರರನ್ನು ಇಂದು ನಾವು ನೆನೆಯುತ್ತ ಎಲ್ಲೆಡೆ ಇವರ ಜನ್ಮಾದಿನಾಚರಣೆಯನ್ನು ಏಕತಾ ದಿನವನ್ನಾಗಿ ಸಂಭ್ರಮಿಸುತ್ತಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು ಉಪ ಪ್ರಧಾನಿಗಳಾಗಿ ಗೃಹ ಇಲಾಖೆಯ ದೊಡ್ಡ ಜವಾಬ್ದಾರಿನಿಭಾಯಿಸಿದ್ದರು. ಅಖಂಡ ಭಾರತದ ಕನಸು ಕಂಡವರಾಗಿದ್ದರು. ಪ್ರಧಾನಿ ವಿ.ಪಿ. ಸಿಂಗ್‌ರವರ ಅವಧಿಯಲ್ಲಿ ಸರ್ದಾರ್‌ವಲ್ಲಭಭಾಯಿ ಪಟೇಲ್‌ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಇವರ ಮಾರ್ಗದಲ್ಲಿ ಯುವಜನತೆ ಮುಂದೆ ಸಾಗುವಂತೆ ಕರೆ ನೀಡಿದರು.

ಮತ್ತೋರ್ವ ಅತಿಥಿಗಳಾದ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ ಒಕ್ಕೂಟ ರಚನೆಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಉತ್ಪಾದನೆಗೆ ಪ್ರೋತ್ಸಾಹ ಸಿಗಬೇಕಾದಲ್ಲಿ ಯುವಜನತೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.

ವೇದಿಕೆಯಲ್ಲಿ ಕಾರ್ಯಕ್ರಮ ಸಂಚಾಲಕರುಗಳಾದ ಕುಲ್ಲಚಂಡ ಪಿ. ಬೋಪಣ್ಣ, ವಿ.ಕೆ. ಲೋಕೇಶ್, ಮಡಿಕೇರಿ, ನಗರಸಭೆ ಅಧ್ಯಕ್ಷೆ ಕಲಾವತಿ, ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಯುವ ಅಧಿಕಾರಿಗಳು, ಮೈ ಭಾರತ್‌ನ ಕೆಟಿಕೆ ಉಲ್ಲಾಸ್, ಸುವಿನ್ ಗಣಪತಿ, ಯಮುನಾ ಚಂಗಪ್ಪ ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಜು ಗಣಪತಿ ಸೇರಿದಂತೆ ಸುತ್ತಮುತ್ತಲಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಬಂದೋಬಸ್ತ್ ವಹಿಸಿದ್ದರು.